ಕೊರೊನಾ ದಿಂದಾಗಿ ದೇಶವೇ ಲಾಕ್ ಡೌನ್ ಆಯಿತು.. ಸಣ್ಣ ಬೀದಿ ಬದಿ ವ್ಯಾಪಾರಿಯಿಂದ ಹಿಡಿದು ದೊಡ್ಡ ಉದ್ಯಮಗಳು ಸಹ ಬಹುತೇಕ ನೆಲ ಕಚ್ಚಿರುವ ವಿಚಾರ ತಿಳಿದೇ ಇದೆ.. ಸಣ್ಣ ಸಣ್ಣ ವ್ಯಾಪಾರಿಗಳ ಜೀವನವಂತೂ ಹೇಳಲಾಗದು.. ಮದ್ಯಮ ವರ್ಗದವರು ಜೀವನ ಕಟ್ಟಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.. ದಿನಗೂಲಿ ನೌಕರರಿಗೆ ಒಂದು ದಿನ ಕೆಲಸವಿದ್ದರೆ ಮೂರು ದಿನ ಇಲ್ಲದಂತಾಗಿದೆ.. ಹಸಿವಿನ ಹೊಟ್ಟೆಯ ಮೇಲೆ ತಣ್ಣೀರಿನ ಬಟ್ಟೆ ಅಭ್ಯಾಸವಾಗಿ ಬಿಟ್ಟಿದೆ.. ಇನ್ನು ಚಿತ್ರೋದ್ಯಮದ ವಿಚಾರಕ್ಕೆ ಬಂದರೆ ಮೊದಲ ಹಂತದ ಲಾಕ್ ಡೌನ್ ಆದಾಗಿನಿಂದಲೂ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿಲ್ಲ.. ಇನ್ನು ಸಿನಿಮಾಗಳ ಬಿಡುಗಡೆಯಂತೂ ಕನಸಿನ ಮಾತಾಗಿದೆ.. ಕೊರೊನಾ ಕಡಿಮೆಯಾಗುವವರೆಗೂ ಚಿತ್ರಮಂದಿರಗಳಿಗೆ ಅನುಮತಿ ಸಿಗುವುದು ಸಹ ಸಂಶಯವಾಗಿದೆ..
ಆದರೆ ಈ ಎಲ್ಲಾ ಸಂದರ್ಭಗಳನ್ನು ಸರಿಯಾದ ರೀತಿಯಲ್ಲಿ ಆಲೋಚಿಸಿ ನೋಡಿದರೆ ಖಂಡಿತ ಮುಂಬರುವ ದಿನಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳು ಸಹ ಬೀದಿಗೆ ಬೀಳುವ ಸಾಧ್ಯತೆ ಇದೆ ಎಂದಿದ್ದಾರೆ ಪ್ರಥಮ್.. ಇದಕ್ಕೆ ಕಾರಣ ಸಿನಿಮಾ ಥಿಯೇಟರ್ ಗಳು.. ಹೌದು ಜನ ಸಾಮಾನ್ಯರಿಗೆ ತಿಳಿಯದಿರುವ ವಿಚಾರ ಸಾಕಷ್ಟಿದೆ.. ಥಿಯೇಟರ್ ಗಳು ಬಂದ್ ಆಗಿ ನಾಲ್ಕು ತಿಂಗಳಾಯಿತು.. ಥಿಯೇಟರ್ ನಿಭಾಯಿಸುವುದು ಒಂದು ಎರಡು ಸಾವಿರದ ಮಾತಾಗಿರುವುದಿಲ್ಲ.. ತಿಂಗಳ ಖರ್ಚು ಲಕ್ಷಗಳಲ್ಲಿಯೇ ಇರುತ್ತದೆ..
ಸಿನಿಮಾಗಳು ಇದ್ದಿದ್ದರೆ ಅದಕ್ಕೆ ತಕ್ಕ ಆದಾಯವನ್ನು ಅವರು ಗಳಿಸುತ್ತಿದ್ದರು.. ಆದರೀಗ ಥಿಯೇಟರ್ ಮಾಲಿಕರಿಗೆ ಕಷ್ಟದ ಸಂದರ್ಭ ಎದುರಾಗಿದೆ.. ಅತ್ತ ಸಿನಿಮಾಗಳು ಇಲ್ಲ.. ಇತ್ತ ಥಿಯೇಟರ್ ಗಳ ತಿಂಗಳ ಖರ್ಚನ್ನು ನಿಭಾಯಿಸಲೇ ಬೇಕಿದೆ.. ಒಂದು ಎರಡು ತಿಂಗಳಾಗಿದ್ದರೆ ಪರವಾಗಿಲ್ಲ.. ಆದರೆ ನಾಲ್ಕು ತಿಂಗಳಾಗುತ್ತಾ ಬಂತು.. ಮುಂಬರುವ ದಿನಗಳಲ್ಲೂ ಕೆಲ ತಿಂಗಳು ಸಿನಿಮಾ ಬಿಡುಗಡೆ ಆಗೋದು ಸಂಶಯದ ಮಾತು.. ಸಿನಿಮಾ ಬರಲಿ ಬಿಡಲಿ ಪ್ರತಿದಿನ ಒಂದು ಗಂಟೆಗಳ ಕಾಲ ಪ್ರೊಜೆಕ್ಷನ್ ಅನ್ನು ರನ್ ಮಾಡಲೇ ಬೇಕಿದೆ.. ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟಲೇ ಬೇಕಿದೆ..
ಈಗಾಗಲೇ ಮೈಸೂರಿನ ಹೆಮ್ಮೆಯ ಎರಡು ಚಿತ್ರಮಂದಿರಗಳು ಸಂಪೂರ್ಣವಾಗಿ ತನ್ನ ಪ್ರದರ್ಶನವನ್ನು ನಿಲ್ಲಿಸಿದವು.. ಮೈಸೂರಿಗೂ ಶಾಂತಲಾ ಚಿತ್ರಮಂದಿರಕ್ಕೂ ಎಮೋಷನಲ್ ನಂಟು ಇದ್ದರೂ ಸಹ.. ಯಾರು ಏನೂ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.. ಇದೇ ರೀತಿ ಮುಂದುವರೆದರೆ ಮುಂದೆ ನಮ್ಮ ಸಿನಿಮಾಗಳಿಗೆ ಥಿಯೇಟರ್ ಗಳೇ ಇಲ್ಲದಂತಾಗುತ್ತವೆ.. ಮಲ್ಟಿಪ್ಲೆಕ್ಸ್ ಗಳು ಹೇಗೋ ತಡೆದುಕೊಳ್ಳುತ್ತವೆ.. ಆದರೆ ಸಿಂಗಲ್ ಥಿಯೇಟರ್ ಗಳಿಗೆ ಇದು ದೊಡ್ಡ ಸಮಸ್ಯೆಯೇ ಆಗಿದ್ದು, ಸರ್ಕಾರ ಈ ಬಗ್ಗೆ ಗಮನ ನೀಡಿ ಸಮಸ್ಯೆಗೆ ಸ್ಪಂದಿಸಿ ವಿದ್ಯುತ್ ಬಿಲ್ ನಾದರೂ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ..