Breaking News

ಮಹೇಶ್ ಬಾಬು ಎದುರು ವಿಲನ್ ಆಗಿ ನಟಿಸಲಿದ್ದಾರಾ ಕನ್ನಡದ ಖ್ಯಾತ ನಟ…ಯಾವ ಸಿನಿಮಾ ಅದು…?​​​​​

Advertisement

ಒಂದು ಸಿನಿಮಾದಲ್ಲಿ ನಾಯಕ ಹೇಗೆ ಮುಖ್ಯವೋ ವಿಲನ್​​ಗೆ ಕೂಡಾ ಅಷ್ಟೇ ಪ್ರಾಮುಖ್ಯತೆ ಇರುತ್ತದೆ. ಅದರಲ್ಲೂ ಬಿಗ್​ ಬಜೆಟ್ ಸಿನಿಮಾಗಳಾದರೆ ಖ್ಯಾತ ನಟನನ್ನೇ ವಿಲನ್ ಪಾತ್ರಕ್ಕೆ ಕರೆತರಲಾಗುತ್ತದೆ. ನಾಯಕ ನಟನಾಗಿ ಮಿಂಚಿರುವ ಎಷ್ಟೋ ನಟರು ಕೆಲವೊಂದು ಸಿನಿಮಾಗಳಲ್ಲ ವಿಲನ್ ಪಾತ್ರಗಳಲ್ಲಿ ಅಬ್ಬರಿಸಿದ್ಧಾರೆ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕೂಡಾ ಕೆಲವೊಂದು ಚಿತ್ರಗಳಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ಧಾರೆ. ಇದೀಗ ಅವರು ಮತ್ತೊಂದು ಚಿತ್ರದಲ್ಲಿ ವಿಲನ್ ಆಗಿ ನಟಿಸುತ್ತಿದ್ಧಾರೆ ಎನ್ನಲಾಗಿದೆ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಎದುರು ಅರ್ಜುನ್ ಸರ್ಜಾ ವಿಲನ್ ಆಗಲಿದ್ಧಾರಂತೆ. ಮಹೇಶ್ ಬಾಬು ಅಭಿನಯದ 28ನೇ ಸಿನಿಮಾ ‘ಸರ್ಕಾರುವಾರಿ ಪಾಟ’ ಚಿತ್ರದಲ್ಲಿ ಅರ್ಜುನ್ ಸರ್ಜಾ ಮಹೇಶ್ ಬಾಬು ಎದುರು ವಿಲನ್ ಆಗಿ ನಟಿಸಲಿದ್ಧಾರಂತೆ. ಕಳೆದ ವರ್ಷ ಜನವರಿ 11 ರಂದು ಮಹೇಶ್ ಬಾಬು ಹಾಗೂ ರಶ್ಮಿಕಾ ಅಭಿನಯದ ‘ಸರಿಲೇರು ನೀಕೆವ್ವರು’ ಸಿನಿಮಾ ಬಿಡುಗಡೆಯಾಗಿ ದೊಡ್ಡ ಯಶಸ್ಸು ಕಂಡಿತ್ತು. ಈ ಸಿನಿಮಾ ನಂತರ ಮಹೇಶ್ ಬಾಬು ‘ಸರ್ಕಾರುವಾರಿ ಪಾಟ’ ಚಿತ್ರವನ್ನು ಘೋಷಿಸಿದರು. ಈಗಾಗಲೇ ಈ ಸಿನಿಮಾ ಚಿತ್ರೀಕರಣ ಆರಂಭವಾಗಿದ್ದು ಬಿಡುಗಡೆ ದಿನಾಂಕವನ್ನು ಕೂಡಾ ಅನೌನ್ಸ್ ಮಾಡಲಾಗಿದೆ.

Advertisement

2022 ಸಂಕ್ರಾಂತಿ ವೇಳೆಗೆ ಮಹೇಶ್ ಬಾಬು 28ನೇ ಸಿನಿಮಾ ‘ಸರ್ಕಾರುವಾರಿ ಪಾಟ’ ಬಿಡುಗಡೆಯಾಗಲಿದೆ. ಈ ವಿಚಾರವನ್ನು ಕಳೆದ ಜನವರಿ 29 ರಂದು ಮಹೇಶ್ ಬಾಬು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಚಿತ್ರದಲ್ಲಿ ಕಥೆಗೆ ತಕ್ಕಂತೆ ಅವರ ಎದುರು ನಟಿಸಲು ಖ್ಯಾತ ನಟನ ಅವಶ್ಯಕತೆ ಇರುವುದರಿಂದ ಈ ಪಾತ್ರಕ್ಕೆ ಅರ್ಜುನ್ ಸರ್ಜಾ ಅವರೇ ಸೂಕ್ತ ಎಂದು ಚಿತ್ರಕ್ಕೆ ಕರೆತರಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಕೆಲವೇ ದಿನಗಳಲ್ಲಿ ಅರ್ಜುನ್ ಸರ್ಜಾ ಕೂಡಾ ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು ಲಾಕ್​ಡೌನ್ ಕಾರಣದಿಂದ ಚಿತ್ರೀಕರಣ ಸ್ಥಗಿತಗೊಂಡಿದೆ. ಚಿತ್ರತಂಡದ ಪ್ರತಿಯೊಬ್ಬರೂ ವ್ಯಾಕ್ಸಿನ್ ಪಡೆದ ನಂತರ ಮುಂದಿನ ಹಂತದ ಚಿತ್ರೀಕರಣವನ್ನು ಆರಂಭಿಸುವುದಾಗಿ ಚಿತ್ರದ ನಿರ್ದೇಶಕ ಪರಶುರಾಮ್ ಹೇಳಿದ್ದಾರೆ. ಚಿತ್ರದಲ್ಲಿ ಅರ್ಜುನ್ ಸರ್ಜಾ ನಟಿಸುತ್ತಿರುವ ವಿಚಾರವನ್ನು ಚಿತ್ರತಂಡ ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಿದೆ ಎನ್ನಲಾಗಿದೆ.

‘ಸರ್ಕಾರುವಾರಿ ಪಾಟ’ ಚಿತ್ರದ ಪೋಸ್ಟರ್ ಕೂಡಾ ಈಗಾಗಲೇ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮಹೇಶ್ ಬಾಬು ಲುಕ್ ಹಾಗೂ ಅವರು ಯಾವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾಯುತ್ತಿದ್ಧಾರೆ. ಮಹೇಶ್ ಬಾಬು ಜೊತೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ವೆನ್ನಿಲ ಕಿಶೋರ್, ಸುಬ್ಬರಾಜು ಹಾಗೂ ಇನ್ನಿತರರು ಚಿತ್ರದಲ್ಲಿ ಇರಲಿದ್ಧಾರೆ. ಮೈತ್ರಿ ಮೂವಿ ಮೇಕರ್ಸ್, 14 ರೀಲ್ಸ್ ಪ್ಲಸ್, ಜಿಎಂಬಿ ಎಂಟರ್​ಟೈನ್ಮೆಂಟ್ ಜೊತೆ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದ್ಧಾರೆ. ಚಿತ್ರದ ಹಾಡುಗಳಿಗೆ ತಮನ್ ಸಂಗೀತ ನೀಡುತ್ತಿದ್ದು ಹೈದರಾಬಾದ್, ದುಬೈ, ಯುಎಸ್​​​ನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.

Advertisement

‘ಸರ್ಕಾರುವಾರಿ ಪಾಟ’ ಚಿತ್ರವನ್ನು ಹೊರತುಪಡಿಸಿ ಮಹೇಶ್ ಬಾಬು ‘ಮೇಜರ್’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದು 26-11-2008 ರಂದು ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಚಿತ್ರವಾಗಿದ್ದು ನಟ ಅದ್ವಿಶೇಷ್​, ಸಂದೀಪ್ ಉನ್ನಿಕೃಷ್ಣನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಇದೇ ವರ್ಷ ಜುಲೈ 2ರಂದು ಬಿಡುಗಡೆಯಾಗುತ್ತಿದೆ. ಇತ್ತ ಅರ್ಜುನ್ ಸರ್ಜಾ ತಮಿಳಿನ ಫ್ರೆಂಡ್​​ಶಿಪ್​, ಮೇಧಾವಿ ತೆಲುಗಿನ ಖಿಲಾಡಿ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರೊಂದಿಗೆ ಅವರು ‘ಮರಕ್ಕರ್’ ಹಾಗೂ ‘ವಿರುನ್ನು’ ಎಂಬ ಎರಡು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದು ಈ ಸಿನಿಮಾಗಳು ಶೀಘ್ರವೇ ಬಿಡುಗಡೆಯಾಗಲಿವೆ.

Advertisement

-ರಕ್ಷಿತ ಕೆ.ಆರ್. ಸಾಗರ

Advertisement
Advertisement

Advertisement

About RJ News Kannada

Check Also

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

Advertisement ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, …

Leave a Reply

Your email address will not be published.

Recent Comments

No comments to show.