Breaking News

ಮಗನಿಗೆ ಸುಂದರ ಹೆಸರಿಟ್ಟ ಶ್ರೇಯಾ ಘೋಷಾಲ್​​​​…ಪತಿ ಹಾಗೂ ಮಗುವಿನೊಂದಿಗೆ ಇರುವ ಫೋಟೋ ಹಂಚಿಕೊಂಡ ಗಾಯಕಿ

Advertisement

ಸಿನಿಮಾ ಮಂದಿಗೆ ಲಕ್ಷಾಂತರ ಸಂಖ್ಯೆಯ ಫ್ಯಾನ್ ಫಾಲೋಯಿಂಗ್ ಇರುವುದು ಸಾಮಾನ್ಯ. ಅಭಿಮಾನಿಗಳು ತಮ್ಮ ಮೆಚ್ಚಿನ ಸೆಲಬ್ರಿಟಿಗಳ ಪ್ರತಿ ಅಪ್​ಡೇಟ್ ತಿಳಿಯಲು ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡುತ್ತಿರುತ್ತಾರೆ. ಅದು ರಾಜಕೀಯ ವ್ಯಕ್ತಿಗಳಾಗಲಿ, ಕ್ರೀಡಾ ತಾರೆಯಾಗಲಿ, ಅಥವಾ ಸಿನಿಮಾ ನಟ-ನಟಿಯಾಗಲಿ, ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿಯಲು ಅಭಿಮಾನಿಗಳಿಗೆ ಎಲ್ಲಿಲ್ಲದ ಕಾತರ. ಇನ್ನು ಸಿನಿಮಾ ತಾರೆಯರು ಕೂಡಾ ಅಭಿಮಾನಿಗಳಿಗಾಗಿ ತಮ್ಮ ವೈಯಕ್ತಿಕ-ವೃತ್ತಿ ಜೀವನದ ಪ್ರಮುಖ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋಗಳ ಸಹಿತ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಗಂಡುಮಗುವಿಗೆ ಜನ್ಮ ನೀಡಿರುವ ವಿಚಾರ ನಿಮಗೆ ತಿಳಿದೇ ಇದೆ. ಶ್ರೇಯಾ ಗರ್ಭಿಣಿ ಎಂದು ತಿಳಿದಾಗಿನಿಂದ ಅಭಿಮಾನಿಗಳು ಆಕೆಗೆ ಗಂಡಾಗಬಹುದಾ…ಹೆಣ್ಣು ಮಗು ಜನಿಸಬಹುದಾ ಎಂದು ಕುತೂಹಲದಿಂದ ಕಾಯುತ್ತಿದ್ದರು. ಕಳೆದ ತಿಂಗಳು ಶ್ರೇಯಾ ಗಂಡುಮಗುವಿಗೆ ಜನ್ಮ ನೀಡಿದ್ದರು. ಇದೀಗ ಆ ಮಗುವಿಗೆ ನಾಮಕರಣ ಕೂಡಾ ಮಾಡಿದ್ದಾರೆ.

Advertisement

ಶ್ರೇಯಾ ಮೇ 22 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ವಿಚಾರವನ್ನು ಶ್ರೇಯಾ ಪತಿ ಶಿಲಾದಿತ್ಯ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮೆಚ್ಚಿನ ಗಾಯಕಿ ತಾಯಿಯಾಗಿರುವ ವಿಚಾರ ಕೇಳಿ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದರು. ಆದಷ್ಟು ಬೇಗ ಮಗುವಿನ ಹೆಸರನ್ನು ತಿಳಿಸಿ ಎಂದು ಬೇಡಿಕೆ ಇಟ್ಟಿದ್ದರು. ಇದೀಗ ಶ್ರೇಯಾ ಹಾಗೂ ಶಿಲಾದಿತ್ಯ ಮಗನಿಗೆ ನಾಮಕರಣ ಮಾಡಿದ್ದು ‘ದೇವಯಾನ್ ಮುಖ್ಯೋಪಾಧ್ಯಾಯ’ ಎಂಬ ಹೆಸರನ್ನು ರಿವೀಲ್ ಮಾಡಿದ್ಧಾರೆ. ಮಗುವಿನ ಹೆಸರು ಕೇಳಿ ನೆಟಿಜನ್ಸ್, ಶ್ರೇಯಾ ದಂಪತಿ ಹಾಗೂ ಮಗುವಿಗೆ ಶುಭ ಕೋರುತ್ತಿದ್ಧಾರೆ. ಮಗುವಿನ ಹೆಸರು ಬಹಳ ಚೆನ್ನಾಗಿದೆ. ಆದಷ್ಟು ಬೇಗ ಮಗುವಿನ ಮುಖವನ್ನು ತೋರಿಸಿ ಎಂದು ಮನವಿ ಮಾಡಿದ್ದಾರೆ.

ಪತಿ ಶಿಲಾದಿತ್ಯ ಹಾಗೂ ಮಗುವಿನೊಂದಿಗೆ ಇರುವ ಫೋಟೋವನ್ನು ಶ್ರೇಯಾ ಘೋಷಾಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ಧಾರೆ. ”ನಿಮ್ಮೆಲ್ಲರಿಗೂ ನಮ್ಮ ಮುದ್ದಿನ ಮಗ ದೇವಯಾನ್ ಮುಖ್ಯೋಪಾಧ್ಯಾಯನನ್ನು ಪರಿಚಯಿಸುತ್ತಿದ್ದೇವೆ. ಮೇ 22 ರಂದು ಜನಿಸಿದ ಕಂದ ನಮ್ಮ ಜೀವನವನ್ನು ಸಂಪೂರ್ಣ ಬದಲಿಸಿದ್ಧಾನೆ. ಅವನನ್ನು ನೋಡಿದ ಮೊದಲ ನೋಟದಲ್ಲೇ ನಮ್ಮ ಹೃದಯವನ್ನು ಸಂಪೂರ್ಣ ಪ್ರೀತಿಯಿಂದ ತುಂಬಿದ್ಧಾನೆ” ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಗಣ್ಯರು ಶ್ರೇಯಾ ಘೋಷಾಲ್​​ಗೆ ಶುಭ ಕೋರಿದ್ಧಾರೆ. ಅಷ್ಟೇ ಅಲ್ಲ, ಆದಷ್ಟು ಬೇಗ ನಿಮ್ಮ ಹೊಸ ಹಾಡುಗಳನ್ನು ನಾವು ಕೇಳಬೇಕು ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

Advertisement

ಶ್ರೇಯಾ ಘೋಷಾಲ್ ಹಾಗೂ ಶಿಲಾದಿತ್ಯ ಅವರದ್ದು ಪ್ರೇಮ ವಿವಾಹ. ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಇವರು 5 ಫೆಬ್ರವರಿ 2015 ರಂದು ವಿವಾಹವಾಗಿದ್ದರು. ಕಳೆದ ತಿಂಗಳು 22 ರಂದು ಶ್ರೇಯಾ ತಮ್ಮ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. 2002 ರಲ್ಲಿ ‘ದೇವ್​ದಾಸ್’ ಚಿತ್ರಕ್ಕಾಗಿ ಹಾಡುವ ಮೂಲಕ ಬಾಲಿವುಡ್ ಪಯಣ ಆರಂಭಿಸಿದ ಶ್ರೇಯಾ ಘೋಷಾಲ್ ಇದುವರೆಗೂ ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಒಡಿಶಾ, ತುಳು, ಗುಜರಾತಿ ಸೇರಿದಂತೆ ಬಹುತೇಕ ಎಲ್ಲಾ ಭಾಷೆಗಳಲ್ಲೂ ಹಾಡು ಹಾಡಿದ್ಧಾರೆ. 2003 ರಲ್ಲಿ ಬಿಡುಗಡೆಯಾದ ‘ಪ್ಯಾರಿಸ್ ಪ್ರಣಯ’ ಸಿನಿಮಾದ ಕೃಷ್ಣ ನೀ ಬೇಗನೆ ಬಾರೋ….ಮೊದಲ ಬಾರಿಗೆ ಶ್ರೇಯಾ ಹಾಡಿದ ಕನ್ನಡ ಹಾಡು. ಇದುವರೆಗೂ ಕನ್ನಡದಲ್ಲಿ ಶ್ರೇಯಾ ಘೋಷಾಲ್ ಸುಮಾರು 300 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

Advertisement

-ರಕ್ಷಿತ ಕೆ.ಆರ್. ಸಾಗರ

Advertisement
Advertisement

Advertisement

About RJ News Kannada

Check Also

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

Advertisement ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, …

Leave a Reply

Your email address will not be published.

Recent Comments

No comments to show.