ಗಾನ ಗಂಧರ್ವ.. ಗಾಯನ ಲೋಕದ ಅದಮ್ಯ ಚೇತನ ಗಾಯಕ.. ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಇಂದು ತಮ್ಮ ಗಾಯನವನ್ನು ನಿಲ್ಲಿಸಿದ್ದಾರೆ. 74 ವರ್ಷ ವಯಸ್ಸಿನ ಎಸ್ ಪಿ ಬಿ ಕೋಟ್ಯಾನು ಕೋಟಿ ಅಭಿಮಾನಿಗಳನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.. 51 ದಿನಗಳ ಚಿಕಿತ್ಸೆ ಶುಭ ಸುದ್ದಿ ನೀಡಲಿಲ್ಲ.. ಬಹಳಷ್ಟು ದಿನಗಳಿಂದ ಐಸಿಯುನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಎಸ್ಪಿಬಿ ಅವರು ಇಂದು ಕೊನೆಯುಸಿರೆಳೆದಿದ್ದಾರೆ.. ಹೌದು ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ 1 ಗಂಟೆ ನಾಲ್ಕು ನಿಮಿಷಕ್ಕೆ ಚೆನ್ನೈ ನ ಎಂ ಜಿ ಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ..
ಎಸ್ ಪಿ ಬಿ ಅವರ ಮಗ ಚರಣ್ ಅವರು ಅಧಿಕೃತವಾಗಿ ಮಾಹಿತಿ ನೀಡಿದರು… ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಆಗಸ್ಟ್ 5ರಂದು ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 13ರ ತಡರಾತ್ರಿಯಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.. ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ಮಾಡಲಾಗುತ್ತಿತ್ತು. ಆಗಸ್ಟ್ 24ರಂದು ಕೊರೊನಾ ವರದಿ ನೆಗೆಟಿವ್ ಸಹ ಬಂದಿತ್ತು.. ಎಸ್ ಪಿ ಬಿ ಗುಣಮುಖರಾಗುವರು ಎಂದೇ ಎಲ್ಲರೂ ಭಾವಿಸಿದ್ದರು.. ಆದರೆ ವಿಧಿ ಆಟ ಬೇರೆಯೇ ಇತ್ತು… ಎಸ್ ಪಿ ಬಿ ಅವರ ಅಂತ್ಯಕ್ರಿಯೆಯನ್ನು ಚೆನ್ನೈನ ಫಾರ್ಮ್ ಹೌಸ್ ನಲ್ಲಿ ನಡೆಸಲಾಗುವುದು ಎನ್ನಲಾಗುತ್ತಿದೆ..
ಆಗಸ್ಟ್ ನಲ್ಲಿ ಕೊರೊನಾ ಕಾರಣದಿಂದ ಆಸ್ಪತ್ರೆ ಸೇರಿದ್ದ ಎಸ್ ಪಿ ಬಿ ಅವರು ವಿಡಿಯೋ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದರು.. ನನ್ನ ಆರೋಗ್ಯ ಸರಿ ಇರಲಿಲ್ಲ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಶೀತ ಮತ್ತು ಜ್ವರ ಕೂಡ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರ ಬಳಿಗೆ ಚಿಕಿತ್ಸೆ ಪಡೆಯಲು ಮುಂದಾದೆ. ಪರೀಕ್ಷೆಯ ಬಳಿಕ ಕೊರೊನಾ ಸೋಂಕು ಸಣ್ಣ ಪ್ರಮಾಣದಲ್ಲಿರುವುದು ಗೊತ್ತಾಯಿತು. ಮನೆಯಲ್ಲಿಯೇ ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದರು. ಆದರೆ ಕುಟುಂಬದ ಸದಸ್ಯರು ಒಪ್ಪದ ಕಾರಣ ಆಸ್ಪತ್ರೆಗೆ ದಾಖಲಾದೆ. ನನ್ನ ಆರೋಗ್ಯದ ಬಗ್ಗೆ ಯಾರೊಬ್ಬರು ಚಿಂತಿಸಬೇಕಿಲ್ಲ. ನನ್ನ ಆರೋಗ್ಯ ವಿಚಾರಿಸಲು ಮೊಬೈಲ್ ಕಾಲ್ ಮಾಡಬೇಡಿ. ಕಾಲ್ ಸ್ವೀಕರಿಸುವ ಸ್ಥಿತಿಯಲ್ಲಿ ನಾನಿಲ್ಲ. ಶೀತದ ಹೊರತಾಗಿ ನಾನು ಚೆನ್ನಾಗಿದ್ದೇನೆ. ಜ್ವರವೂ ಕಡಿಮೆಯಾಗಿದೆ. ಇನ್ನೆರಡು ದಿನಗಳಲ್ಲಿ ಸಂಪೂರ್ಣ ಗುಣಮುಖನಾಗುತ್ತೇನೆ ಎಂದು ಹೇಳಿದ್ದರು..
ಕಳೆದ ಜುಲೈ ತಿಂಗಳಿನಲ್ಲಷ್ಟೇ ಬಾಲಸುಬ್ರಹ್ಮಣ್ಯಂ ಅವರು ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು ಸಾಹಿತಿ ವೈರಮುತ್ತು ಅವರು ರಚಿಸಿದ್ದ ಹಾಡಿಗೆ ಧ್ವನಿಯನ್ನು ಸಹ ನೀಡಿದ್ದರು. ಆದರ್ವ್ ಇನ್ನೆಂದೂ ಎಸ್ ಪಿ ಬಿ ಅವರ ಗಾಯನ ಕೇಳದಂತಾಗಿ ಹೋಯ್ತು..
ಪ್ರತಿದಿನವೂ ಎಸ್ ಪಿ ಬಿ ಅವರ ಆರೋಗ್ಯದ ಕುರಿತು ಮಾಹಿತಿ ನೀಡುತ್ತಿದ್ದ ಚರಣ ಅವರು ಕೆಲ ದಿನಗಳ ಹಿಂದೆ ಅಪ್ಪನ ಆರೋಗ್ಯ ಸ್ಥಿರವಾಗಿದೆ.. ವೆಂಟಿಲೇಟರ್ ನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.. ಉಳಿದೆಲ್ಲ ವರದಿಗಳು ನಾರ್ಮಲ್ ಆಗಿದೆ.. ಯಾವುದೇ ಇನ್ಫೆಕ್ಷನ್ ಕಂಡು ಬಂದಿಲ್ಲ. ಆದರೆ ಶ್ವಾಸಕೋಶ ಹಾಗೂ ಉಸಿರಾಟದಲ್ಲಿ ಇನ್ನೂ ಹೆಚ್ಚಿನ ವೃದ್ಧಿಯಾಗಬೇಕಿದೆ.. ಇದೀಗ ಅವರು ಕುಳಿತುಕೊಳ್ಳುತ್ತಿದ್ದು, ವೈದ್ಯರ ಸಹಾಯದ ಮೇರೆಗೆ ಪ್ರತಿ ದಿನ 20 ನಿಮಿಷಗಳ ಕಾಲ ಕುಳಿತುಕೊಳ್ಳುತ್ತಿದ್ದಾರೆ ಎಂದಿದ್ದರು..
ಆದರೆ ಅಪ್ಪ ಗುಣಮುಖರಾಗುವರು ಎಂಬ ನಂಬಿಕೆ ಇದೀಗ ಹುಸಿಯಾಗಿ ಹೋಯ್ತು.. ಅಪ್ಪನ ವಿಚಾರವನ್ನು ಮಾದ್ಯಮಕ್ಕೆ ತಿಳಿಸುವ ವೇಳೆ ಬಹಳ ದುಃಖ ತಡೆದುಕೊಂಡು ಆ ಸಮಯದಲ್ಲಿಯೂ ಅಪ್ಪನಿಗೆ ಚಿಕಿತ್ಸೆ ನೀಡಿದ ವೈದ್ಯರಿಂದ ಹಿಡಿದು ಆಸ್ಪತ್ರೆಯಲ್ಲಿ ಎಸ್ ಪಿ ಬಿ ಅವರ ಸೇವೆ ಮಾಡಿದ ನರ್ಸ್ ಗಳಿಗೂ ಸಹ ನಾನು ಚಿರಋಣಿ ಎಂದಿದ್ದಾರೆ.. ಅಪ್ಪನಂತೆಯೇ ಚರಣ್ ಅವರೂ ಸಹ ಯಾರಲ್ಲೂ ಬೇದಭಾವ ಮಾಡದೇ ದೊಡ್ಡತನ ತೋರಿದ್ದಾರೆ.. ಕೊನೆ ಘಳಿಗೆ ವರೆಗೂ ಅಪ್ಪ ಉಳಿಯುವರು ಎಂಬ ನಂಬಿಕೆ ಇತ್ತು.. ಎಂದು ಬಹಳ ಗದ್ಗದಿತವಾಗಿ ಅವರು ಹೇಳುವಾಗ ನಿಜಕ್ಕೂ ಹತ್ತಿರದಲ್ಲಿದ್ದ ಆಪ್ತರೂ ಸಹ ಕಣ್ಣೀರಿಟ್ಟರು.. ಕಾಲ ಮಿಂಚಿದೆ.. ಎಸ್ ಪಿ ಬಿ ಅವರ ಆತ್ಮಕ್ಕೆ ಶಾಂತಿ ದೊರಕಲಿ.. ಅವರ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿ ನೀಡಲಿ..