Breaking News

ನೀವು ಈ ಖ್ಯಾತ ನಟನೊಂದಿಗೆ ಸೆಲ್ಫಿ ತೆಗೆಸಿಕೊಳ್ಳಬೇಕಾ…..ಹಾಗಿದ್ದಲ್ಲಿ ಈ ಮಹಿಳೆ ಮಾಡಿದಂತೆ ನೀವೂ ಮಾಡಬೇಕು…ವಿಡಿಯೋ ನೋಡಿ..!

Advertisement

ತೆರೆ ಮೇಲೆ ನೋಡುವ ಸೆಲಬ್ರಿಟಿಗಳನ್ನು ಒಮ್ಮೆ ನೇರವಾಗಿ ನೋಡಬೇಕು, ಅವರೊಂದಿಗೆ ಮಾತನಾಡಬೇಕು, ಶೇಕ್​ ಹ್ಯಾಂಡ್ ನೀಡಬೇಕು, ಸೆಲ್ಫಿ ತೆಗೆಸಿಕೊಳ್ಳಬೇಕು ಎಂಬುದು ಪ್ರತಿ ಅಭಿಮಾನಿಗಳ ಕನಸಾಗಿರುತ್ತದೆ. ಆದರೆ ಸೆಲಬ್ರಿಟಿಗಳು ಅಷ್ಟು ಸುಲಭವಾಗಿ ಎಲ್ಲರಿಗೂ ಸಿಗುವಂತವರಲ್ಲ. ಏರ್​​ಪೋರ್ಟ್​ನಲ್ಲಿ ಫ್ಲೈಟ್ ಹತ್ತಿ ಇಳಿದರೆ ಉಳಿದಂತೆ ಅವರ ಪ್ರಯಾಣ ಕಾರಿನಲ್ಲೇ. ಇನ್ನು ಸಿನಿಮಾ ಸ್ಟಾರ್​​​ಗಳಾದರೆ ಚಿತ್ರೀಕರಣದ ಸ್ಥಳ, ಕಾರ್ಯಕ್ರಮ, ಮನೆ ಬಿಟ್ಟು ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳುವುದು ಅಪರೂಪ. ಒಂದು ವೇಳೆ ಕಂಡರೂ ಅವರ ಬಳಿ ಹೋಗಿ ಮಾತನಾಡಿಸಿ ಸೆಲ್ಫಿ ತೆಗೆಸಿಕೊಳ್ಳಲು ಅವಕಾಶವಾಗುವುದಿಲ್ಲ. ಎಷ್ಟೋ ನಟ-ನಟಿಯರಿಗೆ ಬ್ಯುಸಿ ಶೆಡ್ಯೂಲ್ ನಡುವೆ ಅಭಿಮಾನಿಗಳ ಮಾತಿಗೆ ಪ್ರತಿಕ್ರಿಯಿಸಿ ಅವರಿಗೆ ಸೆಲ್ಫಿ ನೀಡುವಷ್ಟೂ ಸಮಯವಿರುವುದಿಲ್ಲ. ಆದರೆ ಇಲ್ಲೊಬ್ಬ ನಟ ಇದ್ದಾರೆ. ಇವರು ನಿಮ್ಮೆಲ್ಲರೊಂದಿಗೆ ನಿಂತು ಸೆಲ್ಫಿ ತೆಗೆಸಿಕೊಳ್ಳಲು ರೆಡಿ ಇದ್ಧಾರೆ. ಆದರೆ ಅದಕ್ಕಾಗಿ ನೀವು ಒಂದು ಕೆಲಸ ಮಾಡಬೇಕು.

Advertisement

ಈ ನಟನೊಂದಿಗೆ ನಿಮಗೆ ಸೆಲ್ಫಿ ಬೇಕೆಂದರೆ ನೀವು ನಿಂತ ಸ್ಥಳದಲ್ಲೇ ಪುಷಪ್ಸ್​​​​​​​​​​​​​​ ಹೊಡೆಯಬೇಕು. ಅರೆ ಹೀಗೂ ಉಂಟಾ…? ಒಂದು ಸೆಲ್ಫಿಗಾಗಿ ಪುಷಪ್ಸ್ ಏಕೆ ಎಂದು ನೀವು ಕೇಳಬಹುದು. ಆದರೆ ಈ ನಟ ಮಾಡೆಲ್, ಸಿನಿಮಾ ಪ್ರೊಡ್ಯೂಸರ್ ಮಾತ್ರವಲ್ಲದೆ ಫಿಟ್ನೆಸ್ ಪ್ರಮೋಟರ್ ಆಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಅವರೇ ಮಿಲಿಂದ್ ಸೋಮನ್. ಇವರು ನಿಮಗೆ ನೆನಪಿರಬಹುದು. ಕಳೆದ ವರ್ಷ ಬೀಚ್​​​​ನಲ್ಲಿ ನಗ್ನವಾಗಿ ಜಾಗಿಂಗ್ ಮಾಡಿ ಚರ್ಚೆಯ ಕೇಂದ್ರ ಬಿಂದುವಾಗಿದ್ದರು. ಕಳೆದ ವರ್ಷ ನವೆಂಬರ್​ 4 ರಂದು ತಮ್ಮ 55ನೇ ವರ್ಷದ ಹುಟ್ಟುಹಬ್ಬದಂದು ಗೋವಾ ಸಮುದ್ರ ತೀರದಲ್ಲಿ ಬೆತ್ತಲೆ ಓಡಿ ಸುದ್ದಿಯಾಗಿದ್ದರು. ಪತ್ನಿ ಅಂಕಿತಾ ಸೆರೆ ಹಿಡಿದ ಈ ಫೋಟೋವನ್ನು ಮಿಲಿಂದ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದೇ ಮಿಲಿಂದ್ ಸೋಮನ್ ಇತ್ತೀಚೆಗೆ ತಮ್ಮ ಬಳಿ ಬಂದು ಸೆಲ್ಫಿ ಕೇಳಿದ ಮಹಿಳೆಯೊಬ್ಬರ ಬಳಿ ರಸ್ತೆಯಲ್ಲೇ ಪುಷಪ್ಸ್ ಮಾಡಿಸಿದ್ಧಾರೆ. ಛತ್ತೀಸ್​​ಗಡದ ರಾಯ್​​ಪುರ್​​ನಲ್ಲಿ ಈ ಘಟನೆ ನಡೆದಿದೆ.

ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಿಲಿಂದ್, “ರಾಯ್​ಪುರದ ಪುಟ್ಟ ಮಾರುಕಟ್ಟೆಯೊಂದರ ಬಳಿ ನಾನು ತಿಂಡಿ ತಿನ್ನುತ್ತಿದ್ದೆ. ಅಲ್ಲಿಗೆ ಬಂದ ಮಹಿಳೆಯೊಬ್ಬರು ನನ್ನನ್ನು ನೋಡುತ್ತಿದ್ದಂತೆ ಸೆಲ್ಫಿ ಕೇಳಿದರು. ಸೆಲ್ಫಿ ಬೇಕೆಂದರೆ 10 ಪುಷಪ್ಸ್ ಮಾಡಲು ಹೇಳಿದೆ. ನಾನು ಕ್ಯಾಮರಾ ಆನ್ ಮಾಡಬೇಕೆಂದುಕೊಳ್ಳುವಷ್ಟರಲ್ಲಿ ಆ ಮಹಿಳೆ ಒಂದು ಕ್ಷಣವೂ ಯೋಚಿಸದೆ ನಾನು ಹೇಳಿದಂತೆ ನಿಂತ ಸ್ಥಳದಲ್ಲೇ ಪುಷಪ್ಸ್ ಮಾಡಿದರು. ಸೀರೆ ಧರಿಸಿದ್ದರೂ ಪರವಾಗಿಲ್ಲ, ಸುತ್ತಮುತ್ತ ಜನರು ಇದ್ದರೂ ಪರವಾಗಿಲ್ಲ, ಇದಕ್ಕೂ ಮುನ್ನ ಪುಷಪ್ಸ್ ಮಾಡಿ ಅಭ್ಯಾಸ ಇಲ್ಲದಿದ್ದರೂ ಪರವಾಗಿಲ್ಲ, ಎಕ್ಸ್​ಕ್ಯೂಜ್​​​​ ಇಲ್ಲವೇ ಇಲ್ಲ. ಇದೆಲ್ಲಾ ಆರೋಗ್ಯಕರ ಜೀವನ ನಡೆಸಲು ಅವಶ್ಯಕವಾದ ವ್ಯಾಯಾಮ. ಪುಷಪ್ಸ್ ನಂತರ ಆ ಮಹಿಳೆಯ ಮೊಬೈಲ್​​​​ನಲ್ಲೇ ನಾನು ಸುಂದರವಾದ ಸೆಲ್ಫಿಗೆ ಪೋಸ್ ನೀಡಿದೆ” ಎಂದು ಮಿಲಿಂದ್ ಹೇಳಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ತಮ್ಮ 81 ವರ್ಷದ ತಾಯಿಯಿಂದಲೂ ಮಿಲಿಂದ್ ಪುಷಪ್ಸ್ ಮಾಡಿಸಿ ಗಮನ ಸೆಳೆದಿದ್ದರು.

Advertisement

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಮಿಲಿಂದ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮಹಿಳೆಗೆ ರಸ್ತೆಯಲ್ಲಿ ಪುಷಪ್ಸ್ ಮಾಡಲು ಹೇಳಿದ್ದು ತಪ್ಪು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಆದರೆ ಮತ್ತೆ ಕೆಲವರು ಮಿಲಿಂದ್​​​​​ ಪರ ಮಾತನಾಡಿದ್ದಾರೆ. ಅವರೊಬ್ಬ ಫಿಟ್ನೆಸ್ ಸಪೋರ್ಟರ್ ಆಗಿ ಅಭಿಮಾನಿಗೆ ಪುಷಪ್ಸ್ ಮಾಡಲು ಹೇಳಿದ್ದು ತಪ್ಪೇನಿಲ್ಲ. ಅವರು ತಮ್ಮ ಸ್ವಂತ ಲಾಭಕ್ಕಾಗಿ ಆ ರೀತಿ ನಡೆದುಕೊಳ್ಳಲಿಲ್ಲ. ವ್ಯಾಯಾಮದ ಮಹತ್ವವನ್ನು ಇತರರಿಗೆ ಅವರದ್ದೇ ರೀತಿಯಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾರೆ 2018 ರಲ್ಲಿ ‘ಹಮಾರಾ ತಿರಂಗಾ’ ಚಿತ್ರದಲ್ಲಿ ಮಿಲಿಂದ್ ನಟಿಸಿದ್ದರು. ಕಳೆದ ವರ್ಷ ಮಿಲಿಂದ್ ನಟಿಸಿದ್ದ ‘ಪೌರುಷ್​​​ಪುರ್’ ವೆಬ್ ಸೀರೀಸ್​​​ ಬಿಡುಗಡೆಯಾಗಿತ್ತು. ಸದ್ಯಕ್ಕೆ ಹೆಸರಿಡದ ಹೊಸ ಸಿನಿಮಾವೊಂದರಲ್ಲಿ ನಟಿಸಲು ಮಿಲಿಂದ್ ಒಪ್ಪಿಕೊಂಡಿದ್ದಾರೆ.

Advertisement

-ರಕ್ಷಿತ ಕೆ.ಆರ್. ಸಾಗರ

Advertisement
Advertisement

Advertisement

About RJ News Kannada

Check Also

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

Advertisement ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, …

Leave a Reply

Your email address will not be published.

Recent Comments

No comments to show.