Breaking News

ಕೊನೆಗೂ ವಿಷ್ಣು ಸ್ಮಾರಕದ ಬಗ್ಗೆ ಸತ್ಯ ಬಿಚ್ಚಿಟ್ಟ ಸುಮಲತಾ ಅಂಬರೀಶ್.. ಕೊಟ್ಟಿರುವ ಹಣವೆಷ್ಟು ಗೊತ್ತಾ?

Advertisement

ನಿನ್ನೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕದ ವಿಚಾರವಾಗಿ ಸ್ಮಾರಕ ನಿರ್ಮಾಣಕ್ಕಾಗಿ ಬೆಂಗಳೂರಿ‌ನ ಕಂಠೀರವ ಸ್ಟುಡಿಯೋದಲ್ಲಿ 1 ಎಕರೆ 34 ಗುಂಟೆ ಜಾಗ ಹಾಗೂ ಮೊದಲನೇ ಹಂತವಾಗಿ 5 ಕೋಟಿ ಹಣ ಬಿಡುಗಡೆ ಮಾಡಲಾಗುವುದೆಂದು ತಿಳಿಸಲಾಗಿತ್ತು.. ಸುಮಲತಾ ಅಂಬರೀಶ್, ರಾಕ್ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ಅಂಬರೀಶ್ ಅವರ ಸ್ಮಾರಕ ಸಮಿತಿ ನಿನ್ನೆ ಮುಖ್ಯ ಮಂತ್ರಿಗಳನ್ನು ಭೇಟಿ‌ ಮಾಡಿದಾಗ ಈ ನಿರ್ಣಯ ತೆಗೆದುಕೊಳ್ಳಲಾಗಿತ್ತು.. ಈ ವಿಚಾರವನ್ನು ಮುಖ್ಯಮಂತ್ರಿಗಳು ಹಾಗೂ ಸುಮಲತಾ ಅಂಬರೀಶ್ ಅವರು ಇಬ್ಬರೂ ಸಹ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ವಿಚಾರ ತಿಳಿಸಿದ್ದರು..

ಆದರೆ ಈ ಪೋಸ್ಟ್ ಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಮೊದಲು ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಿಸಿ ಎಂದು ಬಹಳಷ್ಟು ಕಮೆಂಟ್ ಗಳು ಬಂದಿದ್ದವು‌‌.. 10 ವರ್ಷದಿಂದ ವಿಷ್ಣು ಸ್ಮಾರಕ ನಿರ್ಮಾಣವಾಗಿಲ್ಲ ಕಾರಣವೇನು ಎಂಬೆಲ್ಲಾ ಮಾತು ಕೇಳಿಬಂದವು..

Advertisement

ಆದರೀಗ ಈ ಎಲ್ಲಾ ಪ್ರಶ್ನೆಗಳಿಗೆ ಖುದ್ದು ಸುಮಲತಾ ಅವರೇ ಉತ್ತರ ನೀಡಿದ್ದಾರೆ.. ಹೌದು ನಿನ್ನೆ ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದ ಸುಮಲತಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ.. “ವಿಷ್ಣುವರ್ಧನ್ ಅವರ ಮೇಲೆ ನೀವು ಇಟ್ಟಿರುವ ಪ್ರೀತಿ ನೋಡಿ ಖುಷಿ ಆಗುತ್ತೆ. ನಾನೂ ಕೂಡ ನಿಮ್ಮ ಹಾಗೆ ಅವರ ಅಭಿಮಾನಿ. ವಿಷ್ಣು ಅವರ ಸ್ಮಾರಕ ಇನ್ನು ಯಾಕೆ ಪ್ರಾರಂಭ ಆಗಿಲ್ಲ ಅಂತ ಕೆಲವರು ಕೇಳುತ್ತಿರುವುದು ನೋಡಿ ಆಶ್ಚರ್ಯ ಆಗುತ್ತಿದೆ. ನಿಜವಾದ ಅಭಿಮಾನಿಗಳಿಗೆ ತಪ್ಪು ಕಲ್ಪನೆ ಬೇಡ.

Advertisement

ಈಗಾಗಲೇ ನಮ್ಮ ನೆಚ್ಚಿನ ವಿಷ್ಣುವರ್ಧನ್ ಅವರ ಸ್ಮಾರಕದ ಕೆಲಸ ಒಂದು ವರ್ಷದ ಹಿಂದೆಯೇ ಶುರುವಾಗಿದೆ. ಮೈಸೂರಿನ ಸಮೀಪ, ಅವರ ಕುಟುಂಬದವರ ಇಚ್ಛೆಯಂತೆ, ಸ್ಮಾರಕ ರೂಪಗೊಳ್ಳುತ್ತಿದೆ. ನನಗೆ ತಿಳಿದಿರುವಂತೆ, ಸರಕಾರ ಅದಕ್ಕಾಗಿ 10 ಕೋಟಿ ರೂಪಾಯಿ ಘೋಷಿಸಿದೆ. ಅದರಲ್ಲಿ 5 ಕೋಟಿ ರೂಪಾಯಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಬಹುತೇಕ ವಿಷ್ಣು ಅಭಿಮಾನಿಗಳಿಗೆ ತಿಳಿದಿದೆ.

Advertisement

ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದ ಎಲ್ಲೆಡೆ ಇರುವ ಅಭಿಮಾನಿಗಳು ಅಂಬಿ ಹಾಗೂ ವಿಷ್ಣುವರ್ಧನ್ ಅವರ
ಕಲಾ ಸೇವೆ ಹಾಗೂ ಸಾಮಾಜಿಕ ಸೇವೆಯ ಹಿನ್ನೆಲೆಯಲ್ಲಿ
ಅವರುಗಳ ಸ್ಮಾರಕದ ವಿಷಯದಲ್ಲಿ ಯಾವಾಗಲೂ ಒಗ್ಗಟ್ಟಾಗಿ ಹೆಜ್ಜೆ ಇಟ್ಟಿವೆ. ಮತ್ತು ಒಕ್ಕೂರಿಲಿನ ಧ್ವನಿಯಾಗಿದೆ.

ಅಂಬಿ ಹಾಗೂ ವಿಷ್ಣುವರ್ಧನ್ ಅವರ ಆತ್ಮೀಯ ಸ್ನೇಹ ಹಾಗೂ ಒಬ್ಬರಿಗಗೊಬ್ಬರು ತೋರುತ್ತಿದ್ದ ಪ್ರೀತಿ ಚಿಕ್ಕವರಿಗೆ ಸ್ಫೂರ್ತಿ ಆಗಬೇಕು. ಬೇಡದ ಮಾತುಗಳಿಂದ ಅವರಿಬ್ಬರ ವ್ಯಕ್ತಿತ್ವಕ್ಕೆ ಮಾತ್ರವಲ್ಲ ಅವರ ಸ್ನೇಹಕ್ಕೂ ಅಪಮಾನ. ನಾಲ್ಕು ದಶಕಗಳ ಕಾಲ ಅವರ ಸ್ನೇಹ ಯಾವುದೇ ಅಹಂಗೂ ಒಳಗಾಗಲಿಲ್ಲ, ಯಾವ ವಿಷಯವೂ ಅವರ ನಡುವೆ ಕಂದಕ ತರಲಿಲ್ಲ. ಈಗ ಅವರನ್ನು ಬೇರೆ ಮಾಡಿ ಅವರ ನೆನಪುಗಳಿಗೆ ಮಸಿ ಬಳಿಯೋದು ಬೇಡ.

Advertisement

ಅಂಬಿ-ವಿಷ್ಣು ಇಬ್ಬರು ತಮ್ಮ ಕ್ಷೇತ್ರಗಳಲ್ಲಿ ಸಾಧಕರು ಹಾಗೂ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಿದವರು. ಅವರ ಸ್ನೇಹಕ್ಕೆ ಯಾರೂ ಧಕ್ಕೆ ತರೋದು ಬೇಡ ಹಾಗೆಯೇ ಅವರಿಬ್ಬರ ಸಾಧನೆಗಳನ್ನು ನಾವು ಗೌರವಿಸೋಣ.” ಎಂದಿದ್ದಾರೆ‌‌..

Advertisement
Advertisement

About admin

Check Also

ರಾಜಕೀಯ ಎಂಟ್ರಿ ಬಗ್ಗೆ ಬಾಲಿವುಡ್ ನಟ ಸೋನು ಸೂದ್ ಹೇಳಿದ್ದೇನು ಗೊತ್ತೆ?

Advertisement ಕೊರೊನಾ ಮೊದಲನೇ ಅಲೆ ಆರ್ಭಟ, ಲಾಕ್ ಡೌನ್ ಸಂಕಷ್ಟದಿಂದ ಹಿಡಿದೂ ಕೋವಿಡ್ ಎರಡನೇ ಅಲೆಯಲ್ಲಿಯೂ ತತ್ತರಿಸಿರುವ ಹಲವರಿಗೆ ಬಾಲಿವುಡ್ …

Leave a Reply

Your email address will not be published.

Recent Comments

No comments to show.