ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆ ಇಂದು ಸಂಪೂರ್ಣ ಭಾರತವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ ಎನ್ನಬಹುದು.. ಒಂದು ರಾಜ್ಯಕ್ಕೆ ಸೀಮಿತವಾದವರಲ್ಲ ಎಸ್ ಪಿ ಬಿ.. ಕೇವಲ ಸೌತ್ ಸಿನಿ ಇಂಡಸ್ಟ್ರಿಯವರಿಗೆ ಸೀಮಿತವಾದವರಲ್ಲಿ ಎಸ್ ಪಿ ಬಿ ಅವರು.. ಬದಲಿಗೆ ಅವರು ಸಂಪೂರ್ಣ ದೇಶದ ಸಂಪತ್ತಾಗಿದ್ದರು.. ಸಂಗೀತ ಲೋಕದ ಸ್ವತ್ತಾಗಿದ್ದರು.. ಇದೀಗ ಗಾನ ಗಾರುಡಿಗನ ಅಗಲಿಕೆಗೆ ರಾಜಕೀಯದ ಗಣ್ಯರು ಚಿತ್ರರಂಗದವರು ಸಂಗೀತ ಲೋಕದ ದಿಗ್ಗಜರು ಎಲ್ಲರೂ ಸಹ ಸಂತಾಪ ಸೂಚಿಸುತ್ತಿದ್ದಾರೆ..
ಅದೇ ರೀತಿ ಇದೀಗ ರಾಷ್ತ್ರೀಯ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೂ ಸಹ ಎಸ್ ಪಿ ಬಿ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ ಅವರು “ಎಲ್ಲಾ ಭಾಷೆಗಳಲ್ಲಿ ಹಾಡಿರುವ ಎಸ್ ಪಿ ಬಿ ಅವರು ಕೋಟ್ಯಾನುಕೋಟಿ ಹೃದಯಗಳನ್ನು ತಲುಪಿದ್ದಾರೆ.. ಅವರ ಧ್ವನಿ ಎಂದೂ ಶಾಶ್ವತ.. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆಯಿಂದ ನೋವಿನಲ್ಲಿರುವ ಅವರ ಕುಟುಂಬಕ್ಕೆ ಹಾಗೂ ಆಪ್ತರಿಗೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ..
ರಾಹುಲ್ ಗಾಂಧಿ ಅವರು ಮಾತ್ರವಲ್ಲದೇ ಕೇಂದ್ರದ ಬಹಳಷ್ಟು ಮುಖಂಡರು ಸಚಿವರು ಗಾನ ಗಂಧರ್ವನ ಅಗಲಿಕೆಗೆ ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.. ಇನ್ನು ರಾಜ್ಯದಲ್ಲಿಯೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸದನ ದಲ್ಲಿ ಇಂದು ಅಗಲಿದ ಮಹಾನ್ ಚೇತನಕ್ಕೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ..
ಹೌದು ಇಂದಿನ ಸದನದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಅವರು, ಕಾನೂನು ಸಚಿವ ಮಾಧು ಸ್ವಾಮಿ ಅವರು, ಸಿದ್ದರಾಮಯ್ಯನವರು ಎಲ್ಲರೂ ಎಸ್ ಪಿ ಬಿ ಅವರನ್ನು ಸ್ಮರಿಸಿದರು.. ಸಂಪೂರ್ಣ ಸದನ ಎದ್ದು ನಿಂತು ಗಾನ ಗಂಧರ್ವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿತು.. ಮತ್ತೊಮ್ಮೆ ಕನ್ನಡ ನಾಡಿನಲ್ಲಿಯೇ ಹುಟ್ಟಬೇಕು ಎಂದು ಎಸ್ ಪಿ ಬಿ ಅವರು ಹೇಳಿದ್ದ ಮಾತನ್ನು ಸ್ನರಿಸಿದರು.. ಕನ್ನಡ ನಾಡಿನ ಮೇಲೆ ಎಸ್ ಪಿ ಬಿ ಅವರಿಗೆ ಇದ್ದ ಪ್ರೀತಿ ಅಜರಾಮರ.. ಎಸ್ ಪಿ ಬಿ ಅವರು ಎಂದೂ ಅಮರ.. ಅವರು ಅವರ ಧ್ವನಿಯ ಮೂಲಕ ಸದಾ ಜೀವಂತವಾಗಿರುತ್ತಾರೆ ಎಂದು ಸ್ಮರಿಸಿದರು..