Breaking News

ನೀವುಗಳು ನೋಡಿರದ ಅನಿರುದ್ಧ್ ಅವರ ಪರಿಚಯ.. ಅನಿರುದ್ಧ್ ಎಂಬ ಅದ್ಭುತ ಜಗತ್ತು

Advertisement

ಗೆಳೆಯರೇ ನೀವು ನೋಡಿರದ ಅನಿರುದ್ಧ್ ಎಂಬ ಅದ್ಭುತವನ್ನು ನಿಮಗೆ ಪರಿಚಯಿಸುವ ಆಸೆ. ಅನಿರುದ್ಧ್ ಅವರು ಒಬ್ಬ ಅದ್ಭುತ ಕಲಾವಿದ, ತುಂಬಾ ಸರಳ, ತುಂಬಾ ಸೌಮ್ಯ, ಸಜ್ಜನಿಕೆಯ ವ್ಯಕ್ತಿತ್ವ, ಎಲ್ಲರ ಜೊತೆ ಪ್ರೀತಿಯಿಂದ ಬೆರೆಯುತ್ತಾರೆ, ಯಾರನ್ನೂ ನೋಯಿಸುವುದಿಲ್ಲ, ತುಂಬಾ ಸಂಸ್ಕಾರವಂತರು ಎಂಬುದು ನಿಮಗೆ ಗೊತ್ತು. ಆದರೆ, ಅವರಲ್ಲಿನ ಹೋರಾಟ ಮನೋಭಾವ, ಕ್ರಾಂತಿಕಾರಿ ಗುಣಗಳು ನಿಮಗೆ ಗೊತ್ತಿಲ್ಲ.

Advertisement

ಸಾಮಾನ್ಯವಾಗಿ ಕೆಲವು ನಟರು, ತಾನಾಯಿತು, ತನ್ನ ಪಾತ್ರವಾಯಿತು ಎಂದು ತಮ್ಮ ಸುತ್ತಲೂ ವಿಚಿತ್ರವಾದ ಕೋಟೆಯನ್ನು ಕಟ್ಟಿಕೊಂಡು, ಬದುಕು ಇಷ್ಟೇ ಎಂದು ಸಂಭ್ರಮಿಸುತ್ತಾರೆ.

ಆದರೆ, ಅನಿರುದ್ಧ್ ಅವರ ದಾರಿಯೇ ಬೇರೆಯಾಗಿತ್ತು. ಹೆಜ್ಜೆ ಹೆಜ್ಜೆಗೂ ಹೊಸತೇನನ್ನೋ ಹುಡುಕುತ್ತಲೇ ಇದ್ದರು., ಗೊತ್ತಿಲ್ಲದ ವಿಚಾರಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು… ಬಹಳ ಬೇಗ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದರು… ಅದರಲ್ಲೇ ಹೆಚ್ಚು ಸಂತೃಪ್ತಿ, ಆನಂದವನ್ನು ಪಡೆಯುತ್ತಿದ್ದರು.

Advertisement

ಬದುಕಿನ ವಿಚಿತ್ರಗಳನ್ನು ಎಷ್ಟೊಂದು ಕುತೂಹಲದಿಂದ ನೋಡುತ್ತಿದ್ದರೋ, ಬೇರೆಯವರ ಅನುಭವಗಳನ್ನೂ ಅಷ್ಟೇ ಆಸಕ್ತಿಯಿಂದ ತಿಳಿಯುತ್ತಿದ್ದರು… ಹುಡುಕಾಟದ ಮನೋಭಾವ ಜೊತೆಗೆ ಗ್ರಹಿಸುವ ಶಕ್ತಿ ಎರಡೂ ಇವರಲ್ಲಿತ್ತು.
ಮಾನವೀಯ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದರು.

Advertisement

ಹೀಗಾಗಿಯೇ, ನಟನೆಯ ಜೊತೆಗೆ ಬರವಣಿಗೆ, ಬರವಣಿಗೆಯ ಜೊತೆಗೆ ನಿರ್ದೇಶನ, ನಿರ್ದೇಶನದಲ್ಲಿ ದಾಖಲೆ ಮಾಡಿ, ಅಂಕಣಕಾರರಾಗಿಯೂ ಗೆದ್ದಿದ್ದಾರೆ. ವಿಶೇಷವೆಂದರೆ, ಇಲ್ಲಿಯೂ ಸಂದೇಶವೇ ಇವರ ಗುರಿಯಾಗಿದೆ.

ಇವೆಲ್ಲದರ ಜೊತೆಗೆ ಸಂಸ್ಕಾರವಂತ ಕುಟುಂಬದ ಜವಾಬ್ದಾರಿ ಹಾಗೂ, ‘ವಿಭಾ’ ಮತ್ತು ‘ಸ್ನೇಹಲೋಕ’ವನ್ನು ಮುನ್ನಡೆಸುವಲ್ಲಿನ ಇವರ ಕಾಳಜಿ, ಸಹನೆ, ದಿಟ್ಟತನ ಎಲ್ಲವೂ ಇವರಲ್ಲಿನ ನಾಯಕತ್ವದ ಗುಣಗಳಿಗೆ ಒಂದು ಮಾದರಿಯಾಗಿದೆ.

Advertisement

ಸಾಹಸಸಿಂಹ ಅವರಲ್ಲಿನ ಶ್ರೇಷ್ಠತೆಯ ಪ್ರತಿಬಿಂಬ ಇವರು…
ಹೆಣ್ಣನ್ನು ಗೌರವಿಸುವ, ಶ್ರೀಮತಿಯನ್ನು ತಾಯಿಯಂತೆ ಸತ್ಕರಿಸುವ, ನುಡಿದಂತೆ ನಡೆಯುವ ಅದೇ ಹೃದಯ ವೈಶಾಲ್ಯತೆ ಇವರಲ್ಲಿಯೂ ಇದೆ… ಹೀಗಾಗಿ, ಅಭಿಮಾನಿಗಳ ‘ದಾದಾ’ ನಮ್ಮ ಜೊತೆಯೇ ಇದ್ದಾರೆ. ಸಾಧನೆಯ ಮೇರು ಪರ್ವತವಾದ, ನಮ್ಮೆಲ್ಲರ ಸ್ಪೂರ್ತಿ, ಮಮತಾಮಯಿ, ಪದ್ಮಶ್ರೀ ಡಾ. ಭಾರತಿ ವಿಷ್ಣುವರ್ಧನ ಅವರಿಂದ ಮುಕ್ತ ಕಂಠದ ಪ್ರಶಂಸೆ ಪಡೆಯುವುದೆಂದರೆ, ಬದುಕು ಧನ್ಯವಾದಂತೆಯೇ.., ತಮ್ಮಲ್ಲಿನ ಶ್ರೇಷ್ಠ ಗುಣಗಳು ಮತ್ತು

ವಿಶಿಷ್ಟ ವ್ಯಕ್ತಿತ್ವದಿಂದ, ಈ ಧನ್ಯತೆಯನ್ನು ಪಡೆದ ಮಹಾ ಅದೃಷ್ಟಶಾಲಿಯಾಗಿದ್ದಾರೆ ನಮ್ಮ ಅನಿರುದ್ಧ್. ಚೈತನ್ಯದ ಚಿಲುಮೆಯಾದ ತಮ್ಮ ಶ್ರೀಮತಿ ಕೀರ್ತಿ ಅವರಿಗೆ ತಮ್ಮ ಬದುಕಿನಲ್ಲಿ ಸರ್ವ ಶ್ರೇಷ್ಠ ಸ್ಥಾನ ನೀಡಿ ಗೌರವಿಸುವ ರೀತಿಯಾಗಲಿ, ಮುದ್ದು ಮಕ್ಕಳಾದ ಜ್ಯೇಷ್ಠ ಮತ್ತು ಶ್ಲೋಕ ಅವರಿಗೆ ತೋರುವ ಪರಿಶುದ್ಧ ಪ್ರೀತಿಯಾಗಲಿ, ತಮ್ಮ ತಂದೆ, ತಾಯಿಯಲ್ಲಿನ ಪೂಜ್ಯ ಭಾವನೆ, ಅನಿರುದ್ಧ್ ಅವರಲ್ಲಿನ ವ್ಯಕ್ತಿತ್ವದ ಶ್ರೇಷ್ಟತೆಯನ್ನು ಬಿಂಬಿಸುತ್ತೆ, ಜೊತೆಗೆ ಇವರ ಕೌಟುಂಬಿಕ ಬದುಕಿನ ಘನತೆಯನ್ನೂ ಸಾರುತ್ತೆ. ಸಾಮಾನ್ಯವಾಗಿ ಗೆದ್ದ ಕೂಡಲೇ, ಕೆಲವು ನಟರಿಗೆ ಯಶಸ್ಸಿನ ಮದವೇರುತ್ತೆ, ಭೂಮಿ ಮೇಲೆಯೇ ನಿಲ್ಲಲಾಗದಷ್ಟು ಅಹಮಿಕೆ ತಾಂಡವವಾಡುತ್ತೆ. ಆದರೆ, ‘ಜೊತೆ ಜೊತೆಯಲಿ’ ತಂದ ಅದ್ಭುತ ಯಶಸ್ಸಿನ ನಂತರ ಅನಿರುದ್ಧ್ ಅವರು ನಡೆದುಕೊಂಡ ರೀತಿಯೇ ಬೇರೆ.

ಈ ಗೆಲುವನ್ನು ತಂದುಕೊಟ್ಟ ಪ್ರತಿ ಹೃದಯಕ್ಕೂ, ಅದೇ ಗೆಲುವನ್ನು ಪ್ರೀತಿಯಿಂದ ಹಂಚುತ್ತಾ, ಇದು ನಿಮ್ಮದೇ ಗೆಲುವೆಂದು ಅತ್ಯಂತ ವಿನಮ್ರತೆಯಿಂದ ಅಭಿನಂದಿಸಿದ್ದಾರೆ, ಕೃತಜ್ಞತೆಗಳನ್ನು ಸಮರ್ಪಿಸಿದ್ದಾರೆ. ಪ್ರೀತಿ ತೋರಿದ ಕೋಟಿ ಹೃದಯಗಳಿಗೆ, ಪ್ರತಿಯಾಗಿ ಪ್ರೀತಿಯ ತಂಪೆರೆದಿದ್ದಾರೆ. ಭಾವನೆಗಳ ಮೂಲಕ ಹೊಸ ಪ್ರಪಂಚವನ್ನೇ ಪರಿಚಯಿಸಿದ್ದಾರೆ. ಈ ಮೂಲಕ ಗೆಲುವೆಂಬ ಅರ್ಥಕ್ಕೆ ಒಂದು ಹೊಸ ವ್ಯಾಖ್ಯಾನ ಬರೆದಿದ್ದಾರೆ.

ಇಷ್ಟೇ ಅಲ್ಲ., ಇವೆಲ್ಲದರ ಜೊತೆ ಜೊತೆಗೆ, ‘ಅಭಿಮಾನ’ ಎಂಬ ಮಹಾ ಮಂತ್ರವನ್ನು ಬಳಸಿ, ಸಾಮಾಜಿಕ ಜಾಗೃತಿಯ ಹೊಸ ‘ಅಭಿಯಾನ’ವನ್ನೇ ಸೃಷ್ಟಿಸಿದ್ದಾರೆ ಅನಿರುದ್ಧ್.

ವಿಶ್ವದ ಬೇರೆ ಬೇರೆ ಭಾಗಗಳಲ್ಲಿದ್ದ ಅಭಿಮಾನಿ ಬಂಧುಗಳನ್ನು ಒಟ್ಟುಗೂಡಿಸುತ್ತಾ, ಅವರ ಸಂಸ್ಕಾರ, ಅವರ ನೆಲದ ಹಿರಿಮೆ, ಸಸ್ಯಕಾಶಿಯ ಅರಿವು, ಬಡ ಮಕ್ಕಳಿಗೆ ನೋಟ್ ಬುಕ್ ರೂಪದಲ್ಲಿ ನೆರವಿನ ಹಸ್ತ ನೀಡಲು ಪ್ರೇರೇಪಣೆ ನೀಡಿ, ವಿವಿಧ ಸ್ತರಗಳ ಸಮಾನ ಮನಸ್ಕರಿಗೆ ಒಂದು ಬೃಹತ್ ವೇದಿಕೆಯನ್ನು ಕಲ್ಪಿಸಿಕೊಡುವ ಮೂಲಕ, ಸದ್ದಿಲ್ಲದೆ ಒಂದು ಮೌನ ಕ್ರಾಂತಿಯನ್ನೇ ಮಾಡಿದ್ದಾರೆ ನಮ್ಮ ನಲ್ಮೆಯ ಯುವಕೇಸರಿ ಅನಿರುದ್ಧ್..

ಈ ಎಲ್ಲಾ ವಿಶೇಷ ಕಾರಣಕ್ಕಾಗಿಯೇ, ಅನಿರುದ್ಧ್ ಅವರ ಹೋರಾಟದ ಮನೋಭಾವ ಮತ್ತು ಕ್ರಾಂತಿಕಾರಿ ಗುಣಗಳನ್ನು ನಿಮಗೆ ಪರಿಚಯಿಸುವ ಆಸೆಯಾಗಿದ್ದು. ಅನಿರುದ್ಧ್ ಅವರ ಸಿನಿಮಾ ಬದುಕಿನ ಇಪ್ಪತ್ತು ವರ್ಷಗಳನ್ನು ಹತ್ತಿರದಿಂದ ನೋಡುವ ಸದಾವಕಾಶ ದೊರೆತದ್ದು, ಅವರ ಅಭಿನಯದಲ್ಲಿ ‘ಗುಡ್ ಲಕ್’ ಎಂಬ ಚಿತ್ರವನ್ನು ನಿರ್ದೇಶಿಸುವಂತಾಗಿದ್ದು, ಸುಯೋಗವೆಂದೇ ಹೇಳಬಹುದು.

ಅನಿರುದ್ಧ್ ಅವರ ಬದುಕಿನ ಪಯಣದಲ್ಲಿ ನಾವೂ ಇದ್ದೇವೆ ಎಂಬುದೇ ಖುಷಿಯ ವಿಷಯ, ಹೆಮ್ಮೆಯ ವಿಷಯ. ಅನಿರುದ್ಧ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಇದು ಹೃದಯದ ಮಾತುಗಳು -ನಂದಕುಮಾರ್

Advertisement
Advertisement

About admin

Check Also

ರಾಜಕೀಯ ಎಂಟ್ರಿ ಬಗ್ಗೆ ಬಾಲಿವುಡ್ ನಟ ಸೋನು ಸೂದ್ ಹೇಳಿದ್ದೇನು ಗೊತ್ತೆ?

Advertisement ಕೊರೊನಾ ಮೊದಲನೇ ಅಲೆ ಆರ್ಭಟ, ಲಾಕ್ ಡೌನ್ ಸಂಕಷ್ಟದಿಂದ ಹಿಡಿದೂ ಕೋವಿಡ್ ಎರಡನೇ ಅಲೆಯಲ್ಲಿಯೂ ತತ್ತರಿಸಿರುವ ಹಲವರಿಗೆ ಬಾಲಿವುಡ್ …

Leave a Reply

Your email address will not be published.

Recent Comments

No comments to show.