ಕನ್ನಡದ ಖ್ಯಾತ ನಟ ಶರಣ್ ಅವರು ಇಂದು ಮಧ್ಯಾಹ್ನ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.. ವಿಚಾರ ತಿಳಿದು ತಕ್ಷಣ ನಟಿ ಶೃತಿ ಅವರು ಆಸ್ಪತ್ರೆಗೆ ಆಗಮಿಸಿದ್ದರು.. ನಂತರ ಅಣ್ಣನ ಆರೋಗ್ಯದ ಕುರಿತು ಮಾಧ್ಯಮದ ಮುಂದೆ ಮಾತನಾಡಿದ್ದಾರೆ.. ಆದರೆ ನಿಜಕ್ಕೂ ಅಣ್ಣ ಆಸ್ಪತ್ರೆಯಲ್ಲಿ ಇದ್ದರೂ ಸಹ ಶೃತಿ ಅವರ ಆಡಿದ ಮಾತುಗಳು ನಮ್ಮ ಕನ್ನಡದ ಹಿರಿಯ ಕಲಾವಿದರ ದೊಡ್ಡ ಗುಣವನ್ನು ತೋರುತ್ತದೆ..
ಹೌದು ಇಂದು ಬೆಂಗಳೂರಿನ ಹೆಚ್ ಎಂ ಟಿ ಗ್ರೌಂಡ್ ನಲ್ಲಿ ಅವತಾರ ಪುರುಷ ಸಿನಿಮಾ ಚಿತ್ರೀಕರಣ ನಡೆಯುತಿತ್ತು.. ಸಾಹಸ ದೃಶ್ಯದ ಚಿತ್ರೀಕರಣದಲ್ಲಿ ಶರಣ್ ಅವರು ಪಾಲ್ಗೊಂಡಿದ್ದರು.. ಆದರೆ ಅದೇ ವೇಳೆ ತೀವ್ರ ಹೊಟ್ಟೆ ನೋವಿನ ಪರಿಣಾಮ ಶರಣ್ ಅವರನ್ನು ನಿರ್ದೇಶಕ ಸಿಂಪಲ್ ಸುನಿ ಹಾಗೂ ನಿರ್ಮಾಪಕರಾದ ಪುಷ್ಕರ್ ಅವರು ಆಸ್ಪತ್ರೆಗೆ ದಾಖಲಿಸಿದರು.. ನಂತರ ಶೃತಿ ಅವರಿಗೆ ವಿಚಾರ ತಿಳಿಸಲಾಗಿ ಶೃತಿ ಅವರು ತಕ್ಷಣ ಆಸ್ಪತ್ರೆಗೆ ಆಗಮಿಸಿದರು..
ನಂತರ ಅಣ್ಣನ ಆರೋಗ್ಯ ವಿಚಾರಿಸಿ ಮಾದ್ಯಮದ ಮುಂದೆ ಮಾತನಾಡಿದರು.. ಅಣ್ಣನಿಗೆ ಅಂತಹ ದೊಡ್ಡ ಸಮಸ್ಯೆ ಏನೂ ಆಗಿಲ್ಲ.. ಯಾರೂ ಗಾಬರಿ ಆಗಬೇಕಿಲ್ಲ.. ಕಿಡ್ನಿ ಸ್ಟೋನ್ ಆಗಿರುವ ಕಾರಣ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದೆ.. ಇಂದು ಆಸ್ಪತ್ರೆಯಲ್ಲಿಯೇ ದಾಖಲಿಸಿಕೊಂಡು ಚಿಕಿತ್ಸೆ ಮುಂದುವರೆಸ್ತಾರೆ ನಂತರ ಏನುಮಾಡಬೇಕು ಅನ್ನೋದನ್ನ ನಾಳೆ ವೈದ್ಯರು ತಿಳಿಸಲಿದ್ದಾರೆ ಎಂದರು..
ಆದರೆ ಅಷ್ಟರಲ್ಲಾಗಲೇ ಶೂಟಿಂಗ್ ಸಮಯದಲ್ಲಿಯೇ ಶರಣ್ ಅವರಿಗೆ ನೋವಾಗಿದೆ ಎನ್ನುವ ಸುದ್ದಿ ಹಬ್ಬಿಬಿಟ್ಟಿತ್ತು.. ಆದರೆ ತಕ್ಷಣ ಈ ಕುರಿತು ಶೃತಿ ಅವರು ಮಾತನಾಡಿ ತಮ್ಮಿಂದ ಸಿನಿಮಾ ತಂಡಕ್ಕೆ ಯಾವುದೇ ತೊಂದರೆಯಾಗಲಿ ಅಥವಾ ಕೆಟ್ಟ ಹೆಸರಾಗಲಿ ಬರಬಾರದು ಎಂದು ಶರಣ್ ಅವರಿಗೆ ಎರಡು ದಿನದಿಂದಲೇ ಹೊಟ್ಟೆ ನೋವು ಇದ್ದ ವಿಚಾರವನ್ನು ತಿಳಿಸಿ ಶರಣ್ ಅವರಿಗೆ ಹೊಟ್ಟೆ ನೋವು ಬಂದಿರುವುದು ಅವರಿಗೆ ಕಿಡ್ನಿ ಸ್ಟೋನ್ ಆಗಿರುವ ಕಾರಣಕ್ಕೆ ಮಾತ್ರ.. ಆದರೆ ಅದಾಗಲೇ ಕೋವಿಡ್ ನಿಂದ ಚಿತ್ರೀಕರಣ ನಿಂತು ಇದೀಗ ಮತ್ತೆ ಶುರುವಾಗಿದೆ..
ಮತ್ತೆ ನನ್ನಿಂದ ಚಿತ್ರೀಕರಣ ನಿಲ್ಲಬಾರದು ಅನ್ನೋ ಕಾರಣಕ್ಕೆ ಅಣ್ಣ ತನ್ನ ನೋವನ್ನು ಹೇಳಿಕೊಂಡಿರಲಿಲ್ಲ.. ಆದರೆ ಚಿತ್ರತಂಡ ಕುಟುಂಬಕ್ಕೆ ಸಂಪೂರ್ಣ ಸಹಕಾರ ನೀಡಿದೆ.. ಅವರಿಗೆ ನಾವು ಧನ್ಯವಾದಗಳನ್ನು ತಿಳಿಸುತ್ತೇವೆ.. ಅಣ್ಣನಿಗೆ ತನ್ನ ಹೊಟ್ಟೆ ನೋವಿಗಿಂತ ಹೆಚ್ಚಾಗಿ ತನ್ನಿಂದ ಶೂಟಿಂಗ್ ನಿಲ್ಲುವಂತಾಯ್ತಲ್ಲ ಎಂದೇ ಕೊರಗುತ್ತಿದ್ದಾನೆ.. ಎಷ್ಟೋ ಕಾರ್ಮಿಕ ಕುಟುಂಬಗಳಿಗೆ ನನ್ನಿಂದ ತೊಂದರೆ ಆಯ್ತಲ್ಲ ಅನ್ನೋ ಮಾತನ್ನ ಈಗಲೂ ಹೇಳಿದ ಎಂದರು..
ನಿಜಕ್ಕೂ ಕಷ್ಟ ನೋಡಿದ ಕಲಾವಿದರು ಹೀಗೆ ದೊಡ್ಡಗುಣವುಳ್ಳವರಾಗಿರುತ್ತಾರೆ.. ಈಗಿನ ಕಾಲದ ಕೆಲವರು ಸಮಯ ಸಿಕ್ಕರೆ ಸಾಕು ಚಿತ್ರತಂಡದ ಮೇಲೆ ಗೂಬೆ ಕೂರಿಸಿ ಉಪಯೋಗ ಪಡೆದುಕೊಳ್ಳುತ್ತಾರೆ.. ಆದರೆ ಕಷ್ಟದಿಂದ ಬೆಳೆದು ಬಂದ ಇಂತಹ ಅದೆಷ್ಟೋ ಕಲಾವಿದರ ದೊಡ್ಡಗುಣದಿಂದಲೇ ಈಗಲೂ ನಮ್ಮ ಚಿತ್ರರಂಗ ಕೆಲ ಕಹಿ ವಿಚಾರಗಳ ನಡುವೆಯೂ ಇನ್ನೂ ಸಹ ಗೌರವ ಉಳಿಸಿಕೊಂಡಿರುವುದು.. ಶರಣ್ ಅವರು ಆದಷ್ಟು ಬೇಗ ಗುಣಮುಖರಾಗಿ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿ.. ಬೇಗ ಗುಣಮುಖರಾಗಿ ಸರ್..