Breaking News

ಬ್ರೇಕಿಂಗ್ ನ್ಯೂಸ್.. ಕೊರೊನಾ ನಿಯಂತ್ರಣಕ್ಕೆ ರಾತ್ರೋ ರಾತ್ರಿ ಕೇಂದ್ರದ ಮಹತ್ವದ ನಿರ್ಣಯ..

Advertisement

ಕೊರೊನಾ ವ್ಯಾಪಕವಾಗಿ ಹರಡುತ್ತಿದೆ.. ಹಿಡಿತಕ್ಕೆ ಸಿಗದ ರೀತಿಯಲ್ಲಿ ಹಬ್ಬುತ್ತಿದೆ.. ಇತ್ತ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚಿದ್ದರೂ ಸಹ ಅತ್ತ ಇದರಿಂದಾಗಿ ಜೀವ ಕಳೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಿರುವುದು ಆತಂಕ್ಕೀಡು ಮಾಡಿದೆ.. ಜೊತೆಗೆ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡುವುದು ಸವಾಲಿನ ಕೆಲಸವಾಗಿದೆ.. ಮೊದಮೊದಲು ತೆಗೆದುಕೊಂಡಷ್ಟು ಕಾಳಜಿ ತೆಗೆದುಕೊಳ್ಳಲು ಆಅಧ್ಯವಾಗುತ್ತಿಲ್ಲ..

ಲಾಕ್ ಡೌನ್ ಆದ ಸಂದರ್ಭದಲ್ಲಿ ಎಲ್ಲವೂ ಕಂಟ್ರೋಲ್ ನಲ್ಲಿಯೇ ಇತ್ತು.. ಲಾಕ್ ಡೌನ್ ಸಡಿಲಿಕೆ ಆಗುತ್ತಿದ್ದಂತೆ ಜನ ಜೀವನ ಮತ್ತೆ ಕಟ್ಟಿಕೊಳ್ಳುವುದರಲ್ಲಿ ತೊಡಗಿತ್ತು.. ಎಂದಿನಂತೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚಾರ ಆರಂಭವಾಗಿತ್ತು.. ಇದು ಸೋಂಕು ಹರಡುವುದಕ್ಕೆ ಸುಲಭ ಮಾರ್ಗವಾಯಿತು..

Advertisement

ಇದೇ ಕಾರಣಕ್ಕೆ ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ತೆಗೆದುಕೊಂಡಿದೆ.. ಹೌದು ಕೊರೊನಾವನ್ನು ಅಲ್ಪ ಮಟ್ಟಕ್ಕಾದರೂ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ದೇಶಾದ್ಯಂತ ಎಲ್ಲಾ ರೈಲು ಸಂಚಾರವನ್ನು ಇಂದಿನಿಂದಲೇ ಬಂದ್ ಮಾಡುವ ಆದೇಶ ಹೊರಡಿಸಲಾಗಿದೆ.. ಒಂದು ಎರಡು ದಿನವಲ್ಲ.. ಬದಲಿಗೆ ಆಗಸ್ಟ್ 12 ರವರೆಗೆ ಎಲ್ಲಾ ರೈಲುಗಳನ್ನು ರದ್ದು ಮಾಡಿ ಆದೇಶ ಹೊರಡಿಸಲಾಗಿದೆ..‌ ಬುಕ್ ಆಗಿರುವ ಟಿಕೆಟ್ ಹಣವನ್ನು ಮರುಪಾವತಿ ಮಾಡುವುದಾಗಿಯೂ ರೈಲ್ವೇ ಇಲಾಖೆ ತಿಳಿಸಿದೆ..

Advertisement

ಪ್ಯಾಸೆಂಜರ್, ಎಕ್ಸ್ಪ್ರೆಸ್, ಸಬರ್ಬನ್  ಸೇರಿದಂತೆ ಪ್ರತಿಯೊಂದು ರೈಲು ಸಂಚಾರವೂ ರದ್ದಾಗಲಿದ್ದು, ವಿಶೇಷ ರೈಲು ಮಾತ್ರ ಸಂಚಾರ ಮಾಡಲಿದೆ.. ಈ ಮೂಲಕ ಅರ್ಥಿಕವಾಗಿ ನಷ್ಟವಾದರೂ ಸರಿಯೇ ಎಂದು ಪ್ರತಿದಿನ ಅತಿ ಹೆಚ್ಚು ಸಂಚಾರ ಮಾಡುವ ರೈಲು ಪ್ರಯಾಣವನ್ನು ರದ್ದು ಮಾಡಿ ಕೊರೊನಾ ನಿಯಂತ್ರಣಕ್ಕೆ ಮುಂದೆ ಬಂದಿದೆ..

Advertisement

ಆದರೆ ಇತ್ತ ರೈಲುಗಳನ್ನೇ ನಂಬಿ‌ ಕೆಲಸಕ್ಕೆ ಹೋಗುತ್ತಿದ್ದ ಬಡ ಹಾಗೂ ಮಧ್ಯಮ ವರ್ಗದವರಿಗೆ ಇದರಿಂದ ದೊಡ್ಡ ಪೆಟ್ಟು ಬೀಳಲಿದೆ.. ಆದರೆ ಬೇರೆ ದಾರಿಯಿಲ್ಲದೇ ಈ ನಿರ್ಣಯ ಮಾಡಲೇ ಬೇಕಾದ್ದರಿಂದ ಕೈಗೊಳ್ಳಲಾಗಿದೆ..

Advertisement
Advertisement

Advertisement

About admin

Check Also

ರಾಜಕೀಯ ಎಂಟ್ರಿ ಬಗ್ಗೆ ಬಾಲಿವುಡ್ ನಟ ಸೋನು ಸೂದ್ ಹೇಳಿದ್ದೇನು ಗೊತ್ತೆ?

Advertisement ಕೊರೊನಾ ಮೊದಲನೇ ಅಲೆ ಆರ್ಭಟ, ಲಾಕ್ ಡೌನ್ ಸಂಕಷ್ಟದಿಂದ ಹಿಡಿದೂ ಕೋವಿಡ್ ಎರಡನೇ ಅಲೆಯಲ್ಲಿಯೂ ತತ್ತರಿಸಿರುವ ಹಲವರಿಗೆ ಬಾಲಿವುಡ್ …

Leave a Reply

Your email address will not be published.

Recent Comments

No comments to show.