Breaking News

ಚಿತ್ರರಂಗಕ್ಕೆ ಬರುವ ಮುನ್ನವೇ ಶಿವರಾಜ್​ಕುಮಾರ್​​​​​​ ರೀಕ್ರಿಯೇಟ್ ಮಾಡಿದ್ದ ‘ಹಾಲುಜೇನು’ ಚಿತ್ರದ ಕವರ್ ವಿಡಿಯೋ ಸಾಂಗ್ ವೈರಲ್

Advertisement

ಯಾವುದೇ ಸಿನಿಮಾ ಹಾಡುಗಳು ಹಿಟ್ ಆದಲ್ಲಿ, ಅಭಿಮಾನಿಗಳು ಆ ಹಾಡಿನ ಕವರ್ ವಿಡಿಯೋ ಸಾಂಗ್​​​ ರೀ ಕ್ರಿಯೇಟರ್​ ಮಾಡುವುದು ಇತ್ತೀಚೆಗೆ ಟ್ರೆಂಡ್ ಆಗಿ ಹೋಗಿದೆ. ಇದು ಬಹುತೇಕ ಎಲ್ಲಾ ಭಾಷೆಗಳಲ್ಲೂ ನೋಡಬಹುದು. ಆದರೆ ಈ ರೀತಿ ಕವರ್ ಸಾಂಗ್ ಮಾಡುವ ಕ್ರೇಜ್ ಇಂದು ನಿನ್ನೆಯದಲ್ಲ. ಹಿಂದಿನ ಕಾಲದ ಸಿನಿಮಾಗಳಿಂದ ಇದು ನಡೆದು ಬಂದಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ ಮಾತ್ರವಲ್ಲದೆ ನಮ್ಮ ಕನ್ನಡ ಚಿತ್ರರಂಗದಲ್ಲೂ ಇಂತಹ ಸಾಕಷ್ಟು ವಿಡಿಯೋಗಳನ್ನು ನಾವು ನೋಡಬಹುದು. ಕನ್ನಡದಲ್ಲಿ ಈ ಪ್ರಯೋಗ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಚಿತ್ರರಂಗಕ್ಕೆ ಬರುವ ಮುನ್ನವೇ ನಡೆದಿದೆ. ತಮ್ಮ ತಂದೆ ಡಾ . ರಾಜ್​ಕುಮಾರ್ ಅವರ ಸೂಪರ್ ಹಿಟ್ ಸಿನಿಮಾವೊಂದರ ಸುಂದರವಾದ ಹಾಡೊಂದನ್ನು ಶಿವರಾಜ್​ಕುಮಾರ್ ಆಗಲೇ ರೀ-ಕ್ರಿಯೇಟ್​​​ ಮಾಡಿದ್ದರು. ಈ ವಿಡಿಯೋ ಈಗ ಲಭ್ಯವಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಶಿವಣ್ಣನ ಅಭಿಮಾನಿಗಳು ಈ ವಿಡಿಯೋವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

 

Advertisement

ಡಾ. ರಾಜ್​ಕುಮಾರ್ ಹಾಗೂ ಮಾಧವಿ ಅಭಿನಯಿಸಿರುವ 1982 ರಲ್ಲಿ ಬಿಡುಗಡೆಯಾದ ‘ಹಾಲು ಜೇನು’ ಚಿತ್ರದ ”ಹಾಲು ಜೇನು ಒಂದಾದ ಹಾಗೆ… ನನ್ನ ನಿನ್ನ ಜೀವನ….”ಹಾಡನ್ನು ಶಿವರಾಜ್​ಕುಮಾರ್ ಆಗಲೇ ರೀ ಕ್ರಿಯೇಟ್ ಮಾಡಿದ್ದರು. ಈ ಕವರ್ ಸಾಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಶಿವರಾಜ್​ಕುಮಾರ್, ತಾವು ಚೆನ್ನೈನಲ್ಲಿ ಆ್ಯಕ್ಟಿಂಗ್ ತರಬೇತಿ ಮಾಡುವಾಗ ರೀ-ಕ್ರಿಯೇಟ್ ಮಾಡಿದ್ದರು ಎನ್ನಲಾಗುತ್ತಿದೆ. ಶಿವರಾಜ್​ಕುಮಾರ್ ಜೊತೆ ಸ್ಮಿತಾ ಎಂಬುವವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಎಂಬುವವರು ಈ ಹಾಡಿನ ನಿರ್ದೇಶನ ಮಾಡಿದ್ದು ಸುಕುಮಾರ್ ಕ್ಯಾಮರಾ ಹಿಡಿದಿದ್ದಾರೆ. ಈ ರೀ ಕ್ರಿಯೇಟ್ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

27 ಮೇ 1982 ರಲ್ಲಿ ತೆರೆಗೆ ಬಂದ ‘ಹಾಲು ಜೇನು’ ಚಿತ್ರವನ್ನು ಪೂರ್ಣಿಮಾ ಎಂಟರ್​​ಪ್ರೈಸಸ್ ಬ್ಯಾನರ್ ಅಡಿ ಪಾರ್ವತಮ್ಮ ರಾಜ್​ಕುಮಾರ್ ನಿರ್ಮಿಸಿದ್ದರು. ಸಿಂಗೀತಂ ಶ್ರೀನಿವಾಸ್ ರಾವ್ ಸಿನಿಮಾವನ್ನು ನಿರ್ದೇಶಿಸಿದ್ದರು. ಡಾ. ರಾಜ್​​ಕುಮಾರ್, ಮಾಧವಿ, ರೂಪಾದೇವಿ, ಡಬ್ಬಿಂಗ್ ಜಾನಕಿ, ಶಕ್ತಿ ಪ್ರಸಾದ್, ತೂಗುದೀಪ ಶ್ರೀನಿವಾಸ್, ಚಿ. ಉದಯಶಂಕರ್, ಶಿವರಾಮ್, ಮುಸುರಿ ಕೃಷ್ಣಮೂರ್ತಿ ಹಾಗೂ ಇನ್ನಿತರರು ಈ ಚಿತ್ರದಲ್ಲಿ ಅಭಿನಯಿಸಿದ್ಧಾರೆ. ಚಿತ್ರದಲ್ಲಿ 5 ಹಾಡುಗಳಿದ್ದು ಚಿ. ಉದಯಶಂಕರ್ ಬರೆದಿದ್ದ ನಾಲ್ಕು ಹಾಡುಗಳಿಗೆ ಜಿ.ಕೆ. ವೇಂಕಟೇಶ್ ಸಂಗೀತ ನಿರ್ದೇಶಿಸಿದ್ದರು. ಪುರಂದರದಾಸರ ಮತ್ತೊಂದು ಹಾಡನ್ನು ಈ ಹಾಡಿನಲ್ಲಿ ಅಳವಡಿಸಿಕೊಳ್ಳಲಾಗಿದ್ದು ಎಲ್ಲಾ ಹಾಡುಗಳು ಇಂದಿಗೂ ಸಿನಿಪ್ರಿಯರ ಮೋಸ್ಟ್ ಫೇವರೆಟ್ ಹಾಡುಗಳಾಗಿವೆ.

Advertisement

ವಿಶೇಷ ಎಂದರೆ 1985 ರಲ್ಲಿ ‘ಹಾಲು ಜೇನು’ ಚಿತ್ರವನ್ನು ತೆಲುಗಿಗೆ ‘ಇಲ್ಲಾಲೇ ದೇವತ’ ಹೆಸರಿನಲ್ಲಿ ರೀಮೇಡ್ ಮಾಡಲಾಯ್ತು. ಈ ಚಿತ್ರದಲ್ಲಿ ಅಕ್ಕಿನೇನಿ ನಾಗೇಶ್ವರರಾವ್​ ಕನ್ನಡದಲ್ಲಿ ಡಾ. ರಾಜ್​​ಕುಮಾರ್ ಮಾಡಿದ್ದ ಪಾತ್ರವನ್ನು ಮಾಡಿದ್ದರು. ಮಾಧವಿ ಪಾತ್ರವನ್ನು ರಾಧಿಕಾ, ರೂಪಾದೇವಿ ಪಾತ್ರವನ್ನು ಭಾನುಪ್ರಿಯ ನಿಭಾಯಿಸಿದ್ದರು. ತಾತಿನೇನಿ ಪ್ರಸಾದ್ ಈ ಸಿನಿಮಾವನ್ನು ನಿರ್ದೇಶಿಸಿದ್ದರು.

-ರಕ್ಷಿತ ಕೆ.ಆರ್. ಸಾಗರ

Advertisement
Advertisement
Advertisement

About RJ News Kannada

Check Also

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

Advertisement ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, …

Leave a Reply

Your email address will not be published.

Recent Comments

No comments to show.