Breaking News

ಖ್ಯಾತ ಸಂಗೀತ ನಿರ್ದೇಶಕ ರಾಜನ್ ಇನ್ನಿಲ್ಲ.. ನಿಜಕ್ಕೂ ಏನಾಗಿತ್ತು ಗೊತ್ತಾ?

Advertisement

ಕನ್ನಡ ಚಿತ್ರರಂಗಕ್ಕೆ ಏನಾಗಿದೆಯೋ ಗೊತ್ತಿಲ್ಲ, ಈ ವರ್ಷವಂತೂ ಸಾಲು ಸಾಲು ಕಲಾವಿದರನ್ನು, ಎಸ್.ಪಿ ಬಾಲಸುಬ್ರಹ್ಮಣ್ಯರಂಥ ಮಹಾನ್ ಗಾಯಕರನ್ನ, ಇದೀಗ ಅದ್ಭುತ ಸಂಗೀತ ನಿರ್ದೇಶಕರನ್ನ ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿದೆ.

ಕನ್ನಡದ ಹಳೆಯ ಸುಮಧುರ ಹಾಡುಗಳನ್ನ ಕೇಳಿದರೆ ರಾಜನ್ – ನಾಗೇಂದ್ರ ಸಹೋದರರ ಜೋಡಿ ನೆನಪಿಗೆ ಬರುತ್ತಾರೆ. ಕನ್ನಡಕ್ಕೆ ಸುಮಾರು 200 ಕ್ಕೂ ಹೆಚ್ಚು ಸಿನಿಮಾಗಳಿಗೆ ಹಾಡುಗಳನ್ನು ನೀಡಿದ ನಾಗೇಂದ್ರ ಅವರು ಇಪ್ಪತ್ತು ವರ್ಷಗಳ ಹಿಂದೆಯೇ ನಮ್ಮನ್ನ ಅಗಲಿದ್ದರು. ಇದೀಗ ರಾಜನ್ ಅವರೂ ಕೂಡ ವಿಧಿವಶರಾಗಿದ್ದು ಕನ್ನಡಕ್ಕೆ ತುಂಬಲಾರದ ನಷ್ಟವಾಗಿದೆ..

Advertisement

ರಾಜನ್ ಅವರಿಗೆ ವಯಸ್ಸಾಗಿದ್ದು, ವಯೋ ಸಹಜ ಖಾಯಿಲೆಗಳಿದ್ದು ನಿನ್ನೆ ರಾತ್ರಿ 10.30 ರ ಸುಮಾರಿಗೆ ನಿಧನರಾದರು. ನಾಗೇಂದ್ರ ಅವರ ನಂತರವೂ ಸಾಕಷ್ಟು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿ ಸುಮಾರು 375 ಕ್ಕೂ ಹೆಚ್ಚು ಸಿನಿಮಾಗಳಿಗೆ ತಮ್ಮ ಬತ್ತಳಿಕೆಯಿಂದ ಹಾಡುಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದರು.

Advertisement

ಸುಮಾರು ಐದು ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ರಾಜನ್ – ನಾಗೇಂದ್ರ ಜೋಡಿ ಕನ್ನಡ ಚಿತ್ರರಂಗಕ್ಕೆ ಸಂಗೀತ ನಿರ್ದೇಶನ ಮಾಡಲು ಶುರುಮಾಡಿದ್ದು 1952ರಲ್ಲಿ. ನಂತರ 1999ರವರೆಗೂ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡು ಇತರ ಭಾಷೆಗಳೂ ಸೇರಿದಂತೆ 375ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿದ್ದು ಇಂದು ಮರೆಯಲಾರದ ನೆನಪು! ನೀಡಿದ್ದಾರೆ. ಇದರಲ್ಲಿ ಕನ್ನಡದ 200ಕ್ಕೂ ಅಧಿಕ ಸಿನಿಮಾಗಳಿವೆ. ಕನ್ನಡ, ತಮಿಳು, ಮಲಯಾಳಂ, ಹಿಂದಿ, ಶ್ರೀಲಂಕಾದ ಸಿಂಹಳ ಭಾಷೆಯ ಸಿನಿಮಾಗಳಿಗೂ ರಾಜನ್ ನಾಗೇಂದ್ರ ಅವರ ಸಂಗೀತ ಅಪಾರ ಯಶಸ್ಸನ್ನು ತಂದುಕೊಟ್ಟಿದೆ.

Advertisement

ಕನ್ನಡದಲ್ಲಿ ರಾಜನ್ ನಾಗೇಂದ್ರ ಅವರ ಜೋಡಿ ಸಂಗೀತದ ಮೂಲಕ ಮೋಡಿ ಮಾಡಿದ ಕೆಲವು ಚಿತ್ರಗಳು ಹೀಗಿವೆ: ‘ಮಂತ್ರಾಲಯ ಮಹಾತ್ಮೆ’, ‘ಸುಪ್ರಭಾತ’, ‘ಮತ್ತೆ ಹಾಡಿತು ಕೋಗಿಲೆ’, ‘ಕರುಳಿನ ಕುಡಿ’, ‘ಪರಸಂಗದ ಗೆಂಡೆತಿಮ್ಮ’, ‘ಶ್ರೀನಿವಾಸ ಕಲ್ಯಾಣ’ ‘ಗಂಧದ ಗುಡಿ’ ‘ಕಳ್ಳ ಕುಳ್ಳ’, ‘ಬಯಲು ದಾರಿ’, ‘ಚಲಿಸುವ ಮೋಡಗಳು’, ‘ಬೆಟ್ಟದ ಹೂವು’, ‘ನಾ ನಿನ್ನ ಮರೆಯಲಾರೆ’, ‘ಹೊಂಬಿಸಿಲು’, ‘ನಾ ನಿನ್ನ ಬಿಡಲಾರೆ’, ‘ಎರಡು ಕನಸು’, ‘ಆಟೋ ರಾಜ’, ‘ಗಾಳಿಮಾತು’ ಇತ್ಯಾದಿ.. ಇತ್ಯಾದಿ.. ಡಾ. ರಾಜ್‍ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರ ಸಿನಿಮಾಗಳಲ್ಲಿ ರಾಜನ್ ನಾಗೇಂದ್ರ ಅವರ ಸಂಗೀತ ನಿರ್ದೇಶನ ಹೆಚ್ಚಾಗಿ ಕಾಣಬಹುದು.

ಇಂದು ಕನ್ನಡ ಚಿತ್ರರಂಗವನ್ನು ಅಗಲಿದ ರಾಜನ್ ಅವರ ಅಂತ್ಯಕ್ರಿಯೆ ಹೆಚ್ಚಾಳದಲ್ಲಿ ಜರುಗಲಿದೆ. ರಾಜನ್ ಅವರ ಅಗಲಿಕೆಗೆ ಕನ್ನಡ ಚಿತ್ರರಂಗದ ಎಲ್ಲಾ ಗಣ್ಯರು ಅಭಿಮಾನಿಗಳು ಕಂಬನಿ‌ ಮಿಡಿದಿದ್ದು ಸಂತಾಪ ಸೂಚಿಸಿದ್ದಾರೆ..

Advertisement
Advertisement
Advertisement

About admin

Check Also

ರಾಜಕೀಯ ಎಂಟ್ರಿ ಬಗ್ಗೆ ಬಾಲಿವುಡ್ ನಟ ಸೋನು ಸೂದ್ ಹೇಳಿದ್ದೇನು ಗೊತ್ತೆ?

Advertisement ಕೊರೊನಾ ಮೊದಲನೇ ಅಲೆ ಆರ್ಭಟ, ಲಾಕ್ ಡೌನ್ ಸಂಕಷ್ಟದಿಂದ ಹಿಡಿದೂ ಕೋವಿಡ್ ಎರಡನೇ ಅಲೆಯಲ್ಲಿಯೂ ತತ್ತರಿಸಿರುವ ಹಲವರಿಗೆ ಬಾಲಿವುಡ್ …

Leave a Reply

Your email address will not be published.

Recent Comments

No comments to show.