ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಚಿರು ಜೊತೆಗೆ ಧೃವ ಸರ್ಜಾ ಪತ್ನಿ ಪ್ರೇರಣಾ ಮಾಡಿರುವ ಡ್ಯಾನ್ಸ್ ವೀಡಿಯೋ ವೊಂದು ವೈರಲ್ ಆಗಿತ್ತು.. ಇದೀಗ ಅದೇ ವೀಡಿಯೋವನ್ನು ಹಂಚಿಕೊಂಡಿರುವ ಪ್ರೇರಣಾ ಚಿರು ಬಗ್ಗೆ ಮಾತನಾಡಿದ್ದಾರೆ..
ಹೌದು ಎಲ್ಲರಿಗೂ ತಿಳಿದಂತೆ ಸರ್ಜಾ ಕುಟುಂಬ ಒಂದು ರೀತಿ ಜೇನು ಗೂಡಿನಂತ ಕುಟುಂಬ.. ಆದರೆ ಅದ್ಯಾರ ಕಣ್ಣು ಬಿತ್ತೋ ಜವರಾಯ ಆ ಜೇನುಗೂಡಿಗೆ ಕಲ್ಲು ಹೊಡೆದುಬಿಟ್ಟ.. ಇನ್ನೇನಿದ್ದರೂ ಆ ಕುಟುಂಬಕ್ಕೆ ಚಿರುವಿನ ಸವಿ ನೆನಪುಗಳಷ್ಟೇ ಉಳಿದಿರುವುದು.. ಇನ್ನೇನು ಕೆಲವೇ ತಿಂಗಳಲ್ಲಿ ಮರಳಿ ಹುಟ್ಟಿ ಬರುವ ಚಿರುವಿಗಾಗಿ ಕಾಯುತ್ತಿರುವ ಕುಟುಂಬ ಚಿರು ಸರ್ಜಾರ ಹಲವಾರು ಫೋಟೋ ವೀಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ..
ಅದರಲ್ಲೊಂದು ಈ ವೀಡಿಯೋ.. ಸದಾ ಸ್ನೇಹಿತರಂತಿದ್ದ ಚಿರು ಹಾಗೂ ಪ್ರೇರಣಾ ಒಮ್ಮೆ ಡ್ಯಾನ್ಸ್ ಮಾಡುವಾಗ ಮೇಘನಾ ಹಾಗೂ ಧೃವ ಸರ್ಜಾ ತೆಗೆದ ವೀಡಿಯೋ ಇದು.. ಇದನ್ನು ಪೋಸ್ಟ್ ಮಾಡಿರುವ ಪ್ರೇರಣಾ “ಸದ್ಯ ಧ್ರುವ ಪತ್ನಿ ಪ್ರೇರಣ ಚಿರು ಜೊತೆ ಕಳೆದ ಕ್ಷಣವೊಂದರ ಬಗ್ಗೆ ಮಾತಾಡಿದ್ದಾರೆ. “ಅದೊಂದು ದಿನ ತಮಾಷೆಗಾಗಿ ಮಾಡಿದ ವೀಡಿಯೋ ಇದು.. ಇದನ್ನ ನಾನು ಪೋಸ್ಟ್ ಮಾಡ್ತೀನಿ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ.. ಆದರೆ ಈಗ, ಇದೇ ನನ್ನ ಬಳಿ ನಿಮ್ಮ ನೆನಪಿಗೆ ಇರುವಂತ ಅಮೂಲ್ಯವಾದ ವೀಡಿಯೋ.. ಚಿರು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..
AdvertisementView this post on Instagram
Advertisement
ಚಿರು ಅನೇಕ ಬಾರಿ ಪ್ರೇರಣಾರ ಬಗ್ಗೆ ಮಾತನಾಡಿದ್ದರು.. ಪ್ರೇರಣಾ ಚಿಕ್ಕ ವಯಸ್ಸಿನಿಂದಲೂ ಹೆಚ್ಚು ಧೃವ ಅವರ ಮನೆಯಲ್ಲಿಯೇ ಸಮಯ ಕಳೆಯುತ್ತಿದ್ದು ಒಳ್ಳೆಯ ಸ್ನೇಹಿತರೂ ಹೌದು.. ವಯಸ್ಸಿನಲ್ಲಿ ಪ್ರೇರಣಾ ಚಿಕ್ಕವರೇ ಆದರೂ ಸಹ.. ಚಿರು ಮಾತ್ರ ಪ್ರೇರಣಾರನ್ನು ನಮ್ಮ ಮನೆಯ ಗೈಡ್.. ಒಂದು ರೀತಿ ನಮ್ಮನ್ನೆಲ್ಲಾ ಸರಿ ದಾರಿಗೆ ತೆಗೆದುಕೊಂಡು ಹೋಗುವ ಪ್ರೊಫೆಸರ್ ಎನ್ನುತ್ತಿದ್ದರು.. ನಾವೆಲ್ಲಾ ಏನೇ ತಪ್ಪು ಮಾಡಿದ್ರೂ ಪ್ರೇರಣಾ ಸೂಕ್ಷ್ಮವಾಗಿ ಅದು ಹಾಗಲ್ಲ ಹೀಗೆ ಎಂದು ವಿವರಿಸಿ ಹೇಳ್ತಾರೆ.. ನಮ್ಮ ಮನೆಗೆ ಸೊಸೆಯಾಗಿ ಪ್ರೇರಣಾ ಬರ್ತಾ ಇರೋದು ನಮ್ಮ ಇಡೀ ಕುಟುಂಬಕ್ಕೆ ಒಂದು ರೀತಿ ಹಬ್ಬ.. ಇನ್ನು ಮುಂದೆ ಇನ್ನೂ ಹೆಚ್ಚು ಸಂತೋಷ ವಾಗಿ ಇರ್ತೇವೆ” ಎಂದು ಧೃವ ಪ್ರೇರಣಾ ಅವರ ನಿಶ್ಚಿತಾರ್ಥದ ಸಮಯದಲ್ಲಿ ಚಿರು ಹೇಳಿದ್ದರು..
ಆದರೆ ಇರುವಷ್ಟು ದಿನ ಚಿರು ಇಲದ ನೋವಿನಲ್ಲಿಯೇ ಇರುವಂತೆ ಅಪಾರ ಪ್ರೀತಿ ಕೊಟ್ಟು ಅಲ್ಪ ಕಾಲದಲ್ಲಿಯೇ ಜೀವನದ ಪಯಣ ಮುಗಿಸಿ ಹೋಗಿಬಿಟ್ಟರು.. ದಯವಿಟ್ಟು ಆ ಕುಟುಂಬಕ್ಕೆ ಮತ್ತೆ ಪ್ರೀತಿ ನೀಡುವ ಸಲುವಾಗಿಯಾದರೂ ಮತ್ತೊಮ್ಮೆ ಹುಟ್ಟಿಬನ್ನಿ ಚಿರು..