Breaking News

ನೀವೂ ಚೆನ್ನೈನವರಾಗಿ ತಮಿಳರಿಗೆ ಅವಮಾನ ಮಾಡಿದ್ದೀರ…ಸಮಂತಾ ವಿರುದ್ಧ ಸಿಡಿದೆದ್ದ ಅಭಿಮಾನಿಗಳು

Advertisement

ಸಿನಿಮಾಗಳಲ್ಲಿ ಆಕ್ಷೇಪಾರ್ಹ ದೃಶ್ಯಗಳಿದ್ದರೆ ಅಥವಾ ಧರ್ಮದ ಅವಹೇಳನ ಮಾಡಿದರೆ ಯಾರೂ ಸಹಿಸುವುದಿಲ್ಲ. ಕನ್ನಡ, ತಮಿಳು, ತೆಲುಗು ಮಾತ್ರವಲ್ಲದೆ ಬಹುತೇಕ ಎಲ್ಲಾ ಭಾಷೆಯ ಚಿತ್ರರಂಗದಲ್ಲೂಇಂತಹ ಘಟನೆಗಳು ಸಾಕಷ್ಟು ನಡೆದಿವೆ. ಉದಾಹರಣೆಗೆ, ಇತ್ತೀಚೆಗೆ ಬಿಡುಗಡೆಯಾದ ಧ್ರುವ ಸರ್ಜಾ ಅಭಿನಯದ ‘ಪೊಗರು’ ಸಿನಿಮಾದಲ್ಲಿ ಸಮುದಾಯವೊಂದಕ್ಕೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಆ ಸಮುದಾಯದವರು ದೊಡ್ಡ ಪ್ರತಿಭಟನೆಯನ್ನೇ ಮಾಡಿದ್ದರು. ನಂತರ ನಿರ್ದೇಶಕ ನಂದಕಿಶೋರ್, ನಾಯಕ ಧ್ರುವ ಸರ್ಜಾ ಹಾಗೂ ಇನ್ನಿತರರು ಸಮುದಾಯದ ಮುಖಂಡರ ಬಳಿ ಕ್ಷಮೆ ಕೇಳಿದ್ದರು. ಅಲ್ಲದೆ ಸಿನಿಮಾಗಳಲ್ಲಿ ಕೆಲವೊಂದು ದೃಶ್ಯಗಳನ್ನು ಕತ್ತರಿಸಿ ಮರು ಬಿಡುಗಡೆ ಮಾಡಲಾಗಿತ್ತು. ಇಂತಹ ಸಾಕಷ್ಟು ಉದಾಹರಣೆಗಳಿವೆ. ಇದೀಗ ಹಿಂದಿ ವೆಬ್ ಸೀರೀಸ್​​​​ವೊಂದರ ಮೇಲೆ ತಮಿಳರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸೀರೀಸ್​​​​ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಮಂತಾ ಅಕ್ಕಿನೇನಿ ವಿರುದ್ಧ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಮನೋಜ್ ಬಾಜ್​ಪೇಯಿ ಹಾಗೂ ಸಮಂತಾ ಅಕ್ಕಿನೇನಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ದಿ ಫ್ಯಾಮಿಲಿ ಮ್ಯಾನ್ -2’ ವಿರುದ್ಧ ಕೆಲವರು ಸಿಡಿದೆದ್ದಿದ್ಧಾರೆ. 2019 ಸೆಪ್ಟೆಂಬರ್​​​ನಲ್ಲಿ ‘ದಿ ಫ್ಯಾಮಿಲಿ ಮ್ಯಾನ್’ ಮೊದಲ ಭಾಗ ಬಿಡುಗಡೆಯಾಗಿತ್ತು. ಇದರಲ್ಲಿ ಮನೋಜ್​ ಬಾಜ್​ಪೇಯಿ ಜೊತೆ ಪಂಚಭಾಷಾ ನಟಿ ಪ್ರಿಯಾಮಣಿ ನಟಿಸಿದ್ದರು. ಮೊದಲ ಭಾಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಕಾರಣದಿಂದ ಭಾಗ 2 ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸೀರೀಸ್​​​ ಅಮೆಜಾನ್ ಪ್ರೈಂನಲ್ಲಿ ಇದೇ ವರ್ಷ ಜೂನ್ 3 ರಂದು ಪ್ರಸಾರವಾಗುತ್ತಿದೆ.

ಕೆಲವು ದಿನಗಳ ಹಿಂದೆ ಈ ಸೀರೀಸ್​​​​​ ಟ್ರೇಲರ್ ಬಿಡುಗಡೆಯಾಗಿತ್ತು. ಆದರೆ ಈ ಟ್ರೇಲರ್​​​​​​​​​ ನೋಡಿ ತಮಿಳರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸೀರೀಸ್​​​​​ನಲ್ಲಿ ತಮಿಳರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪ ಮಾಡಲಾಗಿತ್ತು. ಇದಾದ ನಂತರ ಟ್ರೇಲರ್​ ಎಡಿಟ್ ಕೂಡಾ ಮಾಡಲಾಗಿತ್ತು. ಆದರೂ ಈ ಸೀರಿಸ್ ಬ್ಯಾನ್ ಮಾಡುವಂತೆ ಕೆಲವರು ಒತ್ತಾಯಿಸುತ್ತಿದ್ಧಾರೆ. ಜೊತೆಗೆ ಸಮಂತಾ ವಿರುದ್ಧ ಕೂಡಾ ತಮಿಳರು ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ. ಸಮಂತಾ ಚೆನ್ನೈನಲ್ಲಿ ಹುಟ್ಟಿ ಬೆಳೆದವರು. ಆದರೂ ತಾವು ನಟಿಸುತ್ತಿರುವ ಸೀರೀಸ್​​​ನಲ್ಲಿ ತಮಿಳಿರಿಗೆ ಇಷ್ಟು ಅಪಮಾನವಾಗುತ್ತಿದ್ದರೂ ನೋಡಿಕೊಂಡು ಏಕೆ ಸುಮ್ಮನಿದ್ದೀರಿ, ನಿಮಗೆ ನಾಚಿಕೆಯಾಗಬೇಕು ಎಂದು ಸಮಂತಾ ಅವರನ್ನು ಅಭಿಮಾನಿಗಳೇ ಪ್ರಶ್ನಿಸಿದ್ಧಾರೆ. ಈ ಪ್ರತಿಭಟನೆ ಮುಂದುವರೆದಿದ್ದು ಈಗ ಟ್ವಿಟ್ಟರ್​​​​ನಲ್ಲಿ ShameOnYouSamantha ಟ್ರೆಂಡ್ ಆಗಿದೆ. ಆದರೆ ಸಮಂತಾ ಇದುವರೆಗೂ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

Advertisement

ಮನೋಜ್​ ಬಾಜ್​ಪೇಯಿ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ”ಈ ಸೀರೀಸ್​​​​ನಲ್ಲಿ ನಾವು ಯಾರಿಗೂ ಅವಮಾನಿಸಿಲ್ಲ. ಈ ಸೀಸನ್ ನೋಡಿದರೆ ಎಲ್ಲರೂ ಹೆಮ್ಮೆ ಪಡುತ್ತಾರೆ. ಸೀರೀಸ್​ ಬಿಡುಗಡೆಯಾದ ನಂತರ ಅದನ್ನು ನೋಡಿದರೆ ನಿಮಗೆ ಎಲ್ಲಾ ಅರ್ಥವಾಗುತ್ತದೆ” ಎಂದು ಹೇಳಿದ್ದಾರೆ. ರಾಜ್​​​​​​​, ಡಿಕೆ ಹಾಗೂ ಸುಮನ್ ಕುಮಾರ್ ಈ ಸೀರೀಸ್​​​​ಗ ಕಥೆ ಬರೆದಿದ್ದು ರಾಜ್​​​​​ ಹಾಗೂ ಡಿಕೆ ಇದನ್ನು ನಿರ್ದೇಶಿಸಿದ್ದಾರೆ. ಮನೋಜ್ ಬಾಜ್​ಪೇಯಿ, ಸಮಂತಾ ಅಕ್ಕಿನೇನಿ, ಪ್ರಿಯಾಮಣಿ, ಶರೀಬ್ ಹಶ್ಮಿ, ನೀರಜ್ ಮಾಧವ್, ಪವನ್ ಛೋಪ್ರಾ, ಗುಲ್ ಪನಾಗ್ ಹಾಗೂ ಇನ್ನಿತರರು ಈ ಸೀರೀಸ್​​​​ನಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

-ರಕ್ಷಿತ ಕೆ.ಆರ್. ಸಾಗರ

Advertisement
Advertisement

Advertisement

About RJ News Kannada

Check Also

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

Advertisement ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, …

Leave a Reply

Your email address will not be published.

Recent Comments

No comments to show.