ಇಂದು ಭಾರತ ಚಿತ್ರರಂಗಕ್ಕೆ ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ಅತ್ಯಂತ ದುರ್ದೈವದ ದಿನ.. ಈ ವರ್ಷ ಇನ್ನು ಅದೆಷ್ಟು ನೋವು ನೋಡಬೇಕೋ ತಿಳಿಯದು.. ಆದರೆ ಇಂದು ಆದ ನೋವು ಮಾತ್ರ ಯಾರಿಂದಲೂ ಕಡಿಮೆ ಮಾಡಲು ಸಾಧ್ಯವೇ ಇಲ್ಲ.. ಗಾಯನ ಲೋಕದ ಗಂಧರ್ವ ತನ್ನ ಪಯಣವನ್ನು ಮುಗಿಸಿ ಬಾರದ ಲೋಕಕ್ಕೆ ತೆರಳುತ್ತಿರುವುದು ನಿಜಕ್ಕೂ ಈ ಕ್ಷಣ ಸುಳ್ಳಾಗಬಾರದ ಎನಿಸುತ್ತಿದೆ..
ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿ ಎಸ್ ಪಿ ಬಿ ಸರ್ ಅವರ ಅಗಲಿಕೆಯ ವಿಚಾರ ತಿಳಿದು ನೂರಾರು ಗಣ್ಯರು, ಆಪ್ತರು ಕಂಬನಿ ಮಿಡಿದಿದ್ದಾರೆ.. ಮುಖ್ಯಮಂತ್ರಿಗಳು ಸಿನಿಮಾ ಗಣ್ಯರು ಎಲ್ಲರೂ ಶ್ರದ್ಧಾಂಜಲಿ ಅರ್ಪಿಸಿದ್ದಾರೆ..
ಕನ್ನಡದ ಗಾಯಕ ರಾಜೇಶ್ ಕೃಷ್ಣನ್ ಅವರು ಎಸ್ ಪಿ ಬಿ ಅವರ ವಿಚಾರ ತಿಳಿದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.. ಹೌದು ರಾಜೇಶ್ ಕೃಷ್ಣನ್ ಅವರ ಜೀವನದಲ್ಲಿ ಎಸ್ ಪಿ ಬಿ ಅವರು ಪ್ರಮುಖ ಪಾತ್ರ ವಹಿಸಿದ್ದರು.. ಆದರೆ ಇಂದು ಆ ಚೇತನ ಮರೆಯಾಗಿ ಹೋಗಿದೆ..
ಎಸ್ ಪಿ ಬಿ ಅವರು ರಾಜೇಶ್ ಕೃಷ್ಣನ್ ಅವರನ್ನು ಮಗನಂತೆಯೇ ಕಾಣುತ್ತಿದ್ದರು.. ಇಂದು ಎಸ್ ಪಿ ಬಿ ಸರ್ ಅವರ ವಿಚಾರ ತಿಳಿದು ರಾಜೇಶ್ ಕೃಷ್ಣನ್ ಅವರು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.. ನನಗೆ ಆಗ್ತಿಲ್ಲ.. ಏನು ಮಾತನಾಡಲು ಸಾಧ್ಯವಿಲ್ಲ.. ನನಗೆ ಮಾತೇ ಬರ್ತಾ ಇಲ್ಲ ಎಂದು ಗದ್ಗದಿತರಾಗಿದ್ದಾರೆ..
ಇಂದು ನಾನೇನಾದರೂ ಬದುಕಿದ್ದೀನಿ ಎಂದರೆ ಅದಕ್ಕೆ ಎಸ್ ಪಿ ಬಿ ಅವರೇ ಕಾರಣ.. ಅವರಿಲ್ಲದೇ ನಾನು ಹೇಗಿರಲಿ.. ನನ್ನ ಸ್ನೇಹಿತ ನನ್ನ ಮಾರ್ಗದರ್ಶಕ ಎಲ್ಲವೂ ಅವರೇ ಆಗಿದ್ದರು.. ಅವರೊಂದು ಪರ್ವತ.. ಮತ್ತೆ ಅಂತಹ ವ್ಯಕ್ತಿ ಹುಟ್ಟೀಕೆ ಸಾಧ್ಯವಿಲ.. ನಾನು ಏನೇ ಹಾಡಿದರೂ ಅದು ಅವರ ಭಿಕ್ಷೆ ಎಂದಿದ್ದಾರೆ..
ಎಸ್ ಪಿ ಬಿ ಸರ್ ಒಂದು ಚೂರು ಮುನ್ನೆಚ್ಚರಿಕೆ ಏಕೆ ತೆಗೆದುಕೊಳ್ಳಲಿಲ್ಲ ನೀವು.. ಹಾಳಾದ್ ಈ ಕೊರೊನಾ ಯಾಕ್ ಬಂತು.. ಇವತ್ತು ನನ್ನ ದೇವರು ದೇವರ ಬಳಿ ಹೊರಟು ದೇವರಾದರು ಎಂದು ಬಿಕ್ಕಳಿಸಿ ಅತ್ತಿದ್ದಾರೆ.. ನಿಜಕ್ಕೂ ಎಸ್ ಪಿ ಬಿ ಸರ್ ಇಲ್ಲದೇ ಈ ರೀತಿ ಕೋಟ್ಯಾಂತರ ಜನ ಕಣ್ಣೀರಿಟ್ಟಿದ್ದಾರೆ..
ಎಸ್ ಪಿ ಬಿ ಸರ್ ನೀವೆಂದೂ ಅಮರ.. ನೀವು ಯಾವಗಲೂ ಹೇಳುತ್ತಿದ್ದಿರಿ.. ಮತ್ತೆ ನಾನು ಹುಟ್ಟಿದರೆ.. ನನಗೆ ಮತ್ತೊಂದು ಜನ್ಮವಿದ್ದರೆ ಅದು ಕನ್ನಡ ನಾಡಿನಲ್ಲಿ ಎಂದು.. ದಯಮಾಡಿ ಮತ್ತೊಮ್ಮೆ ಹುಟ್ಟಿ ಬನ್ನಿ.. ನಿಮಗಾಗಿ ಕೋಟ್ಯಾನು ಕೋಟಿ ಹೃದಯಗಳು ಕಾಯುತ್ತಲೇ ಇರುತ್ತವೆ… ನಿಮ್ಮ ಆತ್ಮಕ್ಕೆ ಚಿರಶಾಂತಿ ದೊರಕಲಿ ಸರ್..