ರಶ್ಮಿಕಾ ಮಂದಣ್ಣ ತೆಲುಗಿನ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿ ಮಿಂಚುತ್ತಿರುವ ನಮ್ಮ ಕಿರಿಕ್ ಹುಡುಗಿ ಸದ್ಯ ಯಾವುದೇ ಸಿನಿಮಾ ಶೂಟಿಂಗ್ ಇಲ್ಲದ ಕಾರಣ ಹುಟ್ಟೂರು ವಿರಾಜಪೇಟೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.. ಇನ್ನು ತಮ್ಮದೇ ಆದ ಅನೇಕ ಉದ್ಯಮ ಹಾಗೂ ಎಸ್ಟೇಟ್ ಹೊಂದಿರುವ ರಶ್ಮಿಕಾ ಅವರು ತಂದೆಯ ಬ್ಯುಸಿನೆಸ್ ನೋಡಿಕೊಳ್ಳುವುದಾಗಿ ಕೆಲ ದಿನಗಳ ಹಿಂದಷ್ಟೇ ತಿಳಿಸಿದ್ದರು..
ಇದೀಗ ತಮ್ಮ ತೋಟದಿಂದ ತೆಲುಗಿನ ಮಹೇಶ್ ಬಾಬು ಅವರ ಕುಟುಂಬಕ್ಕೆ ಉಡುಗೊರೆಯೊಂದನ್ನು ಕಳುಹಿಸಿಕೊಟ್ಟಿದ್ದಾರೆ.. ಹೌದು ಸರಿಲೇರು ನಿಕ್ಕೆವರು ಸಿನಿಮಾದ ಬಳಿಕ ಮಹೇಶ್ ಬಾಬು ಕುಟುಂಬ ಹಾಗೂ ರಶ್ಮಿಕಾ ಮಂದಣ್ಣ ಬಹಳ ಆತ್ಮೀಯರಾಗಿದ್ದರು.. ಅದೇ ಕಾರಣಕ್ಕಾಗಿ ಇದೀಗ ಕೊಡಗಿನಿಂದ ಕೊಡಗಿನ ಸ್ಪೆಷಲ್ ಆದ ಕೆಲವು ವಸ್ತುಗಳನ್ನು ಕಳುಹಿಸಿಕೊಟ್ಟಿದ್ದಾರೆ.. ಹೌದು ತಮ್ಮದೇ ತೋಟದ ಮಾವಿನ ಕಾಯಿ, ಬಟರ್ ಫ್ರೂಟ್, ಮಾವಿನ ಕಾಯಿಯ ಉಪ್ಪಿನಕಾಯಿ ಹಾಗೂ ಕೂರ್ಗ್ ಸ್ಪೆಷಲ್ ಹೋಮ್ ಮೇಡ್ ವೈನ್ ಅನ್ನು ಕಳುಹಿಸಿಕೊಟ್ಟಿದ್ದಾರೆ..
ಅತ್ತ ಉಡುಗೊರೆ ಸ್ವೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಹೇಶ್ ಬಾಬು ಅವರ ಪತ್ನಿ ನಮ್ರತಾ “ಈ ಎಲ್ಲಾ ರುಚಿಕರವಾದ ತಿನಿಸುಗಳನ್ನು ಕಳುಹಿಸಿಕೊಟ್ಟ ರಶ್ಮಿಕಾಗೆ ಧನ್ಯವಾದಗಳು. ಇದೆಲ್ಲ ಕೂರ್ಗ್ನಿಂದ ಬಂದಿದೆ. ಕೊರೊನಾ ಸಮಯದಲ್ಲಿ ನಮ್ಮ ಮನೆಗೆ ಮೊದಲ ಉಡುಗೊರೆ ಇದಾಗಿದೆ. ಹ್ಯಾಪಿ ಮಾನ್ಸೂನ್” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ..
ಸದ್ಯ ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವ ರಶ್ಮಿಕಾ ಮಂದಣ್ಣ ಸಿನಿಮಾದ ಶೂಟಿಂಗ್ ಆರಂಭವಾದ ಬಳಿಕ ಹೈದರಾಬಾದ್ ಗೆ ತೆರಳಲಿದ್ದಾರೆ.. ಅಲ್ಲಿಯವರೆಗೂ ತಮ್ಮ ತೋಟದ ಕೆಲಸಗಳಲ್ಲಿ ತೊಡಗಿಕೊಂಡಿದ್ದು ಅಭಿಮಾನಿಗಳ ಜೊತೆ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ..