ಕೊರೊನಾ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಎಗ್ಗಿಲ್ಲದೇ ಹರಡುತ್ತಿದ್ದು, ದಿನಕ್ಕೆ ನೂರಾರು ಮಂದಿ ಆಸ್ಪತ್ರೆ ಸೇರುವಂತಾಗಿದೆ.. ಅದ್ಯಾವಾಗ ಇದರಿಂದ ಮುಕ್ತಿ ದೊರಕುವುದೋ.. ಎಂದು ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣಗೊಂಡಿದೆ.. ಕಾಣದ ಶಕ್ತಿಯೊಂದು ಮನುಷ್ಯನನ್ನು.. ಮನುಷ್ಯನ ಜೀವನವನ್ನು ಈ ಮಟ್ಟಕ್ಕೆ ಹಾಳು ಮಾಡುತ್ತದೆ ಎಂದು ಬಹುಶಃ ಯಾರೂ ಊಹಿಸಿರಲಿಕ್ಕಿಲ್ಲ..
ಇನ್ನು ಕೊರೊನಾ ಆತಂಕದ ನಡುವೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಸಲ್ಲದ ಕೆಲ ವಿಚಾರಗಳು ಹರಿದಾಡೋದು ಸಾಮಾನ್ಯವಾಗಿಬಿಟ್ಟಿದೆ.. ಆದರೆ ನಿನ್ನೆ ರಾಜ್ಯ ಮಟ್ಟದ ಸುದ್ದಿ ವಾಹಿನಿಯೊಂದರಲ್ಲಿಯೇ ದರ್ಶನ್ ಅವರ ಪತ್ನಿಗೆ ಕೊರೊನಾ ಇರಿವುದು ಧೃಡ ಎಂಬ ಸುದ್ದಿಯನ್ನು ಪ್ರಸಾರ ಮಾಡಲಾಗಿತ್ತು.. ಸುದ್ದಿ ವಾಹಿನಿಯಲ್ಲಿ ಈ ವಿಚಾರ ಪ್ರಸರವಾದ ಕಾರಣ ಇದು ಸತ್ಯ ಎಂದು ಎಲ್ಲರೂ ನಂಬಿಯೂ ಬಿಟ್ಟಿದ್ದರು.. ಆದರೆ ಕೆಲವೇ ಕ್ಷಣಗಳಲ್ಲಿ ಖುದ್ದು ವಿಜಯಲಕ್ಷ್ಮಿ ಅವರೇ ಸ್ಪಷ್ಟನೆ ನೀಡುವಂತಾಯಿತು..
ಹೌದು ವಿಜಯಲಕ್ಷ್ಮಿ ದರ್ಶನ್ ಅವರು ಇರುವ ಪ್ರೆಸ್ಟಿಜ್ ಅಪಾರ್ಟ್ಮೆಂಟ್ ನಲ್ಲಿ ಕೊರೊನಾ ಕಾಣಿಸಿಕೊಂಡಿರುವುದು ಸತ್ಯ.. ಆದರೆ ಅದು ವಿಜಯಲಕ್ಷ್ಮಿ ಅವರಿಗಲ್ಲ.. ಬದಲಿಗೆ ನಟ ರವಿಶಂಕರ್ ಅವರ ಎದುರುಗಡೆ ಮನೆಯ ವ್ಯಕ್ತಿಗೆ.. ಆದರೆ ಕೆಲ ಕೆಟ್ಟ ಮನಸ್ಸಿನವರು ವಿಜಯಲಕ್ಷ್ಮಿ ದರ್ಶನ್ ಅವರಿಗೆ ಸೋಂಕಿದೆ ಎಂದು ಸುದ್ದಿ ಹಬ್ಬಿಸಿದ್ದರು.. ಅದರಲ್ಲೂ ಸರಿಯಾದ ಮಾಹಿತಿ ಪಡೆಯದೆ ಸುದ್ದಿ ವಾಹಿನಿಯೂ ಈ ವಿಚಾರವನ್ನು ಪ್ರಸಾರ ಮಾಡಿ ಟೀಕೆಗೆ ಗುರಿಯಾಯಿತು.. ಈ ಬಗ್ಗೆ ನಿನ್ನೆ ಹರಿದಾಡಿದ ಸುದ್ದಿಗೆ ಖುದ್ದು ವಿಜಯಲಕ್ಷ್ಮಿ ಅವರೇ ಸ್ಪಷ್ಟನೆ ನಿಡಿದ್ದು “ನನಗೆ ಕೊರೊನಾ ಪಾಸಿಟಿವ್ ಆಗಿದೆ ಎಂಬ ರೂಮರ್ ಹರಿದಾಡಿದ್ದನ್ನು ನೋಡಿದೆ.. ಈ ಮೂಲಕ ನಿಮಗೆಲ್ಲಾ ತಿಳಿಸುವುದೇನೆಂದರೆ ನಾನು ಆರೋಗ್ಯವಾಗಿದ್ದೇನೆ.. ನನಗೆ ಯಾವ ಸಮಸ್ಯೆಯೂ ಇಲ್ಲ.. ಇಂತಹ ಕಷ್ಟದ ಸಮಯದಲ್ಲಿ ನಿಮ್ಮಗಳ ಆರೋಗ್ಯ ಕಾಪಾಡಿಕೊಳ್ಳಿ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..
ಇತ್ತ ರವಿಶಂಕರ್ ಅವರೂ ಸಹ ತಮ್ಮ ಎದುರಿನ ಮನೆಗೆ ಕೊರೊನಾ ಬಂದ ಕಾರಣ ಆತಂಕ ವ್ಯಕ್ತ ಪಡಿಸಿದ್ದು, ಮಕ್ಕಳಿರುವ ನನ್ನ ಮನೆಯನ್ನು ಆ ದೇವರೇ ಕಾಪಾಡಬೇಕು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಈ ವಿಚಾರ ತಿಳಿಯುತ್ತಿದ್ದಂತೆ ಸುದೀಪ್ ಅವರು ಗಣೇಶ್ ಅವರು ಹಾಗೂ ಸೃಜನ್ ಅವರು ರವಿಶಂಕರ್ ಗೌಡ ಅವರಿಗೆ ಫೋನ್ ಮಾಡಿ ಮಕ್ಕಳನ್ನು ಕರೆದುಕೊಂಡು ತಮ್ಮ ಮನೆಗೆ ಬಂದುಬಿಡುವಂತೆ ಹೇಳಿದ್ದಾರೆ.. ನಿಜಕ್ಕೂ ಸಂಬಂಧಕ್ಕಿಂತ ಇಂತಹ ಎರಡು ಸ್ನೇಹವಿದ್ದರೆ ಸಾಕು ಜೀವನದಲ್ಲಿ..