Breaking News

ಕೊನೆಗೂ ಮೂರನೇ ಮಗುವಿನ ಗರ್ಭಿಣಿ ವಿಚಾರದ ಬಗ್ಗೆ ಹೇಳಿಕೆ ಕೊಟ್ಟ ರಾಧಿಕಾ ಪಂಡಿತ್..

Advertisement

ಸ್ಯಾಂಡಲ್ವುಡ್ ನ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ನಿನ್ನೆಯಷ್ಟೇ ಹೊಸ ವಿಚಾರದ ಬಗ್ಗೆ ದೊಡ್ಡದಾಗಿಯೇ ಸುದ್ದಿಯಾಗಿದ್ದರು.. ಇದೀಗ ಅದೇ ವಿಚಾರದ ಕುರಿತು ಖುದ್ದು ರಾಧಿಕಾ ಪಂಡಿತ್ ಅವರೇ ಹೇಳಿಕೆ ಕೊಟ್ಟಿದ್ದಾರೆ..

ಹೌದು ನಿನ್ನೆ ಯಶ್ ಅವರು ರಾಧಿಕಾ ಪಂಡಿತ್ ಒಟ್ಟಿಗಿನ ಫೋಟೋವೊಂದನ್ನು ಹಂಚಿಕೊಂಡು, ನನ್ನ ಪತ್ನಿ ಹೊಸ ಲಾಕ್ ಡೌನ್ ರೂಲ್ಸ್ ಮಾಡಿದ್ದಾರೆ.. ಪ್ರತಿದಿನವೂ 8 ಗಂಟೆಗೂ ಮುನ್ನ ಮನೆಗೆ ಬರಬೇಕು.. ಭಾನುವಾರ ಸಂಪೂರ್ಣ ಲಾಕ್ ಡೌನ್.. ಎಂದಿದ್ದರು.. ಫೋಟೋದಲ್ಲಿ ಯಶ್ ಅವರು ಹಣೆ ಮೇಲೆ ಮೂರು ಬೆರಳು ಇಟ್ಟುಕೊಂಡಿದ್ದರು.. ಆದರೆ ಇದೇ ವಿಚಾರ ದೊಡ್ಡ ಸುದ್ದಿಯಾಗಿತ್ತು..

Advertisement

ಮೂರು ಬೆರಳು ಇಟ್ಟುಕೊಂಡದ್ದನ್ನು ನೋಡಿದ ಅಭಿಮಾನಿಗಳು ರಾಕಿ ಭಾಯ್ ದೊಡ್ಡದಾಗಿ ಸಿಗ್ನಲ್ ಕೊಟ್ಟಿದ್ದಾರೆ ಎಂದು ಪ್ರೀತಿಯಿಂದಲೇ ಕಾಲೆಳೆದಿದ್ದರು.. ಇನ್ನೂ ಅನೇಕರು ರಾಧಿಕಾ ಪಂಡಿತ್ ಅವರು ಗರ್ಭಿಣಿ ಇರಬಹುದೆಂದು ನೇರವಾಗಿ ಯಶ್ ಅವರ ಪೋಸ್ಟ್ ಗೆ ಕಮೆಂಟ್ ಮಾಡಿದ್ದರು..

Advertisement

ಈ ವಿಚಾರ ರಾಧಿಕಾ ಪಂಡಿತ್ ಅವರಿಗೆ ತಲುಪಿ ಸಧ್ಯ ನಗುತ್ತಲೇ ಈ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ.. ಹೌದು ಯಶ್ ಅವರ ಇನ್ಸ್ಟಾಗ್ರಾಂ ಪೋಸ್ಟ್ ಗೆ ರಿಪ್ಲೈ ಮಾಡಿರುವ ರಾಧಿಕಾ ಪಂಡಿತ್ ಅವರು “ಒಳ್ಳೆಯದು, ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಈಗಲಾದರೂ ನನ್ನ ನಿಯಮಗಳನ್ನು ಪಾಲಿಸುತ್ತಿದ್ದೀರಲ್ಲಾ.. ಎಂದಿದ್ದಾರೆ.. ಜೊತೆಗೆ ಗರ್ಭಿಣಿ ವಿಚಾರವಾಗಿಯೂ ಉತ್ತರಿಸಿದ್ದಾರೆ..

Advertisement

ಯಾರೆಲ್ಲಾ ನಾನು ಗರ್ಭಿಣಿ ಎಂದು ಊಹಿಸುತ್ತಿದ್ದೀರೋ.. ಅವರಿಗೆಲ್ಲಾ ಈ ಉತ್ತರ.. ನಾನು ಗರ್ಭಿಣಿ ಯಾಗಿಲ್ಲ” ಎಂಬ ಮಾತಿನ ಜೊತೆಗೆ ನಗುವ ಎಮೋಜಿ ಹಾಕಿ ಅವರೂ ಕೂಡ ಜನರ ಕಮೆಂಟ್ ಗಳನ್ನು ತಮಾಷೆಯಾಗಿಯೇ ಸ್ವೀಕರಿಸಿ ಅವರೂ ಸಹ ಅದೇ ರೀತಿ ಉತ್ತರ ನೀಡಿದ್ದಾರೆ.. ಕೊನೆಗೆ ರಾಕಿ ಭಾಯ್ ಸಿಗ್ನಲ್ ಬಗ್ಗೆ ಹುಟ್ಟಿಕೊಂಡ ಪ್ರಶ್ನೆಗಳಿಗೆ ರಾಧಿಕಾ ಅವರೇ ಉತ್ತರಿಸುವಂತಾಯಿತು..

Advertisement
Advertisement

Advertisement

About admin

Check Also

ರಾಜಕೀಯ ಎಂಟ್ರಿ ಬಗ್ಗೆ ಬಾಲಿವುಡ್ ನಟ ಸೋನು ಸೂದ್ ಹೇಳಿದ್ದೇನು ಗೊತ್ತೆ?

Advertisement ಕೊರೊನಾ ಮೊದಲನೇ ಅಲೆ ಆರ್ಭಟ, ಲಾಕ್ ಡೌನ್ ಸಂಕಷ್ಟದಿಂದ ಹಿಡಿದೂ ಕೋವಿಡ್ ಎರಡನೇ ಅಲೆಯಲ್ಲಿಯೂ ತತ್ತರಿಸಿರುವ ಹಲವರಿಗೆ ಬಾಲಿವುಡ್ …

Leave a Reply

Your email address will not be published.

Recent Comments

No comments to show.