ಕೊರೊನಾ ಎಂಬ ಮಹಾಮಾರಿ ಸಿರಿವಂತರಿಂದ ಹಿಡಿದು ಸಾಮಾನ್ಯರ ಜನ ಜೀವನವನ್ನು ಹಿಂಡುತ್ತಿದೆ.. ಅತ್ತ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗಿ ಆಸ್ಪತ್ರೆ ಬೆಡ್ ಗಳು ಭರ್ತಿಯಾಗುತ್ತಿವೆ.. ಇತ್ತ ಬಡವರು ಮಧ್ಯಮ ವರ್ಗದವರು ಜೀವನ ಕಟ್ಟಿಕೊಳ್ಳಲು ಹೆಣಗಾಡುವಂತಾಗಿದೆ.. ಇನ್ನು ವೈದ್ಯಕೀಯ ಶಿಕ್ಷಣ ಸಚಿವರ ಮನೆಯಲ್ಲೂ ಕೊರೊನಾ ಕಾಣಿಸಿಕೊಂಡಿದ್ದು, ಹೆಂಡತಿ, ಮಗಳು, ತಂದೆ, ಅಡುಗೆ ಕೆಲಸದವರು, ಸಹಾಯಕ ಕೆಲಸದವರು ಎಲ್ಲರಲ್ಲೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಎಲ್ಲರಿಗೂ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ..
ಅತ್ತ ಕೊರೊನಾ ನಿಯಂತ್ರಣದ ಉಸ್ತುವಾರಿ ವಹಿಸಿಕೊಂಡಿರುವ ಸುಧಾಕರ್ ಅವರ ಮನೆಯಲ್ಲೇ ಕೊರೊನಾ ಆಕ್ರಮಿಸಿದ್ದು, ಹೋಂ ಕ್ವಾರಂಟೈನ್ ನಲ್ಲಿದ್ದುಕೊಂಡೇ ಕೆಲಸ ಮಾಡುತ್ತಿದ್ದಾರೆ.. ಇನ್ನು ಇಂದು ಸುಧಾಕರ್ ಅವರ ಹುಟ್ಟುಹಬ್ಬವಿದ್ದು, ಕೊರೊನಾ ಸೋಂಕಿತರ ವಾರ್ಡ್ ನಲ್ಲಿರುವ ಪತ್ನಿ ಹಾಗೂ ಮಗಳಿಂದ ವಿಶೇಷ ಉಡುಗೊರೆ ಬಂದಿದ್ದು ನಿಜಕ್ಕೂ ಮನಕಲಕುವಂತಿದೆ..
ಹೌದು ಕೊರೊನಾ ಸೋಂಕಿತರ ವಾರ್ಡ್ ನಿಂದಲೇ ತನ್ನ ಅಪ್ಪನಿಗಾಗಿ ಹ್ಯಾಪಿ ಬರ್ತ್ ಡೇ ಪಪ್ಪಾ “ಸದಾ ನೀನು ಸಂತೋಷವಾಗಿರು.. ನಿನ್ನನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.. ಲವ್ ಯು ಅಪ್ಪ.. ನಿನಗಾಗಿ ನನ್ನ ಸಿಹಿ ಮುತ್ತುಗಳು.. ನಾನು ಆಸ್ಪತ್ರೆಯಲ್ಲಿ ಇದ್ದರೂ ಕೂಡ..” ಎಂದು ಒಂದಷ್ಟು ಮುತ್ತು ನೀಡುವ ಎಮೋಜಿ ಹಾಕಿ ವೀಡಿಯೋ ಒಂದನ್ನು ಎಡಿಟ್ ಮಾಡಿದ್ದು ಅಪ್ಪನ ಸಾಕಷ್ಟು ಫೋಟೋಗಳನ್ನು ಬಳಸಿ ತಾನೇ ವೀಡಿಯೋ ಕ್ರಿಯೇಟ್ ಮಾಡಿ ಮಧ್ಯರಾತ್ರಿಯಲ್ಲಿ ಕಳುಹಿಸಿದ್ದಾರೆ.. ಕೆಳಗಿನ ವೀಡಿಯೋ ನೋಡಿ..
ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸುಧಾಕರ್ ಅವರು “ಆಸ್ಪತ್ರೆಯಿಂದ ರಾತ್ರಿ 12 ಗಂಟೆಗೆ ನನ್ನ ಮಗಳು ಮತ್ತು ನನ್ನ ಪತ್ನಿ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನ ತಿಳಿಸಿದ್ದಾರೆ. ಈ ವಿಡಿಯೋ ಉಡುಗೊರೆ ನನ್ನ ಜೀವನದಲ್ಲೇ ಮದುರವಾದದ್ದು, ಪವಿತ್ರಪ್ರೀತಿಯ ಸಂಕೇತ. ಮಿಸ್ ಯು ಮೈ ಏಂಜಲ್ಸ್..” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..
ಆದಷ್ಟು ಬೇಗ ಸುಧಾಕರ್ ಅವರ ಪತ್ನಿ ಹಾಗೂ ಮಗಳು ಗುಣಮುಖರಾಗಿ ಮನೆಗೆ ಮರಳುವಂತಾಗಲಿ..