ನಮ್ಮ ಪೋಲೀಸರು ನಮಗೆ ಸದಾ ಹೆಮ್ಮೆಯೇ.. ಆಗಾಗ ನಮ್ಮ ಪೊಲೀಸರ ದಿಟ್ಟತನದ ಬಗ್ಗೆ ವರದಿಗಳನ್ನು ಸಹ ನೋಡಿಯೇ ಇರುತ್ತೇವೆ.. ಅದರಲ್ಲೂ ಮಹಿಳಾ ಪೊಲೀಸ್ ಅಧಿಕಾರಿಗಳು ಧೈರ್ಯದಿಂದ ಕರ್ತವ್ಯ ನಿಷ್ಠೆ ಮೆರೆದ ಅನೇಕ ಉದಾಹರಣೆ ಗಳಿದೆ.. ಅಂತಹ ಸುದ್ದಿಗಳನ್ನು ನೋಡಿದಾಗ ನಿಜಕ್ಕೂ ಹೆಣ್ಣಿನ ಬಗ್ಗೆ ಗೌರವ ಇನ್ನಷ್ಟು ಹೆಚ್ಚಾಗುತ್ತದೆ.. ಆದರೆ ಇಲ್ಲೊಬ್ಬ ಮಹಿಳಾ ಪೊಲೀಸ್ ಅಧಿಕಾರಿ ಮಾಡಿರುವ ಕೆಲಸ ನೋಡಿ..
ಹೌದು ಬಹುಶಃ ಇಂತವರಿಂದಲೇ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು.. ನಿಷ್ಠೆಯಿಂದ ಕೆಲಸ ಮಾಡುವ ಅಧಿಕಾರಿಗಳಿಗೆ ಇಂತಹ ಕೆಲ ಅಧಿಕಾರಿಗಳಿಂದಲೇ ಮುಜುಗರ.. ಹೌದು ಅ’ತ್ಯಾಚಾರಿ ಆರೋಪಿ ಒಬ್ಬರ ಬಳಿ ಈ ಮಹಿಳಾ ಅಧಿಕಾರಿ ಕೇಸ್ ಖುಲಾಸೆ ಮಾಡಲು ಹಣ ಕೇಳಿರುವ ಘಟನೆ ಬೆಳಕಿಗೆ ಬಂದಿದೆ..
ಹೌದು ಪಶ್ಚಿಮ ಅಹಮದಾಬಾದ್ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿರುವ ಶ್ವೇತಾ ಜಡೇಜಾ ಅವರೇ ಲಂಚ ಕೇಳಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ.. ಆರೋಪಿಯ ವಿರುದ್ಧ ಸಾಮಾಜಿಕ ವಿರೋಧಿ ಚಟುವಟಿಕೆಗಳ ತಡೆ ಕಾಯ್ದೆ ಆಡಿ ಪ್ರಕರಣ ದಾಖಲು ಮಾಡದೇ ಇರಲು ಶ್ವೇತಾ ಅವರು 35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ..
ಕೆನಾಲ್ ಶಾ ಎಂಬ ಆರೋಪಿ 2019ರಲ್ಲಿ ಅ’ತ್ಯಾಚಾರ ಮಾಡಿದ್ದು, ಆ ಪ್ರಕರಣವನ್ನು ಇದೇ ಶ್ವೇತಾ ಜಡೇಜಾ ಅವರು ವಿಚಾರಣೆ ಮಾಡುತ್ತಿದ್ದರು. ಈ ವೇಳೆ ಪಿಎಎಸ್ಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸದೇ ಇರಲು ಆರೋಪಿಯ ಸಹೋದರನ ಬಳಿ 35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.. ಅದರಲ್ಲಿ ಅದಾಗಲೇ 20 ಲಕ್ಷ ಹಣವನ್ನೂ ಸಹ ಪಡೆದಿದ್ದಾರೆ.
ಪಿಎಎಸ್ಎ ಕಾಯ್ದೆ ಅಡಿ ಪ್ರಕರಣ ದಾಖಲಿಸದೇ ಆತನನ್ನು ಪೊಲೀಸರು ಜಿಲ್ಲಾ ಕಾರಾಗೃಹದಿಂದ ಬೇರೆ ಜೈಲಿಗೆ ಸ್ಥಳಾಂತರಿಸುವುದನ್ನು ತಡೆಯಲು ಶ್ವೇತಾ ಅವರು ಮುಂದಾಗಿದ್ದರು.. ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಯ ಪ್ರಕಾರ, ಪೊಲೀಸ್ ಅಧಿಕಾರಿ ಶ್ವೇತಾ ಜಡೇಜಾ ಅವರು, ಆರೋಪಿ ಕಡೆಯ ಮಧ್ಯವರ್ತಿಯ ಬಳಿ ಈಗಾಗಲೇ 20 ಲಕ್ಷ ಹಣವನ್ನು ಸಹ ಪಡೆದುಕೊಂಡಿದ್ದಾರೆ ಎನ್ನಲಾಗಿದೆ..
ಆದರೆ ಅಷ್ಟಕೆ ನಿಲ್ಲದ ಆಕೆಯ ಹಣದ ದಾಹ ಇನ್ನೂ 15 ಲಕ್ಷ ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ 20 ಲಕ್ಷ ಪಡೆದು ಮತ್ತೆ 15 ಲಕ್ಷಕ್ಕೆ ಪೀಡಿಸುತ್ತಿದ್ದ ಕಾರಣ, ಆರೋಪಿಯೇ ಬೇದತ್ತು ಮಹಿಳಾ ಅಧಿಕಾರಿ ವಿರುದ್ಧ ದೂರು ನೀಡಿದ್ದಾನೆ.. ಆರೋಪಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸ್ ಅಧಿಕಾರಿ ಶ್ವೇತಾ ಜಡೇಜಾರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಸೆಷನ್ಸ್ ನ್ಯಾಯಾಲಯದ ಮುಂದೆ ನಿಲ್ಲಿಸಿದ್ದಾರೆ.. ವಿಚಾರಣೆ ನಡೆಸಿದ ನ್ಯಾಯಾಲಯ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ..
ಹೆಣ್ಣು ಮಕ್ಕಳ ರಕ್ಷಣೆಗೆಂದು ಇರುವ ಮಹಿಳಾ ಠಾಣೆಗಳಲ್ಲಿಯೇ ಇಂತಹ ಅಧಿಕಾರಿಗಳಿದ್ದರೆ ಅನ್ಯಾಯಕ್ಕೊಳಗಾದ ಹೆಣ್ಣು ಮಕ್ಕಳು ಅದೆಲ್ಲಿಗೆ ಹೋಗಬೇಕೋ ತಿಳಿಯದು..