Breaking News

ಮೇಘನಾ ರಾಜ್ ಅವರ ಅಣ್ಣನೂ ಸಹ ಕನ್ನಡ ಹಾಗೂ ತಮಿಳಿನ ಖ್ಯಾತ ನಟ .. ಯಾರು ಗೊತ್ತಾ?

Advertisement

ಮೇಘನಾ ರಾಜ್ ಅವರ ಸೀಮಂತ ಸಮಾರಂಭವನ್ನು ಇತ್ತೀಚಿಗೆ ತಾನೇ ಮನೆಯಲ್ಲಿಯೇ ಸರಳವಾಗಿ ಆಚರಿಸಲಾಗಿತ್ತು.. ನಟ ಧ್ರುವ ಸರ್ಜಾ ಅವರೂ ಸಹ ತನ್ನ ಅತ್ತಿಗೆಯ ಬೇಬಿ ಶೋವರ್ ಕಾರ್ಯಕ್ರಮವನ್ನು ಖಾಸಗಿ ಹೊಟೆಲ್ ವೊಂದರಲ್ಲಿ ಆಯೋಜಿಸಿದ್ದರು.. ಈ ಸಮಯದಲ್ಲಿ ಹಲವಾರು ಕಲಾವಿದರು ಸ್ನೇಹಿತರು ಆಪ್ತರು ಕಾರ್ಯಕ್ರಮಕ್ಕೆ ಆಗಮಿಸಿ ಮೇಘನಾ ರಾಜ್ ಅವರನ್ನು ಹರಸಿದ್ದರು..

Advertisement

ಇನ್ನು ಸೀಮಂತ ಸಮಾರಂಭದಲ್ಲಿ ಮೇಘನಾ ರಾಜ್ ಅವರಿಗೆ ತುಂಬಾ ಹತ್ತಿರವಾದವರಂತೆ ನಿಂತ ಒಬ್ಬ ವ್ಯಕ್ತಿಯ ಫೋಟೋ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿತ್ತು. ಅವರು ಬೇರೆ ಯಾರೂ ಅಲ್ಲ, ಅವರೇ ಮೇಘನಾ ರಾಜ್ ಅವರ ಅಣ್ಣ ತೇಜ್.

ತೇಜ್ ಅವರು ಕನ್ನಡದಲ್ಲಿ ಈಗಾಗಲೇ ರಿವೈಂಡ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದ್ದು ಸಿನಿಮಾದ ನಿರ್ದೇಶನ ಕೂಡ ತೇಜ್ ಅವರೇ ಮಾಡಿರುವುದು ವಿಶೇಷ. ಈ ಚಿತ್ರದ ಜೊತೆಯಲೇ ರಾಮಚಾರಿ 2.0 ಸಿನಿಮಾದಲ್ಲೂ ನಾಯಕನಾಗಿ ಮಿಂಚಲಿದ್ದಾರೆ ನಟ ತೇಜ್.

Advertisement

ತೇಜ್ ಅವರು ನಟನಾ ರಂಗಕ್ಕೆ ಹೊಸಬರೇನೂ ಅಲ್ಲ, ಬಾಲನಟನಾಗಿ ಶಂಕರ್ ನಾಗ್ ಹಾಗೂ ಡಾ. ರಾಜ್ ಕುಮಾರ್ ಅವರೊಂದಿಗೆ ನಟಿಸಿ ಚಿಕ್ಕವಯಸ್ಸಿನಲ್ಲಿಯೇ ಸೈ ಎನಿಸಿಕೊಂಡಿದ್ದವರು.. ಇದೀಗ ತಮ್ಮ ವಿದ್ಯಾಭ್ಯಾಸಗಳನ್ನು ಮುಗಿಸಿ ವಿಜ್ಞಾನಿಯಾಗಿದ್ದರೂ ಕೂಡ ಅವರಲ್ಲಿರುವ ಕಲಾ ಪ್ರೇಮ ಅವರನ್ನು ಮತ್ತೆ ಚಿತ್ರರಂಗಕ್ಕೆ ಬರುವಂತೆ ಮಾಡಿದೆ.

Advertisement

ಈಗಾಗಲೇ ತಮಿಳು ಚಿತ್ರರಂಗದಲ್ಲಿಯೂ ತಮ್ಮ ಛಾಪನ್ನು ಮೂಡಿಸಿರುವ ನಟ ತೇಜ್, ತಮ್ಮ ನಟನಾ ಸಾಮರ್ಥ್ಯದಿಂದಾಗಿ ಕನ್ನಡ ಚಿತ್ರರಂಗದಲ್ಲಿಯೂ ಉತ್ತಮ ಹೆಸರು ಗಳಿಸುವಲ್ಲಿ ಎರಡು ಮಾತಿಲ್ಲ. ಅಂದ ಹಾಗೇ ಕಲಾ ಕುಟುಂಬದಿಂದಲೇ ಬಂದಿರುವ ತೇಜ್ ಅವರು ತಮ್ಮ ನಟನೆಯೊಂದಿಗೆ ಕನ್ನಡ ಚಿತ್ರರಂಗದ ಮೇಲೆ ಅಷ್ಟೇ ಅಭಿಮಾನವನ್ನೂ ಇಟ್ಟುಕೊಂಡಿದ್ದಾರೆ. ಹಾಗಾಗಿ ಈ ಉದಯೋನ್ಮುಖ ನಟನ ಯಶಸ್ಸಿಗೆ ನಮ್ಮೆಲ್ಲರ ಹಾರೈಕೆ..

Advertisement
Advertisement
Advertisement

About admin

Check Also

ರಾಜಕೀಯ ಎಂಟ್ರಿ ಬಗ್ಗೆ ಬಾಲಿವುಡ್ ನಟ ಸೋನು ಸೂದ್ ಹೇಳಿದ್ದೇನು ಗೊತ್ತೆ?

Advertisement ಕೊರೊನಾ ಮೊದಲನೇ ಅಲೆ ಆರ್ಭಟ, ಲಾಕ್ ಡೌನ್ ಸಂಕಷ್ಟದಿಂದ ಹಿಡಿದೂ ಕೋವಿಡ್ ಎರಡನೇ ಅಲೆಯಲ್ಲಿಯೂ ತತ್ತರಿಸಿರುವ ಹಲವರಿಗೆ ಬಾಲಿವುಡ್ …

Leave a Reply

Your email address will not be published.

Recent Comments

No comments to show.