ಜೊತೆಜೊತೆಯಲಿ ನಿಜಕ್ಕೂ ಇಂದಿನ ಸಂಚಿಕೆಯಲ್ಲಿ ರೋಚಕ ತಿರುವು ಪಡೆದು ನೋಡುಗರಿಗೆ ಮತ್ತೊಮ್ಮೆ ಸಿನಿಮಾ ರೀತಿಯಲ್ಲಿ ಭಾಸವಾಯಿತೆನ್ನಬಹುದು.. ಹೌದು ಖಡಕ್ ಹೀರೋ ಆರ್ಯವರ್ಧನ್ ಅವರಿಗೆ ಇಂದು ಖಡಕ್ ವಿಲನ್ ನ ಎಂಟ್ರಿಯಾಗಿದೆ..
ಅದರಲ್ಲೂ ಅನಿರುದ್ಧ್ ಅವರ ಚಿಕ್ಕವಯಸ್ಸಿನ ಫೋಟೋವೊಂದನ್ನು ಧಾರಾವಾಹಿಯಲ್ಲಿ ಬಳಸಿದ್ದು ಆರ್ಯವರ್ಧನ್ ರ ಅಭಿಮಾನಿಗಳಿಗೆ ಸಂತೋಷವನ್ನುಂಟು ಮಾಡಿತೆನ್ನಬಹುದು..
ಇನ್ನೇನಿದ್ದರೂ ಹೊಸ ತಿರುವಿನೊಂದಿಗೆ ಆರ್ಯವರ್ಧನ್ ಅವರು ಬೆಳೆದು ಈ ಹಂತಕ್ಕೆ ಬಂದ ರೋಚಕ ಕತೆಯನ್ನು ನಿರ್ದೇಶಕರು ತೆರೆ ಮೇಲೆ ತೋರಿಸುವ ರೀತಿಯನ್ನು ನೋಡುವ ಕಾತುರ ಪ್ರೇಕ್ಷಕರದ್ದು..
ಅದರಲ್ಲೂ ಮುಂದಿನ ಸಂಚಿಕೆಯ ಪ್ರೋಮೋದಲ್ಲಿ ತೋರಿದಂತೆ ಜಲಂಧರ್ ಬಿಡುಗಡೆಯಾಗಿ ಬಂದು ನೀಲ್ ಅನ್ನು ಭೇಟಿ ಮಾಡಿದ್ದು.. ನೀಲ್ ಜಲಂಧರ್ ನನ್ನು ಬಾಸ್ ಎಂದಿದ್ದು ಯಾರೂ ಊಹಿಸದ ತಿರುವಾಗಿತ್ತು..
ನೋಡಲು ಸೌಮ್ಯ ಸ್ವಭಾವದವರಾದರೂ ಆರ್ಯವರ್ಧನ್ ಅವರ ಕೋಪವನ್ನು ನಾವೀಗಾಗಲೇ ಬಹಳಷ್ಟು ಬಾರಿ ನೋಡಿಯಾಗಿದೆ.. ಚಾಣಾಕ್ಷ ಆರ್ಯವರ್ಧನ್ ತಮ್ಮ ಸುತ್ತಲೂ ಇರುವ ಈ ವಿಲನ್ ಗಳನ್ನು ಅದೇಗೆ ಮಟ್ಟಹಾಕಿ ಮುಂದೆ ಅನು ಅವರನ್ನು ಯಾವ ರೀತಿ ಮದುವೆಯಾಗುವರೋ ಕಾದು ನೋಡಬೇಕಿದೆ..