ಕಲಾವಿದರು ತೆರೆಯ ಮೇಲಷ್ಟೇ ಬಣ್ಣ ಹಚ್ಚಿ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿ ಆ ಪಾತ್ರವೇ ತಾವಾಗಿ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ.. ಆದರೆ ನಿಜ ಜೀವನದಲ್ಲಿ ಕಲಾವುದರ ಬದುಕೇ ಬೇರೆ ರೀತಿಯದ್ದಾಗಿರುತ್ತದೆ.. ತೆರೆಯ ಮೇಲೆ ವಿಲನ್ ಪಾತ್ರ ಮಾಡಿದ ಅದೆಷ್ಟೋ ಮಂದಿ ನಿಜ ಜೀವನದಲ್ಲಿ ಹೀರೋಗಳಾಗಿರುತ್ತಾರೆ.. ಇನ್ನು ತೆರೆಯ ಮೇಲೆ ಹೀರೋ ರೀತಿಯಲ್ಲಿ ಬಿಂಬಿಸಿಕೊಳ್ಳುವ ಅದೆಷ್ಟೋ ಮಂದಿ ನಿಜ ಜೀವನದಲ್ಲಿ ವಿಲನ್ ಗಳಾಗಿ ಬಿಟ್ಟಿರುತ್ತಾರೆ.. ಒಟ್ಟಿನಲ್ಲಿ ಪರದೆಯನ್ನು ಸರಿಸಿ ನೋಡಿದರಷ್ಟೇ ಆ ಕಲಾವಿದನ ಬದುಕಿನ ನೈಜ್ಯ ಚಿತ್ರಣ ಕಣ್ಣಿಗೆ ಕಾಣುವುದು..
ಅದೇ ರೀತಿ ಖ್ಯಾತ ಖಳನಟ ರಘುವರನ್ ಅವರು ಯಾರಿಗೆ ತಾನೆ ಗೊತ್ತಿಲ್ಲ.. ದಶಕದ ಹಿಂದೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ಖಳನಾಯಕನಾಗಿ ಮಿಂಚಿದವರು.. ಅಷ್ಟೇ ಬೇಗ ಮರೆಯಾದವರೂ ಸಹ… ಆದರೆ ಮರೆಯಾಗಲು ಸ್ವತಃ ಅವರೇ ಕಾರಣ.. ಹೌದು ರಘುವರನ್ ಅವರು ಒಬ್ಬ ಅತ್ಯದ್ಭುತ ನಟ.. ಕನ್ನಡ ತಮಿಳು ತೆಲುಗು ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡವರು.. ವಿಭಿನ್ನ ಮ್ಯನಾರಿಸಂ ಉಳ್ಳವರಾಗಿದ್ದ ರಘುವರನ್ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸಿ ಬಹುಬೇಡಿಕೆಯ ನಟ ಎನಿಸಿಕೊಂಡಿದ್ದರು..
ಆದರೆ ವಿಧಿಯಾಟವೇ ಬೇರೆ ಇತ್ತು.. ಹೌದು ಅಷ್ಟೆಲ್ಲಾ ಹೆಸರು ಮಾಡಿದ ನಟ ರಘುವರನ್ ಅವರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಅಂದರೆ ಕೇವಲ 49 ವರ್ಷ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿ ಬಿಟ್ಟರು.. ಇದಕ್ಕೆ ಕಾರಣ ಸ್ವತಃ ಅವರ ಅಭ್ಯಾಸಗಳೇ ಎಂದು ಆಪ್ತರು ಈಗಲೂ ಮರುಕ ಪಡುತ್ತಾರೆ.. ಹೌದು ರಘುವರನ್ ಅವರು ದಕ್ಷಿಣದ ಖ್ಯಾತ ನಟಿ ರೋಹಿಣಿ ಅವರನ್ನು ಪ್ರೀತಿಸಿ ಮದುವೆಯಾದರು.. ಅತಿಯಾಗಿಮದ್ಯ ಸೇವಿಸುತ್ತಿದ್ದ ರಘುವರನ್ ಅವರು ಪ್ರೀತಿಸಿದ ಮಡದಿಗಾಗಿ ಮದ್ಯದ ಅಭ್ಯಾಸವನ್ನು ಬಿಡುತ್ತಾರೆ..
ಆ ಜೋಡಿಗೆ ಮುದ್ದಾದ ಗಂಡು ಮಗುವೂ ಆಗುತ್ತದೆ.. ಆನಂತರ ಬರುಬರುತ್ತಾ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾಗುತ್ತವೆ.. ಮತ್ತದೇ ಮದ್ಯಕ್ಕೆ ಅತಿಯಾಗಿ ದಾಸರಾಗಿ ಬಿಡುತ್ತಾರೆ ರಘುವರನ್ ಅವರು.. ಎಷ್ಟೇ ಪ್ರಯತ್ನ ಪಟ್ಟರೂ ಬದಲಿಸಲಾಗದೇ ಕೊನೆಗೆ ರೋಹಿಣಿ ಅವರು ರಘುವರನ್ ರಿಂದ ದೂರಾಗಿ ಬಿಡುತ್ತಾರೆ.. ನಂತರದ ದಿನಗಳಲ್ಲಿ ರಘುವರನ್ ಅವರು ಮದ್ಯದ ದಾಸರಾಗಿ ಬಿಡುತ್ತಾರೆ.. ಇದರಿಂದಾಗಿ ದಿನದಿಂದ ದಿನಕ್ಕೆ ಅವರ ಆರೋಗ್ಯ ಹದಗೆಟ್ಟು.. ಕೇವಲ 49ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸುತ್ತಾರೆ..
ತನ್ನ ಅಭ್ಯಾಸಗಳಿಂದಲೇ ತನ್ನ ಅಂತ್ಯ ಬರೆದುಕೊಂಡ ಅದ್ಭುತ ಕಲಾವಿದನೆಂದು ಸ್ನೇಹಿತರು ತಿಳಿದವರು ಮರುಕ ಪಟ್ಟರು.. ಜೀವನವೇ ಹಾಗೆ.. ಕೆಲವರಿಗೆ ಬದುಕಬೇಕೆಂಬ ಆಸೆ ಇದ್ದರೂ ಆಯಸ್ಸು ಇರುವುದಿಲ್ಲ.. ಮತ್ತೆ ಕೆಲವರಿಗೆ ಆಯಸ್ಸು ಇದ್ದರೂ ಕೆಟ್ಟ ಅಭ್ಯಾಸಗಳಿಂದ ಬದುಕನ್ನೇ ಕಳೆದುಕೊಂಡು ಬಿಡುತ್ತಾರೆ..