ವಿಜಯಲಕ್ಷ್ಮಿ ಒಂದು ಕಾಲದ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿದ್ದವರು.. ಈಗಲೂ ನಾಗಮಂಡಲ, ಸೂರ್ಯವಂಶ ಸಿನಿಮಾದಲ್ಲಿನ ಅವರ ಪಾತ್ರಗಳು ಕಣ್ಣಿಗೆ ಕಟ್ಟಿದ್ದಂತಿದೆ.. ಕನ್ನಡದಲ್ಲಿ ಅಪಾರ ಹೆಸರು ಗಳಿಸಿದರೂ ವಿಜಯಲಕ್ಷ್ಮಿ ಅವರಿಗೆ ಹೆಚ್ಚು ಅವಕಾಶ ಅರಸಿ ಬಂದದ್ದು ಮಾತ್ರ ತಮಿಳಿನಲ್ಲಿ.. ದಶಕದ ಕಾಲ ಮಿಂಚಿದ ನಟಿ ಆನಂತರ ಅವಕಾಶಗಳು ಕಡಿಮೆಯಾಗಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು.. ಆದರೆ ಕೆಲ ತಿಂಗಳ ಹಿಂದೆ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು.. ಆ ಸಮಯದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ ಎಂದು ವೀಡಿಯೋ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದರು.. ಕಿಚ್ಚ ಸುದೀಪ್ ಸೇರಿದಂತೆ ಅನೇಕರು ವಿಜಯಲಕ್ಷ್ಮಿ ಅವರಿಗೆ ಸಹಾಯ ಮಾಡಿದ್ದರು..
ಇದೀಗ ವಿಜಯಲಕ್ಷ್ಮಿ ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.. ಹೌದು ನಟನೊಬ್ಬ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದನೆಂದು ತಿಳಿಸಿದ್ದು ಬಹಳ ಕೆಟ್ಟದಾಗಿ ಬೈದಿದ್ದಾರೆ.. ಹೌದು ನಟ ಸೀಮಾನ್ ನನ್ನನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದಿದ್ದಾರೆ.. ವೀಡಿಯೋ ಮೂಲಕ ಆರೋಪ ಮಾಡಿರುವ ನಟಿ ವಿಜಯಲಕ್ಷ್ಮಿ ಅವರು ನಟ, ನಿರ್ದೇಶಕ ರಾಜಕಾರಣಿಯೂ ಆಗಿರುವ ಸೀಮಾನ್ ನನ್ನ ಜೀವನವನ್ನು ಹಾಳು ಮಾಡಿದ್ದಾನೆ ಎಂದಿದ್ದಾರೆ..
ಆತನ ಬಳಿ ಏನೂ ಇಲ್ಲದಾಗ ಅವನು ನನ್ನ ಬಳಿ ಬಂದ.. ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ.. ಈಗ ಅವನು ಹಾಗೂ ಆತನ ಹಿಂಬಾಲಕರು ನನ್ನನ್ನು ಅವಮಾನುಸುತ್ತಿದ್ದಾರೆ.. ಜೊತೆಗೆ ನನ್ನ ವೃತ್ತಿ ಜೀವನವನ್ನು ಮುಗಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.. ಅವನೊಬ್ಬ ನರಿ ಬುದ್ದಿಯವನು, ಯಾರದರು ಬೆಳೆದರೆ ಸಹಿಸಲಾರದವ.. ಅವನ ಬಣ್ಣವನ್ನು ಒಂದೊಂದಾಗಿಯೇ ಬಯಲು ಮಾಡುತ್ತೇನೆ.. ಸಿನಿಮಾ ಇಂಡಸ್ಟ್ರಿಯ ಯಾವ ನಟ ನಟಿಯರು ನನಗೆ ಬೆಂಬಲ ನೀಡುವಿರಿ ಎಂದು ಕೇಳಿದ್ದಾರೆ.. ನನಗೆ ಇಷ್ಟೆಲ್ಲಾ ಅನ್ಯಾಯ ಆಗುತ್ತಿದ್ದರೂ ಸಹ ನನ್ನನ್ನು ತಮಿಳು ಇಂಡಸ್ಟ್ರಿಯಲ್ಲಿ ಯಾರೂ ಕೇಳುತ್ತಿಲ್ಲ.. ರಜನಿಕಾಂತ್ ಅವರ ಅಭಿಮಾನಿಗಳನ್ನು ಬಿಟ್ಟರೆ ಬೇರೆ ಯಾರೂ ನನ್ನನ್ನು ಬೆಂಬಲಿಸುತ್ತಿಲ್ಲ ಎಂದಿದ್ದಾರೆ.. ಒಂದು ಕಾಲದಲ್ಲಿ ಕಲಾಸೇವೆಯ ಮೂಲಕ ಮಿಂಚಿ, ಜನ ಮಾನಸದಲ್ಲಿ ಉಳಿದಿದ್ದ ನಟಿಯ ಈಗಿನ ಪರಿಸ್ಥಿತಿ ಕಂಡು ಅನೇಕರು ಮರುಕ ಪಟ್ಟಿದ್ದಾರೆ..