ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ ರಮಣ ಧಾರಾವಾಹಿ ಅತಿ ಹೆಚ್ಚು ಖ್ಯಾತಿ ಗಳಿಸಿತ್ತು.. ಪುಟ್ಟ ಗೌರಿ ಮದುವೆ, ಅಗ್ನಿ ಸಾಕ್ಷಿ, ಲಕ್ಷ್ಮಿ ಬಾರಮ್ಮ ನಂತರ ರಾಧಾ ರಮಣ ಧಾರಾವಾಹಿ ಅತಿ ಕಡಿಮೆ ಸಮಯದಲ್ಲಿಯೇ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು.. ರಾಧಾ ಮಿಸ್ ಹಾಗೂ ರಮಣ್ ಸರ್ ನ ಜಗಳ ಕಿತ್ತಾಟ ಪ್ರೀತಿ ನೋಡಲು ಜನರು 9 ಗಂಟೆಗಾಗಿ ಕಾದು ಕುಳಿತಿರುತ್ತಿದ್ದ ಕಾಲವಿತ್ತು.. ಒಳ್ಳೆಯ ರೇಟಿಂಗ್ ಕೂಡ ಪಡೆಯುತಿದ್ದ ಧಾರಾವಾಹಿಯಾಗಿತ್ತು..
ಇನ್ನು ಈ ಧಾರಾವಾಹಿ ನಟ ಸ್ಕಂದ ಅಶೋಕ್ ಹಾಗೂ ನಟಿ ಶ್ವೇತಾ ಪ್ರಸಾದ್ ಅವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟದ್ದು ಸುಳ್ಳಲ್ಲ.. ಈ ಹಿಂದೆ ಯು ಟರ್ನ್ ಸೇರಿದಂತೆ ಅನೇಕ ಸಿನಿಮಾದಲ್ಲಿ ಅಭಿನಯಿಸಿದ್ದರೂ ಸಹ ಸ್ಕಂದ ಈ ಧಾರಾವಾಹಿ ಬಂದ ನಂತರ ರಮಣ್ ಎಂದೇ ಪ್ರಖ್ಯಾತರಾದರು.. ಅತ್ತ ಶ್ವೇತಾ ಕೂಡ ರಾಧಾ ಮಿಸ್ ಎಂದೇ ಪ್ರಖ್ಯಾತಿ ಪಡೆದರು.. ಇನ್ನು ರಮಣ್ ಖ್ಯಾತಿಯ ಸ್ಕಂದ ಅಶೋಕ್ ಅವರು ಕಾಫಿ ಕಿಂಗ್ ಸಿದ್ದಾರ್ಥ್ ಅವರ ಅಣ್ಣನ ಮಗನೂ ಹೌದು..
ಕನ್ನಡ ತೆಲುಗು ತಮಿಳು ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿರುವ ಸ್ಕಂದ ತಮ್ಮದೇ ಆದ ಕಾಫಿ ಪ್ಲಾಂಟ್ ಅನ್ನು ಸಹ ಹೊಂದಿದ್ದಾರೆ.. ಒಂದು ವೇಳೆ ನಟನಾಗದಿದ್ದರೆ ಉದ್ಯಮಿಯಾಗುತ್ತಿದ್ದೆ ಎನ್ನುತ್ತಾರೆ ಸ್ಕಂದ.. ಇನ್ನು ಎರಡು ವರ್ಷಗಳ ಹಿಂದಷ್ಟೇ ತಾವು ಪ್ರೀತಿಸಿದ್ದ ಶಿಖಾ ಪ್ರಸಾದ್ ಅವರ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದರು.. ಬೆಂಗಳೂರಿನ ವಿವಿಧ ಜಾಗಗಳಲ್ಲಿ ಮದುವೆಯ ವಿವಿಧ ಶಾಸ್ತ್ರಗಳು ನೆರವೇರಿದ್ದು ವಿಶೇಷವಾಗಿತ್ತು.. ತಾಜ್ ವೆಸ್ಟೆಂಡ್ ಹೊಟೆಲ್ ನಲ್ಲಿ ಮೆಹಂದಿ ಶಾಸ್ತ್ರ.. ಬಸವನಗುಡಿಯ ಗಂಜಾಂ ಕಲ್ಯಾಣ ಮಂಟಪದಲ್ಲಿ ಅರಿಶಿನ ಶಾಸ್ತ್ರ.. ಬೆಂಗಳೂರಿನ ಶಾಂಗ್ರಿಲಾ ಹೊಟೆಲ್ ನಲ್ಲಿ ವರಪೂಜೆ.. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅರತಕ್ಷತೆ ಹಾಗೂ ಮದುವೆ ಸಮಾರಂಭ ಹೀಗೆ ವಿಶೇಷ ವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯ ಮದುವೆ ಆಗ ಸುದ್ದಿಯಾಗಿತ್ತು..
ನಾಲ್ಕು ವರ್ಷದ ಪ್ರೀತಿಗೆ ಎರಡು ವರ್ಷದ ದಾಂಪತ್ಯ ಜೀವನದ ಗುರುತಾಗಿ ಇದೀಗ ಸ್ಕಂದ ಹಾಗೂ ಶಿಖಾ ಬಾಳಿಗೆ ನೂತನ ಫ್ಯಾಮಿಲಿ ಮೆಂಬರ್ ಆಗಮನವಾಗುತ್ತಿದೆ.. ಹೌದು ಸ್ಕಂದ ಅಶೋಕ್ ತಂದೆಯಾಗುವ ಸಂಭ್ರಮದಲ್ಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಪತ್ನಿಯೊಂದಿಗಿನ ಫೋಟೋ ಹಾಕಿ ಸಂತೋಷ ಹಂಚಿಕೊಂಡಿದ್ದಾರೆ..