ಪುನೀತ್ ರಾಜ್ ಕುಮಾರ್.. ಸಿನಿಮಾ ವಿಚಾರಗಳನ್ನೆಲ್ಲಾ ಬದಿಗಿಟ್ಟು ನೋಡುವ ಪ್ರತಿಯೊಬ್ಬ ಕನ್ನಡಿಗರಿಗೂ ಪುನೀತ್ ರಾಜ್ ಕುಮಾರ್ ಅವರ ಗುಣ, ಸರಳ ವ್ಯಕ್ತಿತ್ವ ಎಲ್ಲವೂ ನಿಜಕ್ಕೂ ಇಷ್ಟವಾಗುತ್ತದೆ.. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಮೂಲಕ ಪುನೀತ್ ಅವರು ಜನರಿಗೆ ಮತ್ತಷ್ಟು ಹತ್ತಿರವಾಗುದ್ದರು.. ಅಲ್ಲಿ ಶೋಗೆ ಬಂದಿದ್ದ ಅನೇಕ ಬಡವರಿಗೆ ಪುನೀತ್ ತೆರೆಯ ಹಿಂದೆಯೇ ಸಹಾಯ ಮಾಡಿದ್ದರು.. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ನಾನು ನಮ್ಮವರು ನಮ್ಮ ಕುಟುಂಬ ಮಾತ್ರ ಎನ್ನುವ ಬಾಲಿವುಡ್ ಅನ್ನು ನಾವು ನೋಡಿಯೇ ಇದ್ದೇವೆ..
ಆದರೆ ಪುನೀತ್ ರಾಜ್ ಕುಮಾರ್ ಮಾತ್ರ ಇದೆಲ್ಲದಕ್ಕಿಂತ ಭಿನ್ನ ಎನ್ನಲೇಬೇಕು.. ಪುನೀತ್ ರಾಜ್ ಕುಮಾರ್ ಅವರು ಹೊಸ ಪ್ರತಿಭೆಗಳನ್ನು ಬೆಳೆಸುವ ಸಲುವಾಗಿಯೇ ಪಿ ಆರ್ ಕೆ ಪ್ರೊಡಕ್ಷನ್ಸ್ ಅನ್ನು ತೆರೆದಿದ್ದರು.. ತಾವು ಮನಸ್ಸು ಮಾಡಿದ್ದರೆ ಸ್ಟಾರ್ ನಟರ ಸಿನಿಮಾಗಳನ್ನು ಮಾಡಿ ಕೋಟಿ ಕೋಟಿ ಹಣ ಮಾಡಬಹುದಾಗಿತ್ತು.. ಆದರೆ ಪುನೀತ್ ಮಾಡಿದ್ದೇ ಬೇರೆ..
ಹೌದು ಬಹಳಷ್ಟು ಪ್ರತಿಭೆ ಇದ್ದರೂ ತಮ್ಮನ್ನು ನಂಬಿ ಬಂಡವಾಳ ಹಾಕುವವರು ಯಾರೂ ಇಲ್ಲದೇ ಅದೆಷ್ಟೋ ಜನ ಬಡ ಪ್ರತಿಭೆಗಳು ಬೆಳಕಿಗೆ ಬರೋದೆ ಇಲ್ಲ.. ಅಂತವರಿಗಾಗಿ ಪುನೀತ್ ಪ್ರೊಡಕ್ಷನ್ ಹೌಸ್ ಮಾಡಿದ್ದು ಅಲ್ಲಿ ಪ್ರತಿಭೆಗಷ್ಟೇ ಬೆಲೆ.. ಒಳ್ಳೆಯ ಕತೆ ಇದ್ದರೆ ಸಾಕು.. ಸಿನಿಮಾ ಮಾಡಲು ಸಂಪೂರ್ಣ ಪ್ರೋತ್ಸಾಹ ನೀಡುತ್ತಾರೆ..
ಇನ್ನು ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ಅವರ ವಿಚಾರದಲ್ಲಿಯೂ ಪುನೀತ್ ದೊಡ್ಡತನ ತೋರಿದ್ದಾರೆ.. ಹೌದು ರಾಗಿಣಿ ಚಂದ್ರನ್ ಅವರು ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡಲು ಸಕಲ ತಯಾರಿ ನಡೆಸಿದ್ದರು.. ಅದರಂತೆ ಒಳ್ಳೆಯ ಕತೆಯುಳ್ಳ ವಿಜಯದಶಮಿ ಎಂಬ ಚಿತ್ರದ ಮೂಲಕ ತೆರೆಯ ಮೇಲೆ ಬರಲು ಸಜ್ಜಾದರು.. ಆದರೆ ಸಿನಿಮಾ ಅರ್ಧಕ್ಕೆ ನಿಂತಿತ್ತು..
ಈ ವಿಚಾರ ತಿಳಿದ ಪುನೀತ್, ವಿಜಯ ದಶಮಿ ಚಿತ್ರದ ನಿರ್ದೇಶಕರನ್ನು ಕರೆಸಿ ಕತೆ ಕೇಳಿ.. ಮೆಚ್ಚುಗೆ ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ ಆ ಸಿನಿಮಾವನ್ನು ತಾವೇ ಮಾಡುವುದಾಗಿ ತಿಳಿಸಿದ್ದಾರೆ.. ಕೊನೆಗೂ ರಾಗಿಣಿ ಚಂದ್ರನ್ ಅವರ ಸಿನಿಮಾ ಕನಸಿಗೆ ಪುನೀತ್ ರಾಜ್ ಕುಮಾರ್ ಪ್ರೋತ್ಸಾಹ ನೀಡಿದರು.. ಅದೇ ಸಿನಿಮಾ ಇದೀಗ ಲಾ ಎಂಬ ಹೆಸರಿನಡಿ ತಯಾರಾಗಿದ್ದು ಬಿಡುಗಡೆಗೆ ಸಜ್ಜಾಗಿದೆ..
ಇದೀಗ ಕೊರೊನಾ ಕಾರಣದಿಂದಾಗಿ ಥಿಯೇಟರ್ ಗಳು ಓಪನ್ ಇಲ್ಲದ ಕಾರಣ ಸಿನಿಮಾವನ್ನು ಅಮೇಜಾಮ್ ಪ್ರೈಮ್ ನಲ್ಲಿ ಇದೇ ಜುಲೈ 17 ರಂದು ಬಿಡುಗಡೆ ಮಾಡುತ್ತಿದ್ದಾರೆ.. ಲಾ ಸಿನಿಮಾ ಅಷ್ಟೇ ಅಲ್ಲ ಈಗಾಗಲೇ ಕವಲುದಾರಿ ಸೇರಿದಂತೆ ಪುನೀತ್ ಅವರ ನಿರ್ಮಾಣದ ಅಡಿಯಲ್ಲಿ ಸಾಕಷ್ಟು ಸಿನಿಮಾಗಳು ತಯಾರಾಗಿದ್ದು, ತಯಾರಾಗುತ್ತಿದೆ.. ಈ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವ ಪುನೀತ್ ಅವರಿಗೆ ಧನ್ಯವಾದಗಳು..