ಸಧ್ಯ ಸ್ಯಾಂಡಲ್ವುಡ್ ನ ಟ್ರೆಂಡಿಗ್ ಜೋಡಿಯಾಗಿರುವ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ವಿಚಾರ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ.. ಮೊನ್ನೆ ಮೊನ್ನೆಯಷ್ಟೇ ರೇವತಿ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದ ನಿಖಿಲ್ ಅವರು ಅದೇ ದಿನ ಅಪ್ಪಂದಿರ ದಿನವಿದ್ದ ಕಾರಣ ರೇವತಿ ಅವರಿಗೆ ಸರ್ಪ್ರೈಸ್ ಆಗಿ ಅವರ ಕುಟುಂಬದವರನ್ನು ಕರೆಸಿ ಹುಟ್ಟುಹಬ್ಬ ಆಚರಣೆ ಮಾಡಿದ್ದರು..
ಲಾಕ್ ಡೌನ್ ಇದ್ದ ಕಾರಣ ಅದ್ಧೂರಿಯಾಗಿ ನಡೆಯಬೇಕಿದ್ದ ದೊಡ್ಡ ಗೌಡರ ಮೊಮ್ಮಗನ ಕಲ್ಯಾಣ ಸರಳವಾಗಿ ರಾಮನಗರ ಬಳಿಯ ತಮ್ಮ ತೋಟದ ಮನೆಯಲ್ಲಿ ಸರಳವಾಗಿ ನಡೆಯುವಂತಾಯಿತು.. ಮದುವೆಗೆ ಖರ್ಚು ಮಾಡಬೇಕೆಂದಿದ್ದ ಹಣದಲ್ಲಿ ಲಾಕ್ ಡೌನ್ ಸಮಯದಲ್ಲಿ ಆಹಾರ ಕಿಟ್ ಗಳನ್ನು ವಿತರಿಸಲಾಯಿತು..
ಇನ್ನು ಹೊರ ದೇಶವಿರಲಿ ಹೊರ ರಾಜ್ಯಗಳಿಗೂ ಸಹ ನವ ಜೋಡಿ ಹೋಗದಂತಾಯಿತು.. ಲಾಕ್ ಡೌನ್ ಸಡಿಲಗೊಂಡ ಬಳಿಕ ಮಡಿಕೇರಿಗೆ ಕುಟುಂಬ ಸಮೇತ ಪ್ರವಾಸ ಕೈಗೊಂಡಿದ್ದು ಮರಳಿ ಬೆಂಗಳೂರಿನಲ್ಲಿ ಸರಳವಾಗಿ ಪತ್ನಿಯ ಹುಟ್ಟು ಹಬ್ಬ ಆಚರಣೆ ಮಾಡಿದ್ದರು ನಿಖಿಲ್ ಅವರು..
ಆದರೀಗ ಪತಿಗೆ ರೇವತಿ ಅವರು ವಿಶೇಷ ಉಡುಗೊರೆಯೊಂದನ್ನು ನೀಡಿದ್ದು ನಿಖಿಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.. ಹೌದು ಅರ್ಥಪೂರ್ಣ ಸಾಲುಗಳನ್ನೊಂದಿರುವ ಟೀ ಶರ್ಟ್ ಅನ್ನು ಪತಿಗೆ ಉಡುಗೊರೆ ನೀಡಿದ್ದಾರೆ..
ನಿಖಿಲ್ ಹಾಗೂ ರೇವತಿ ಅವರು ಇಬ್ಬರೂ ಸಹ ಒಂದೇ ರೀತಿಯ ಟೀ ಶರ್ಟ್ ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.. ಇನ್ನು “ಒಳ್ಳೆಯ ವಿಚಾರಗಳ ಬಗ್ಗೆ ಮಾತ್ರವಷ್ಟೇ ಗಮನ ನೀಡಿ.. ಮಿಕ್ಕಿದ್ದೆಲ್ಲವನ್ನು ಮರೆತುಬಿಡಿ” ಎಂಬ ಅರ್ಥಪೂರ್ಣ ಬರಹ ಇರುವ ಟೀ ಶರ್ಟ್ ಅದಾಗಿದ್ದು ಪತಿಗೆ ಸ್ಪೂರ್ತಿ ತುಂಬುವ ಉಡುಗೊರೆ ನೀಡಿದ್ದಾರೆ..