ಇಷ್ಟು ವರ್ಷಗಳು ಸಾಮಾನ್ಯವಾಗಿ ಸುದ್ದಿ ಮಾಡುವಾಗ ಸ್ಯಾಂಡಲ್ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳ ಬಿಡುಗಡೆ ಎಂದು ಸುದ್ದಿ ಮಾಡುತ್ತಿದ್ದೆವು.. ಆದರೆ ಈ ವರ್ಷ ಸಾಲು ಸಾಲು ಸಾವುಗಳೆಂಬ ಸುದ್ದಿ ನಿಜಕ್ಕೂ ಈ ವರ್ಷ ಅದೆಂತಹ ಕೆಟ್ಟ ವರ್ಷವೆಂಬುದನ್ನು ತೋರುತ್ತಿದೆ.. ಅತ್ತ ಕೊರೊನಾ ಸಂಕಷ್ಟ ಇತ್ತ ಚಿತ್ರರಂಗದಲ್ಲಿ ಅದರಲ್ಲೂ ನಮ್ಮ ಸ್ಯಾಂಡಲ್ವುಡ್ ನಲ್ಲಿ ಅನೇಕರನ್ನು ಕಳೆದುಕೊಳ್ಳುತ್ತಿದ್ದೇವೆ..
ಭೂಮಿ ಮೇಲೆ ಯಾರೂ ಊಹಿಸದ ಕೊರೊನಾ ವೈರಸ್ ನಿಂದಾಗಿ ಜನ ಜೀವನ ನೋವು ಅನುಭವಿಸುತ್ತಿದೆ.. ಇತ್ತ ನಮ್ಮ ಚಿತ್ರರಂಗದಲ್ಲಿ ಸಾಲು ಸಾಲು ಕಲಾವಿದರು ಇಲ್ಲವಾಗುತ್ತಿದ್ದಾರೆ.. ಮೊನ್ನೆ ಮೊನ್ನೆಯಷ್ಟೇ ನಟ ಚಿರಂಜೀವಿ ಸರ್ಜಾ ಅತಿ ಚಿಕ್ಕವಯಸ್ಸಿಗೆ ಹೃದಯಾಘಾತದಿಂದ ಮೃತ ಪಟ್ಟ ನೋವು ಇನ್ನೂ ಮಾಸುವ ಮುನ್ನವೇ ಮೊನ್ನೆ ಹಿರಿಯ ಹಾಸ್ಯ ನಟ ಮಿಮಿಕ್ರಿ ರಾಜ ಗೋಪಾಲ್ ಅವರು ಇಹಲೋಕ ತ್ಯಜಿಸಿದ್ದರು.. ನಿನ್ನೆ ಖ್ಯಾತ ಕಲಾ ನಿರ್ದೇಶಕ ಬೆಲ್ ಬಾಟಮ್ ಅವನೇ ಶ್ರೀಮನ್ನಾರಯಣ ಸಿನಿಮಾದ ಕಲಾ ನಿರ್ದೇಶಕ ಲೋಕೇಶ್ ಸಹ ಆರ್ಥಿಕ ಸಂಕಷ್ಟ ದಿಂದ ಜೀವ ಕಳೆದುಕೊಂಡಿದ್ದರು.. ಇದೀಗ ಸ್ಯಾಂಡಲ್ವುಡ್ ನ ನಿರ್ಮಾಪಕರೊಬ್ಬರು ಇಹಲೋಕ ತ್ಯಜಿಸಿದ್ದಾರೆ..
ಹೌದು ವಿನಯ್ ರಾಜ್ ಕುಮಾರ್ ಅವರ ಗ್ರಾಮಾಯಣ ಸಿನಿಮಾ ನಿರ್ಮಾಪಕರಾದ ಎನ್ ಎಲ್ ಎನ್ ಮೂರ್ತಿ ಅವರು ನಿನ್ನೆ ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ.. ಕೇವಲ 39 ವರ್ಷ ವಯಸ್ಸಾಗಿತ್ತು ಅಷ್ಟೇ.. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ..
ಮೂರ್ತಿ ಅವರಿಗೆ ಪತ್ನಿ, ಒರ್ವ ಮಗ, ಒರ್ವ ಮಗಳು ಇದ್ದು ಕುಟುಂಬದ ನೋವು ಹೇಳಲಸಾಧ್ಯ.. ದುರ್ವಿಧಿ ಎಂದರೆ ಗುರುವಾರವಷ್ಟೇ ಮೂರ್ತಿ ಅವರ ತಾಯಿ ನಿಧನರಾಗಿದ್ದರು.. ಇದೀಗ ಮೂರ್ತಿ ಅವರೂ ಸಹ ಕೊನೆಯುಸಿರೆಳೆದಿದ್ದಾರೆ.. ಈ ಕುರಿತು ಮಾತನಾಡಿರುವ ವಿನಯ್ ರಾಜ್ ಕುಮಾರ್ ಅವರು “ಬಹಳಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡಬೇಕೆಂದು ಕನಸುಕಂಡಿದ್ದ ಜೆಂಟಲ್ಮನ್ ನಿರ್ಮಾಪಕ ಅವರು.. ಅವರ ಸಾವು ಬಹಳ ದುಃಖ ತಂದಿದೆ” ಎಂದು ಸಂತಾಪ ಸೂಚಿಸಿದ್ದಾರೆ..
ಬಹಳಷ್ಟು ಕನಸು ಹೊತ್ತು ಸ್ಯಾಂಡಲ್ವುಡ್ ಪ್ರವೇಶ ಪಡೆದಿದ್ದ ಮೂರ್ತಿ ಅವರು ತಮ್ಮ ಮೊದಲನೆ ಸಿನಿಮಾ ಬಿಡುಗಡೆ ಆಗುವ ಮೊದಲೇ ಇಲ್ಲವಾಗಿಬಿಟ್ಟರು.. ಗ್ರಾಮಾಯಣ ಸಿನಿಮಾದ ಕೆಲ ಭಾಗದ ಶೂಟಿಂಗ್ ಬಾಕಿ ಇತ್ತು.. ಲಾಕ್ ಡೌನ್ ಬಳಿಕ ಚಿತ್ರೀಕರಣ ಮಾಡಬೇಕೆಂಬ ಪ್ಲಾನ್ ಮಾಡಲಾಗಿತ್ತು.. ಇತ್ತೀಚೆಗೆ ಹೊಸ ಮನೆ ಯನ್ನೂ ಸಹ ಕಟ್ಟಿಸಿದ್ದರು, ಗೃಹ ಪ್ರವೇಶ ಮಾಡಲು ಸಿದ್ಧತೆ ನಡೆಸಿದ್ದರು.. ಆದರೆ ಆ ವಿಧಿಯ ನಿರ್ಣಯವೇ ಬೇರೆ ಇತ್ತು.. ಮೂರ್ತಿ ಅವರ ಸಾವಿಗೆ ಚಿತ್ರರಂಗದ ಆಪ್ತರು ಕಂಬನಿ ಮಿಡಿದಿದ್ದು ಸಂತಾಪ ಸೂಚಿಸಿದ್ದಾರೆ..