2020 ರಂತಹ ಕೆಟ್ಟ ವರ್ಷ ಮತ್ತೊಂದಿಲ್ಲ.. ಸಾಲು ಸಾಲು ಕಲಾವಿದರು ಇಲ್ಲವಾಗುತ್ತಿದ್ದಾರೆ.. ಮೊನ್ನೆ ಮೊನ್ನೆಯಷ್ಟೇ ನಟ ಚಿರಂಜೀವಿ ಸರ್ಜಾ ಅತಿ ಚಿಕ್ಕವಯಸ್ಸಿಗೆ ಹೃದಯಾಘಾತದಿಂದ ಮೃತ ಪಟ್ಟ ನೋವು ಇನ್ನೂ ಮಾಸುವ ಮುನ್ನವೇ ಇದೀಗ ಇಂದು ಹಿರಿಯ ಹಾಸ್ಯ ನಟ ಮಿಮಿಕ್ರಿ ರಾಜ ಗೋಪಾಲ್ ಅವರು ಇಹಲೋಕ ತ್ಯಜಿಸಿದ್ದಾರೆ..
ಒಂದು ಕಡೆ ಕೊರೊನಾ ದಿಂದಾಗಿ ದೇಶವೇ ತತ್ತರಿಸುತ್ತಿದ್ದರೆ, ಇತ್ತ ಸಾಲು ಸಾಲು ಕಲಾವಿದರು ಇಲ್ಲವಾಗುತ್ತುದ್ದು ಇದೇ ವರ್ಷ ಬಾಲಿವುಡ್ನಲ್ಲಿ ಸುಶಾಂತ್ ಸಿಂಗ್ ರಜಪೂತ್, ಇರ್ಫಾನ್ ಖಾನ್, ರಿಷಿ ಕಪೂರ್ ಮತ್ತು ವಾಜಿದ್ ಖಾನ್ ಸಾವನ್ನಪ್ಪಿದ್ದರು. ಇತ್ತ ನಮ್ಮ ಕನ್ನಡ ಚಿತ್ರರಂಗದಲ್ಲಿ ಚಿರು ಸರ್ಜಾ, ಬುಲೆಟ್ ಪ್ರಕಾಶ್, ಮೈಕಲ್ ಮಧು ಮತ್ತು ರಿಯಾಲಿಟಿ ಶೋ ವಿನ್ನರ್ ಮೆಬೀನಾ ಮೈಕಲ್ ಅವರು ಕೂಡ ಮೃತಪಟ್ಟಿದ್ದರು.
ಇನ್ನು ಇಂದು ಇಹಲೋಕ ತ್ಯಜಿಸಿರುವ ಮಿಮಿಕ್ರಿ ರಾಜಗೋಪಾಲ್ ಅವರಿಗೆ 64 ವರ್ಷ ವಯಸ್ಸಾಗಿತ್ತು.. ಕನ್ನಡ, ತಮಿಳು ಸೇರಿದಂತೆ 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಮಿಮಿಕ್ರಿ ರಾಜಗೋಪಾಲ್ ಅವರು ಆಸ್ತಮಾ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.. ಇಂದು ಕೆಂಗೇರಿಯ ಬಿಡಿಎ ಅಪಾರ್ಟ್ಮೆಂಟ್ ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.. ಇವರಿಗೆ ಮೂರು ಹೆಣ್ಣುಮಕ್ಕಳಿದ್ದು ಕುಟುಂಬ ದಲ್ಲಿ ದುಃಖ ಮಡುಗಟ್ಟಿದೆ.. ರಾಜಗೋಪಾಲ್ ಅವರ ಸಾವಿಗೆ ಕಲಾವಿದರು ಸ್ನೇಹಿತರು ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ..