ಕೆಲ ದಿನಗಳ ಹಿಂದೆ ಅಂತರಾಷ್ಟ್ರೀಯ ಖ್ಯಾತಿಯ ಯುವ ವಿಜ್ಞಾನಿ ಎಂದೇ ಕರೆಯಲ್ಪಡುತ್ತಿದ್ದ ಡ್ರೋನ್ ಪ್ರತಾಪ್ ನಿನ್ನೆ ಬಿಟಿವಿಯಲ್ಲಿ ತಮ್ಮ ಸಾಧನೆಯ ಕುರಿತಾಗಿ ಸಾಕ್ಷಿ ಒದಗಿಸಲು ಬಂದು ಕೂತನು.. ಆದರೆ ಅವರಂದುಕೊಂಡಂತೆ ಏನೂ ನಡೆಯಲಿಲ್ಲ.. ಆದರೂ ಸಹ ಅವರು ಮಾಡಿದ್ದಾರೆ ಎನ್ನಲಾಗುವ ತಪ್ಪುಗಳನ್ನು ಬಹುತೇಕ ಯಾವುದನ್ನು ಸಹ ಒಪ್ಪಿಕೊಳ್ಳಲಿಲ್ಲ.. ಇನ್ನು ಕಾರ್ಯಕ್ರಮ ಶುರು ಆಗುವ ಮುನ್ನ ಕಿರಿಕ್ ಕೀರ್ತಿ ಶೋ ನಡೆಸಿಕೊಡುತ್ತಿದ್ದುದರಿಂದ ಎಲ್ಲಾ ಸತ್ಯವನ್ನು ಬಯಲು ಮಾಡುತ್ತಾರೆ ಎಂದುಕೊಳ್ಳಲಾಗಿತ್ತು.. ಆದರೆ ಕೀರ್ತಿ ಅವರು ಬಹಳ ತಾಳ್ಮೆಯಿಂದ ನಡೆದುಕೊಂಡು ನಿರೂಪಕರಾಗಿ ಕಾಣಿಸಿಕೊಂಡರಷ್ಟೇ.. ಈ ಬಗ್ಗೆ ಬಹುತೇಕರಿಗೆ ಅಸಮಾಧಾನವೂ ಉಂಟಾಯಿತು.. ಆತನ ವೀಡಿಯೋ ತುಣುಕುಗಳನ್ನು ನೋಡಿದರೆ ಸಾಕು ಕೆಲವೊಂದಿಷ್ಟು ಜನರನ್ನು ಹೊರತು ಪಡಿಸಿ ಮಿಕ್ಕವರಿಗೆ ಆತ ಹೇಳುತ್ತಿರುವುದು ಸುಳ್ಳು ಎಂದು ಅರ್ಥವಾಗುತ್ತದೆ.. ಆದರೂ ಸಹ ಕೀರ್ತಿ ಅವರು ಸತ್ಯವನ್ನು ಖಡಕ್ ಆಗಿ ಹೊರ ತೆಗೆಯಲಿಲ್ಲ ಎಂಬ ಮಾತು ಕೇಳಿ ಬಂತು.. ಕೀರ್ತಿ ಅವರು ಈ ರೀತಿ ನಡೆದುಕೊಳ್ಳಲು ಬೇರೆಯದ್ದೇ ಕಾರಣ ಇದೆ..
ಹೌದು ಡ್ರೋನ್ ಪ್ರತಾಪ್ ಬಿಟಿವಿ ಸ್ಟುಡಿಯೋಗೆ ಸಂಜೆ 5 ಗಂಟೆಗೆ ಬಂದು ಕೂತಿದ್ದ.. ಕಾರ್ಯಕ್ರಮ ಶುರುವಾಗಿದ್ದು ಮಾತ್ರ 7 ಗಂಟೆಗೆ.. ಅದಾಗಲೇ ಪ್ರತಾಪ ಭಯಗೊಂಡಿದ್ದನಂತೆ.. ಈ ಬಗ್ಗೆ ಕೀರ್ತಿ ಅವರೇ ಸ್ಪಷ್ಟನೆ ಕೊಟ್ಟ ಮಾತುಗಳು ಇಲ್ಲಿವೆ ನೋಡಿ.. “ಇವತ್ತಿನ ಡ್ರೋನ್ ಪ್ರತಾಪ್ ಸಂದರ್ಶನ ತುಂಬಾ ಜನ ನೋಡಿದ್ದೀರಿ… ನಿಮ್ಮೆಲ್ಲರ ಪ್ರಶಂಸೆಗೆ ಧನ್ಯವಾದ… ನಾನು ನನ್ನ ತಾಳ್ಮೆ ಎಲ್ಲೂ ಕಳೆದುಕೊಳ್ಳಲಿಲ್ಲ… ನನಗೆ ಅವನಿಂದ ಸತ್ಯ ಬಾಯಿ ಬಿಡುಸುವುದಷ್ಟೇ ನನ್ನ ಉದ್ದೇಶವಾಗಿತ್ತು… ಅದನ್ನು ನಿಭಾಯಿಸಿದ್ದೇನೆ… ಕಾರ್ಯಕ್ರಮದ ಮುಂಚೆ ಎರಡು ಗಂಟೆ ಪ್ರತಾಪ್ ಜೊತೆ ಕೂತು ಮಾತಾಡಿದ್ದೆ…. ಸ್ವಲ್ಪ ಡಿಪ್ರೆಸ್ ಆಗಿದ್ದಿದ್ದು ನಿಜ… ಹಾಗಾಗಿ ಈ ಮನುಷ್ಯನನ್ನ ಕೂಲಾಗಿ ಹ್ಯಾಂಡಲ್ ಮಾಡ್ಬೇಕು ಅನ್ನೋದು ಅರ್ಥ ಆಯ್ತು… ಹಾಗಾಗಿ ಟೆಕ್ನಿಕಾಲಿಟಿಯ ಬಗ್ಗೆ ಅವರ ಸ್ನೇಹಿತನಿಂದಲೇ ಪ್ರಶ್ನೆ ಮಾಡಿಸಿದ್ವಿ…. ಎಲ್ಲೂ ಹೋಗದೇ ಮೊದಲು ಬಂದು ನಮ್ಮ ಜೊತೆಗೆ ಕೂತು ಮಾತಾಡಿದಾಗ ಮೂರು ಗಂಟೆಗೂ ಹೆಚ್ಚು ಸಮಯ ಅವನನ್ನ ಕೂಗಾಡಿ, ಕಿರುಚಾಡಿ ಮಾತಾಡಿಸೋದು ಕಷ್ಟ ಸಾಧ್ಯ…. ಹಾಗಾಗಿ ಅವರದೇ ಭಾಷಣದ ತುಣುಕು ತೋರಿಸಿ ಕೂಲಾಗೇ ಉತ್ತರ ಪಡೆದೆ…
ಇವತ್ತು ಬೆಂಡೆತ್ತಬೇಕಿತ್ತು ಅಂದವರು, ನಾಳೆ ಆತ ಹೋಗಿ ಕೆಟ್ಟ ನಿರ್ಧಾರ ಮಾಡಿದ್ದಿದ್ರೆ, ನನ್ನನ್ನೇ ನಾಳೆ ಟಾರ್ಗೆಟ್ ಮಾಡ್ತಿದ್ರು… ನಿನ್ನಿಂದಲೇ ಸತ್ತು ಹೋದ ಅಂತಿದ್ರು… ಹಾಗಾಗಿ ನನ್ನ ತಾಳ್ಮೆ ನಾನು ಕಳೆದುಕೊಳ್ಳಲಿಲ್ಲ…ಆದ್ರೆ ಎಲ್ಲಾ ಸತ್ಯ ಬಾಯ್ಬಿಡಿಸೋ ಪ್ರಯತ್ನ ಮಾಡಿದ್ದೇನೆ…. ಒಬ್ಬ ಯುವಕ ವಯಸ್ಸಿನ ಬಿಸಿಯಲ್ಲಿ ಏನೇನೋ ಬಡಬಡಾಯಿಸಿದ್ದಾನೆ… ಕಾಲ ಕ್ರಮೇಣ ಎಲ್ಲಾ ಹೊರಬರುತ್ತೆ… ನಾನಿವತ್ತು ಅವನ ಜೊತೆಗೆ ಕೂತಿದ್ದು ಬಿಟಿವಿಯ ಪ್ರಿನ್ಸಿಪಲ್ ಎಡಿಟರ್ ಆಗಿ… ಪತ್ರಕರ್ತನಾಗಿ… ಹಲವರಿಗೆ ತುಂಬಾ ಚೆನ್ನಾಗಿತ್ತು ಅನಿಸಿದೆ… ಕೆಲವರಿಗೆ ಯಾಕಿಷ್ಟು ತಾಳ್ಮೆ ಅನಿಸಿದೆ… ತಪ್ಪಿಲ್ಲ…. ಎಲ್ಲರ ಅಭಿಪ್ರಾಯ ಗೌರವಿಸ್ತೇನೆ… ನಿಮ್ಮಹಾರೈಕೆ ಜೊತೆಗಿರಲಿ… ಧನ್ಯವಾದಗಳು…” ಇವಿಷ್ಟು ಕೀರ್ತಿ ಅವರ ಮಾತುಗಳು.. ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು..