ಭಾರತ ಸಂಗೀತ ಲೋಕದ ದಂತಕತೆ ಎಸ್ ಪಿ ಬಿ ಅವರು ಇಹಲೋಕ ತ್ಯಜಿಸಿ ನಾಲ್ಕು ದಿನಗಳು ಕಳೆದಿವೆ.. ಆದರೆ ಕುಟುಂಬಕ್ಕೆ ಒಂದಾದ ಮೇಲೆ ಒಂದರಂತೆ ನೋವು ಹೆಚ್ಚಾಗುತ್ತಲೇ ಇದೆ.. ಹೌದು ಮೊನ್ನೆಯಷ್ಟೇ ಎಸ್ ಪಿ ಬಿ ಅವರಿಗೆ 51 ದಿನಗಳು ಚಿಕಿತ್ಸೆ ನೀಡಿದ್ದಕ್ಕಾಗಿ ಆಸ್ಪತ್ರೆ ದುಬಾರಿ ಬಿಲ್ ನೀಡಿದೆ.. ಹಾಗೂ ಆ ಬಿಲ್ ಅನ್ನು ಪಾವತಿ ಮಾಡಲಾಗದೆ ಕುಟುಂಬ ತಮಿಳು ನಾಡು ಸರ್ಕಾರ ಹಾಗೂ ಉಪರಾಷ್ಟ್ರಪತಿ ಅವರ ಬಳಿ ತೆರಳಿತ್ತು ಎಂದು ಗಾಳಿಸುದ್ದಿ ಹಬ್ಬಿತ್ತು..
ಆದರೆ ಆ ಬಗ್ಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಎಸ್ ಪಿ ಬಿ ಅವರ ಮಗ ಚರಣ್ ಅವರು ಈ ಬಗ್ಗೆ ಬಹಳ ನೋವಾಗುತ್ತಿದೆ.. ಆಸ್ಪತ್ರೆಯವರು ಅಪ್ಪನನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದಾರೆ.. ಅದಕ್ಕಾಗಿ ಕುಟುಂಬ ಧನ್ಯವಾದಗಳನ್ನು ತಿಳಿಸುತ್ತೇವೆ.. ಆದರೆ ಬಿಲ್ ವಿಚಾರದಲ್ಲಿ ನಾವು ಯಾರ ಬಳಿಯೂ ಹೋಗಿಲ್ಲ.. ಆಸ್ಪತ್ರೆ ಬಿಲ್ ಎಷ್ಟಾಯಿತು ಎಂಬುದರ ಬಗ್ಗೆ ಆಸ್ಪತ್ರೆ ಹಾಗೂ ನಾನು ಒಟ್ಟಿಗೆ ಸುದ್ದಿ ಗೋಷ್ಠಿ ನಡೆಸುತ್ತೇವೆ.. ಯಾರೋ ಹಬ್ಬಿಸಿದ ಸುದ್ದಿಗೆ ನಾವುಗಳು ಈ ರೀತಿ ಮಾಡಬೇಕಿದೆ ಎಂದಿದ್ದರು.
ಆದರೀಗ ಎಸ್ ಪಿ ಬಿ ಅವರ ಅಂತ್ಯಕ್ರಿಯೆ ವೇಳೆ ಸ್ಟಾರ್ ನಟರು ಯಾರೂ ಸಹ ಬಾರದ ಕಾರಣ ನಟರ ಮೇಲೆ ಜನರು ಅಸಮಾಧಾಮ ವ್ಯಕ್ತ ಪಡಿಸಿದ್ದರು.. ಹೌದು ಎಸ್ ಪಿ ಬಿ ಅವರು ಭಾರತದ ದಂತ ಕತೆ.. ಅವರು ನೆಲೆಸಿದ್ದು ಚೆನ್ನೈ ನಲ್ಲಿ ಆದರೆ ಯಾವೊಬ್ಬ ತಮಿಳಿನ ಸ್ಟಾರ್ ನಟನೂ ಸಹ ಎಸ್ ಪಿ ಬಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ.. ನಟ ವಿಜ ಮಾತ್ರ ಅಂತಿಮ ಸಮಯದಲ್ಲಿ ಆಗಮಿಸಿ ನಮನ ಸಲ್ಲಿಸಿ ತೆರಳಿದರು.. ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಲಷ್ಟೇ ಸೀಮಿತರಾದರು.. ಆದರೆ ನಟ ಅಜಿತ್ ಅವರು ಎಸ್ ಪಿ ಬಿ ಅವರು ಇಲ್ಲವಾದ ಬಳಿಕ ಸಂಪೂರ್ಣ ಮೌನಕ್ಕೆ ಶರಣಾದರು.. ಈ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾದವು.
ಆದರೆ ಈ ಬಗ್ಗೆ ಎಸ್ ಪಿ ಬಿ ಅವರ ಮಗ ಚರಣ್ ಅವರು ಮಾತನಾಡಿ ನಿಜಕ್ಕೂ ಇದು ನಮಗೆ ಬಹಳ ಕಿರಿಕಿರಿಯನ್ನು ಉಂಟು ಮಾಡುತ್ತಿದೆ.. ಇಂತದ್ದಕ್ಕೆಲ್ಲಾ ನಾವು ಏಕೆ ಪ್ರತಿಕ್ರಿಯೆ ನೀಡಬೇಕು.. ಅಜಿತ್ ಅವರು ಅಪ್ಪನಿಗೂ ನಮಗೂ ಒಳ್ಳೆಯ ಸ್ನೇಹಿತರು.. ಅವರು ಮನೆಯಲ್ಲಿಯೇ ಸಂತಾಪ ಸೂಚಿಸಿರವಹುದು.. ಅಂತ್ಯಕ್ರಿಯೆಗೆ ಬಂದರೋ ಅಥವಾ ಇಲ್ಲವೋ ಅನ್ನುವುದು ಮುಖ್ಯವಲ್ಲ.. ನಾವು ನಮ್ಮ ತಂದೆಯನ್ನು ಕಳೆದುಕೊಂಡಿದ್ದೇವೆ.. ದೇಶ ಎಸ್ ಪಿ ಬಿ ಅವರನ್ನು ಕಳೆದುಕೊಂಡಿದೆ.. ನಮಗೆ ಅತ್ತು ಸಮಾಧಾನ ಆಗಲು ಸಮಯ ಕೊಡಿ.. ಅಪ್ಪನ ಸಾ ವಿನ ಬಗ್ಗೆ ಮಾತನಾಡಿದ್ದಾರೋ ಇಲ್ಲವೋ.. ಅದು ಮುಖ್ಯವಾಗುವುದಿಲ್ಲ.. ಅದನ್ನು ಚರ್ಚೆ ಮಾಡಬೇಡಿ.. ಯಾರಾದರೂ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರಲಿ ಅಥವಾ ಇಲ್ಲವಾಗಲಿ ಅದನ್ನು ಮಾತನಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ..