ಸ್ಯಾಂಡಲ್ವುಡ್ ನ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಒಂದು ರೀತಿ ಜಾಲಿ ಜೋಡಿ ಎನ್ನಬಹುದು.. ತಮ್ಮ ಜೀವನದ ಸಂತೋಷದ ಕ್ಷಣಗಳನ್ನು ವಿಶೇಷವಾಗಿ ಅಭಿಮಾನಿಗಳೊಂದಿಗೆ ಹಂಚಿಕೊಂಡು ಅಭಿಮಾನಿಗಳನ್ನು ಸಹ ಆ ಸಂಭ್ರಮದ ಒಂದು ಭಾಗ ಎನ್ನುತ್ತಾರೆ.. ಇನ್ನು ಮೊದಲ ಮಗು ಐರಾ ಹುಟ್ಟುವ ಸಮಯದಿಂದ ಎರಡನೇ ಮಗು ಜೂನಿಯರ್ ಯಶ್ ಅವರ ಫೋಟೋ ರಿವೀಲ್ ಮಾಡುವವರೆಗೂ ಸ್ಪೆಷಲ್ ಆಗಿಯೇ ವಿಚಾರ ತಿಳಿಸಿ ಅಭಿಮಾನಿಗಳೊಂದಿಗೆ ಅವರೂ ಸಹ ಸಂತೋಷ ಪಟ್ಟಿದ್ದರು..
ಇದೀಗ ರಾಧಿಕಾ ಪಂಡಿತ್ ಅವರು ಹಸಿರು ಸಂಭ್ರಮದ ಫೋಟೋವೊಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಇದು ಯಾವ ಸಮಾರಂಭದ ಫೋಟೋ ಇರಬಹುದು ತಿಳಿಸಿ ಮುಂದಿನ ಪೋಸ್ಟ್ ನಲ್ಲಿ ಉತ್ತರ ನೀಡುವೆ ಎಂದಿದ್ದಾರೆ.. ರಾಧಿಕಾ ಪಂಡಿತ್ ಹಾಕಿರುವ ಹಸಿರು ಸಂಭ್ರಮದ ಫೋಟೋದಲ್ಲಿ ಅವರು ಗರ್ಭಿಣಿಯಾಗಿದ್ದು, ಕೆಲ ಅಭಿಮಾನಿಗಳು ಮೂರನೇ ಮಗುವಿನ ಸಂಭ್ರಮದ ಫೋಟೋನಾ ಎಂದು ಪ್ರಶ್ನಿಸಿ ಶುಭಾಶಯ ತಿಳಿಸಿ ಪ್ರೀತಿಯಾಗಿಯೇ ಕಾಲೆಳೆದಿದ್ದಾರೆ..
ಆದರೆ ಅಸಲಿಗೆ ರಾಧಿಕಾ ಪಂಡಿತ್ ಅವರು ಹಾಕಿರುವ ಫೋಟೋ ಕೊಂಕಣಿ ಸಂಪ್ರದಾಯದ ಪ್ರಕಾರ ಗರ್ಭಿಣಿ ಸಮಯದಲ್ಲಿ ಪಚ್ವೆ ಸಮಾರಂಭ ಎಂದು ಮಾಡಲಾಗುತ್ತದೆ.. ರಾಧಿಕಾ ಅವರು ಎರಡನೇ ಮಗುವಿಗೆ ಗರ್ಭಿಣಿ ಆದ ಸಮಯದಲ್ಲಿ ಈ ಸಮಾರಂಭ ಮಾಡಲಾಗಿದ್ದು ಹಳೆಯ ಫೋಟೋವನ್ನು ಇದೀಗ ಹಂಚಿಕೊಂಡು ಅಭಿಮಾನಿಗಳಿಗೆ ಊಹಿಸಲು ತಿಳಿಸಿ ಕುತೂಹಲ ಮೂಡಿಸಿದ್ದಾರೆ… ಇನ್ನು ಕೆಲ ಅಭಿಮಾನಿಗಳು ಜೂನಿಯರ್ ಯಶ್ ಅವರ ಹೆಸರು ತಿಳಿಸಿ ಎಂದು ಮನವಿ ಮಾಡಿದ್ದು, ಸಧ್ಯದಲ್ಲಿಯೇ ಜೂನಿಯರ್ ರಾಕಿ ಹೆಸರನ್ನೂ ಸಹ ಯಶ್ ಹಾಗೂ ರಾಧಿಕಾ ಪಂಡಿತ್ ರಿವೀಲ್ ಮಾಡಲಿದ್ದಾರೆ..