ಟಿಕ್ ಟಾಕ್ ಪ್ರಿಯರಿಗೆ ದೊಡ್ಡ ಶಾಕ್.. ಹೌದು ಭಾರತದಲ್ಲಿ ಟಿಕ್ ಟಾಕ್ ಸೇರಿದಂತೆ 59 ಚೀನಾ ಆಒ ಗಳು ಬ್ಯಾನ್ ಆಗಿದ್ದು ಅಧಿಕೃತ ಆದೇಶ ಬಂದಾಗಿದೆ.. ಹೌದು ಚೀನಾ ಜೊತೆ ಗಡಿಯಲ್ಲಿನ ಸಂಘರ್ಷದ ಬೆನ್ನಲ್ಲೇ ಇದೀಗ ಚೀನಾದ 59 ಆಪ್ ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿ ಆದೇಶ ನೀಡಿದೆ..
ಟಿಕ್ಟಾಕ್, ಯುಸಿ ಬ್ರೌಸರ್ ಸೇರಿದಂತೆ ಒಟ್ಟು 59 ಆ್ಯಪ್ ಗಳನ್ನು ಸರ್ಕಾರ ಬ್ಯಾನ್ ಮಾಡಿದೆ.. ಆದರೆ ಈ ಹಿಂದೆಯೇ ಅನೇಕ ಭಾರತೀಯರು ಚೀನಾ ಆಪ್ ಗಳನ್ನು ತೆಗೆದು ಹಾಕಿದ್ದರು.. ನಮ್ಮ ಸೈನಿಕರಿಗೆ ಬೆಂಬಲ ಸೂಚಿಸುವ ಸಲುವಾಗಿ ಟಿಕ್ ಟಾಕ್ ಬ್ಯಾನ್ ಅಭಿಯಾನಗಖು ಕೂಡ ನಡೆದಿದ್ದವು.. ಇದೀಗ ಅಧಿಕೃತವಾಗಿ ಸರ್ಕಾರವೇ ಆದೇಶ ನೀಡಿ ಬ್ಯಾನ್ ಮಾಡಿರುವುದು ಸಂತೋಷದ ಸುದ್ದಿಯಾಗಿದೆ..
ಆದರೆ ಟಿಕ್ ಟಾಕ್ ಇಲ್ಲದೇ ಇರೋಕೆ ಆಗೊಲ್ಲಾ ಎನ್ನುತ್ತಿದ್ದ ನಿಬ್ಬಾ ನಿಬ್ಬಿಗಳ ಕತೆ ಅದೇನಾಗುವುದೋ.. ಅವರ ಗೋಳಾಟ ನೋಡಲಾಗದು.. ಒಂದೆರೆಡು ವೀಡಿಯೋ ಮಾಡಿ ದೊಡ್ಡ ಸ್ಟಾರ್ ಗಳಂತೆ ಆಡುತ್ತಿದ್ದವರು ಅನೇಕ ಮಂದಿ ಟ್ರೋಲ್ ಗೊಳಗಾಗುತ್ತಿದ್ದರು.. ಇನ್ನು ಮನೆಯಲ್ಲಿ ನಡೆಯೋ ಪ್ರತಿಯೊಂದು ವಿಚಾರವನ್ನು ಅಕ್ಕ ಸತ್ಲು.. ಚಿಕ್ಕಮ್ಮ ಸತ್ಲು ಅನ್ನೋದನ್ನೂ ಸಹ ಟಿಕ್ ಟಾಕ್ ಮಾಡಿ ಹಾಕುತ್ತಿದ್ದ ಜನರು ಇನ್ನು ಮುಂದೆಯಾದರೂ ಟಿಕ್ ಟಾಕ್ ಎಂಬ ಭ್ರಮೆಯನ್ನು ಬಿಟ್ಟು ನಿಜ ಜೀವನದಲ್ಲಿ ತಮ್ಮ ನೈಜ್ಯ ಕುಟುಂಬದ ಜೊತೆ ಬದುಕುವಂತಾಗಲಿ..