Breaking News

ಬಹಳ ದಿನಗಳ ನಂತರ ಮತ್ತೆ ಆ್ಯಕ್ಟಿಂಗ್​​​​​​​​ಗೆ ವಾಪಸಾದ ರಶ್ಮಿ ಗೌತಮ್​​​​…’ಗುಂಟೂರು ಟಾಕೀಸ್’ ನಿರ್ದೇಶಕನ ಹೊಸ ಚಿತ್ರದಲ್ಲಿ ನಟನೆ

Advertisement

ಯಾವುದೇ ಕಾರ್ಯಕ್ರಮವಾಗಲೀ ಆ ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಣೆ ಮಾಡಲು ಅಷ್ಟೇ ಸುಂದರವಾದ ನಿರೂಪಕರು ಇದ್ದೇ ಇರಬೇಕು. ಹಾಗಿದ್ದಲ್ಲಿ ಮಾತ್ರ ಆ ಕಾರ್ಯಕ್ರಮಕ್ಕೆ ಒಂದು ಕಳೆ ಇರುತ್ತದೆ. ನಮ್ಮ ಕನ್ನಡದಲ್ಲಿ ಅನುಶ್ರೀ, ಅನುಪಮಾ ಭಟ್, ಶಾಲಿನಿ, ಸುಷ್ಮಾ ರಾವ್, ಅಕುಲ್ ಬಾಲಾಜಿ, ಸೃಜನ್ ಲೋಕೇಶ್, ಮಾಸ್ಟರ್ ಆನಂದ್ ಹಾಗೂ ಇನ್ನಿತರರು ನಿರೂಪಣೆಯಲ್ಲಿ ಎತ್ತಿದ ಕೈ. ಅದೇ ರೀತಿ ತೆಲುಗು, ತಮಿಳು, ಹಿಂದಿಯಲ್ಲೂ ಬಹಳಷ್ಟು ಮಂದಿ ಖ್ಯಾತ ನಿರೂಪಕರಿದ್ಧಾರೆ. ಇವರೆಲ್ಲಾ ಕೇವಲ ಕಾರ್ಯಕ್ರಮದ ನಿರೂಪಣೆ ಮಾತ್ರವಲ್ಲ ಬಹಳಷ್ಟು ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. ತೆಲುಗಿನಲ್ಲಿ ಕೂಡಾ ಸುಮಾ, ಅನುಸೂಯ, ರಶ್ಮಿ ಗೌತಮ್, ಶ್ರೀಮುಖಿ, ಪ್ರದೀಪ್, ಶ್ಯಾಮಲಾ, ಓಂಕಾರ್, ರವಿ ಸಾಕಷ್ಟು ನಿರೂಪಕರಿದ್ದಾರೆ. ಬಹುತೇಕ ಇವರೆಲ್ಲರೂ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. ಈ ನಿರೂಪಕರಿಗೆ ಬಹಳಷ್ಟು ಅಭಿಮಾನಿಗಳು ಕೂಡಾ ಇದ್ದಾರೆ.

Advertisement

ಈ ತೆಲುಗು ನಿರೂಪಕಿಯರಲ್ಲಿ ಯಾರು ಸಖತ್​ ಹಾಟ್ ಎಂದು ಪ್ರಶ್ನೆ ಎದುರಾದರೆ ತೆಲುಗು ಮಂದಿ ಹೇಳುವುದು ರಶ್ಮಿ ಗೌತಮ್ ಹೆಸರು. ಚಿತ್ರರಂಗಕ್ಕೆ ಬಂದಾಗಿನಿಂದ ರಶ್ಮಿ ಗೌತಮ್ ನೋಡಲು ಹೇಗಿದ್ದಾರೋ ಈಗಲೂ ಹಾಗೇ ಇದ್ಧಾರೆ. ಬಹಳ ವರ್ಕೌಟ್, ಡಯಟ್ ಮಾಡಿ ತಮ್ಮ ಗ್ಲಾಮರ್ ಕಾಪಾಡಿಕೊಂಡು ಬರುತ್ತಿದ್ಧಾರೆ ರಶ್ಮಿ. 2 ವರ್ಷಗಳಿಂದ ರಶ್ಮಿ ಗೌತಮ್ ಸಿನಿಮಾಗಳಲ್ಲಿ ನಟಿಸದೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ನಾಗಾರ್ಜುನ ಜೊತೆ ಸಿನಿಮಾವೊಂದರಲ್ಲಿ ನಟಿಸಲು ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಕಾಜಲ್ ಅಗರ್​​ವಾಲ್ ನಾಯಕಿಯಾಗಿ ನಟಿಸುತ್ತಿದ್ದು ಚಿತ್ರದಲ್ಲಿ ರಶ್ಮಿ ಪಾತ್ರ ಏನೆಂಬುದು ತಿಳಿದುಬಂದಿಲ್ಲ. ಈ ಚಿತ್ರವನ್ನು ಪ್ರವೀಣ್ ಸತ್ತಾರು ನಿರ್ದೇಶಿಸಿದ್ದಾರೆ. ರಶ್ಮಿ ಅಭಿನಯದ ‘ಗುಂಟೂರ್ ಟಾಕೀಸ್’ ಚಿತ್ರವನ್ನು ಕೂಡಾ ಇದೇ ಪ್ರವೀಣ್ ಸತ್ತಾರು ನಿರ್ದೇಶಿಸಿದ್ದರು. ಆ ಚಿತ್ರದಲ್ಲಿನ ಪರಿಚಯದಿಂದಲೇ ಮತ್ತೆ ತಮ್ಮ ಚಿತ್ರದಲ್ಲಿ ಪ್ರವೀಣ್, ರಶ್ಮಿ ಗೌತಮ್​​​ಗೆ ಅವಕಾಶ ನೀಡುತ್ತಿದ್ದಾರೆ ಎನ್ನಲಾಗಿದೆ.

ರಶ್ಮಿ ಗೌತಮ್ ಮೂಲತ: ಉತ್ತರ ಪ್ರದೇಶಕ್ಕೆ ಸೇರಿದವರಾದರೂ ಹುಟ್ಟಿ, ಬೆಳೆದದ್ದು ಆಂಧ್ರಪ್ರದೇಶದ ವಿಶಾಖಪಟ್ನಂನಲ್ಲಿ. ಬಣ್ಣದ ಲೋಕದ ಸೆಳೆತದಿಂದ ಹೈದರಾಬಾದ್​​ಗೆ ಬಂದ ರಶ್ಮಿ ಗೌತಮ್ ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದರು. ಆದರೆ ಹೇಳಿಕೊಳ್ಳುವಂತ ಅವಕಾಶಗಳು ಸಿಗದೆ ಬಹಳ ನಿರಾಸೆಯಿಂದ ಈ ಸಿನಿಮಾ ರಂಗವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರು. ಆದರೆ ಆ ಸಮಯದಲ್ಲಿ ಅವರ ಕೈ ಹಿಡಿದದ್ದು ‘ಜಬರ್ದಸ್ತ್’​​​. ಈ ಕಾರ್ಯಕ್ರಮದ ನಿರೂಪಣೆ ಹೊಣೆ ಹೊತ್ತ ರಶ್ಮಿ ನಂತರ ಇತರ ಕಾರ್ಯಕ್ರಮಗಳನ್ನು ನಿರೂಪಿಸುವ ಅವಕಾಶ ಪಡೆದರು. ‘ಜಬರ್ದಸ್ತ್’ ರಶ್ಮಿಗೆ ದೊಡ್ಡ ಬ್ರೇಕ್​ ನೀಡಿದ್ದು ಸುಳ್ಳಲ್ಲ. ಇದೀಗ ಅವರು ‘ಎಕ್ಸ್ಟ್ರಾ ಜಬರ್ದಸ್ತ್’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಇದು ತೆಲುಗಿನ ಖ್ಯಾತ ಕಾರ್ಯಕ್ರಮವಾಗಿದ್ದು ಕೋಟ್ಯಂತರ ಸಂಖ್ಯೆಯ ಅಭಿಮಾನಿಗಳಿದ್ದಾರೆ.

Advertisement

ರಶ್ಮಿ ಗೌತಮ್ ಕನ್ನಡದ ‘ಗುರು’ ಚಿತ್ರದಲ್ಲಿ ಕೂಡಾ ನಾಯಕಿಯಾಗಿ ನಟಿಸಿದ್ದಾರೆ. ವಿಶೇಷ ಎಂದರೆ ಈ ಚಿತ್ರವನ್ನು ನಟ ಜಗ್ಗೇಶ್ ನಿರ್ದೇಶಿಸಿದ್ದರು. ಪರಿಮಳಾ ಜಗ್ಗೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ತಮ್ಮ ಮಕ್ಕಳಾದ ಗುರು ಹಾಗೂ ಯತಿಗಾಗಿ ಜಗ್ಗೇಶ್ ಈ ಸಿನಿಮಾ ಮಾಡಿದ್ದರು. ಆದರೆ ಸಿನಿಮಾ ಬಾಕ್ಸ್​ ಆಫೀಸಿನಲ್ಲಿ ಸದ್ದು ಮಾಡುವಲ್ಲಿ ವಿಫಲವಾಯ್ತು. ಚಿತ್ರದಲ್ಲಿ ರಶ್ಮಿ, ಅಂಕಿತ ಎಂಬ ಪಾತ್ರ ಮಾಡಿದ್ದರು. ತಮಿಳು ಸಿನಿಮಾವೊಂದರಲ್ಲಿ ಕೂಡಾ ರಶ್ಮಿ ನಟಿಸಿದ್ದಾರೆ. ಬಹಳ ದಿನಗಳ ನಂತರ ಇದೀಗ ರಶ್ಮಿ ಮತ್ತೆ ಸಿನಿಮಾದಲ್ಲಿ ನಟಿಸುತ್ತಿರುವುದು ಅವರ ಅಭಿಮಾನಿಗಳಿಗೆ ಸಂತೋಷವಾಗಿದೆ. ಬಗುಂಟೂರು ಟಾಕೀಸ್​​​’ ನಲ್ಲಿ ಸಖತ್ ಬೋಲ್ಡ್ ಆಗಿ ನಟಿಸಿದ್ದ ರಶ್ಮಿ ಗೌತಮ್, ಈ ಚಿತ್ರದಲ್ಲಿ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ..? ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Advertisement

-ರಕ್ಷಿತ ಕೆ.ಆರ್. ಸಾಗರ

Advertisement
Advertisement

Advertisement

About RJ News Kannada

Check Also

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

Advertisement ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, …

Leave a Reply

Your email address will not be published.

Recent Comments

No comments to show.