Breaking News

ನಾಗಿಣಿ ಧಾರಾವಾಹಿಯಲ್ಲಿ ಮಿಂಚುತ್ತಿರುವ ಈ ಪುಟ್ಟ ಕಲಾವಿದೆ ಯಾರು ಗೊತ್ತಾ?

Advertisement

ಜೀ ವಾಹಿನಿಯಲ್ಲಿ ಕಳೆದ ವಾರದಿಂದ ಆರಂಭಗೊಂಡ ನಾಗಿಣಿ 2 ಧಾರಾವಾಹಿ ಮೊದಲ ವಾರವೇ ಎಲ್ಲಾ ಕಡೆಯಿಂದಲೂ ಒಳ್ಳೆಯ ರೆಸ್ಪಾನ್ಸ್ ಪಡೆಯುತ್ತಿದೆ.. ಈ ಹಿಂದೆ ದೊಡ್ಡ ಯಶಸ್ಸು ಕಂಡ ನಾಗಿಣಿ ಧಾರಾವಾಹಿಯ ಎರಡನೇ ಭಾಗವನ್ನು ಮತ್ತಷ್ಟು ಚೆನ್ನಾಗಿ ತೆರೆ ಮೇಲೆ ತರಲು ಧಾರಾವಾಹಿ ತಂಡ ಸಾಕಷ್ಟು ಶ್ರಮವಹುಸುತ್ತಿದೆ ಎನ್ನಬಹುದು..

Advertisement

ಟೆಕ್ನಾಲಜಿಯನ್ನು ಬಳಸಿ ಅದ್ಭುತವಾಗಿ ಗ್ರಾಫಿಕ್ಸ್ ಗಳನ್ನು ನೈಜ್ಯತೆಯ ರೀತಿಯಲ್ಲಿ ತರುತ್ತಿರುವುದು ಒಂದು ಕಡೆಯಾದರೆ ಧಾರಾವಾಹಿಯಲ್ಲಿ ಪಾತ್ರಗಳಿಗೆ ಕಲಾವಿದರ ಆಯ್ಕೆ ನಿಜಕ್ಕೂ ಹೇಳಿ ಮಾಡಿಸಿದಂತಿದೆ.. ಅದರಲ್ಲಿ ಶಿವಾನಿ ಪಾತ್ರಕ್ಕೆ ಬಾಲ ಕಲಾವಿದೆಯಾಗಿ ಪುಟಾಣಿಯೊಂದು ಅಭಿನಯಿಸುತ್ತಿದೆ..

Advertisement

ಈಕೆ ನೋಡಲಷ್ಟೇ ಪುಟಾಣಿ ಆದರೆ ನಟನೆ ಅಂತ ನಿಂತರೆ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುವ ಅದ್ಭುತ ನಟಿ.. ಈಗಾಗಲೇ ದೊಡ್ಡ ದೊಡ್ಡ ಕಲಾವಿದರ ಬಳಿ ಶಹಬ್ಬಾಸ್ ಗಿರಿ ಪಡೆದಿರುವ ಈಕೆಯನ್ನು ನಾವು ಈಗಾಗಲೇ ಸಾಕಷ್ಟು ಬಾರಿ ನೋಡಿದ್ದೇವೆ..

Advertisement

ಹೌದು ಈ ಬಾಲ ಕಲಾವಿದೆಯ ಹೆಸರು ಶರ್ವರಿ.. ಈ ಹಿಂದೆ ಡ್ರಾಮಾ ಜೂನಿಯರ್ಸ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ ಈ ಪುಟಾಣಿಯನ್ನು ಮೆಚ್ಚಿಕೊಳ್ಳದವರು ಯಾರೂ ಇಲ್ಲ.. ಈಕೆಯಲ್ಲಿನ ಪ್ರತಿಭೆಯ ನೋಡಿ ಲಕ್ಷ್ಮಿ ಅವರೆ ತಲೆ ಬಾಗಿದ್ದರು..

Advertisement

ಅಷ್ಟೇ ಅಲ್ಲದೆ ಶರ್ವರಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದಲ್ಲಿಯೂ ಸುದೀಪ್ ಅವರ ಮಗಳ ಪಾತ್ರದಲ್ಲಿ ಅಭಿನಯಿಸಿದ್ದಾಳೆ.. ಅಷ್ಟೇ ಅಲ್ಕದೆ ದೇಶದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಶರ್ವರಿ ಈ ಹಿಂದೆ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದಿದ್ದಾಗ ಅವರನ್ನೂ ಕೂಡ ಭೇಟಿ ಮಾಡಿದ್ದಳು.. ಇದೀಗ ನಾಗಿಣಿ‌ ಧಾರಾವಾಹಿ ಮೂಲಕ ಜನರ ಮನಸೂರೆಗೊಳ್ಳುತ್ತಿದ್ದಾಳೆ..

ಪುಟ್ಟ ದೇಹದ ತುಂಬೆಲ್ಲಾ ಪ್ರತಿಭೆಯನ್ನೇ ಹೊತ್ತು ತಂದಿರುವ ಪುಟಾಣಿ ಈ ಶರ್ವರಿ.. ಈ ಮುದ್ದು ಕಂದನಿಗೆ ಶುಭವಾಗಲಿ..

Advertisement
Advertisement

About admin

Check Also

ರಾಜಕೀಯ ಎಂಟ್ರಿ ಬಗ್ಗೆ ಬಾಲಿವುಡ್ ನಟ ಸೋನು ಸೂದ್ ಹೇಳಿದ್ದೇನು ಗೊತ್ತೆ?

Advertisement ಕೊರೊನಾ ಮೊದಲನೇ ಅಲೆ ಆರ್ಭಟ, ಲಾಕ್ ಡೌನ್ ಸಂಕಷ್ಟದಿಂದ ಹಿಡಿದೂ ಕೋವಿಡ್ ಎರಡನೇ ಅಲೆಯಲ್ಲಿಯೂ ತತ್ತರಿಸಿರುವ ಹಲವರಿಗೆ ಬಾಲಿವುಡ್ …

Leave a Reply

Your email address will not be published.

Recent Comments

No comments to show.