Breaking News

ಬೆಳಿಗ್ಗೆ 5 ಗಂಟೆಗೆ ಮುನ್ನ ಎದ್ದರೆ ಏನಾಗುತ್ತದೆ ಗೊತ್ತಾ? ಆಶ್ಚರ್ಯ ಪಡುವಿರಿ..

Advertisement

ನಾವು ಮುಂಜಾನೆ ಎದ್ದಾಗಿನಿಂದ ಮಲಗುವವರೆಗೆ ಪ್ರತಿಯೊಂದು ವಿಷಯಕ್ಕೂ ಹೇಗೆ ವೈಜ್ಞಾನಿಕ ಹಿನ್ನೆಲೆಗಳಿರುತ್ತವೆಯೋ ಹಾಗೆ ದೈವಿಕ ಕಾರಣಗಳೂ ಕೂಡ ಸಾಕಷ್ಟಿರುತ್ತವೆ. ಹಾಗಾಗಿಯೇ ಮೊದಲಿನಿಂದಲೂ ಜನರು ತಾವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಒಳಿತು ಕೆಡಕುಗಳನ್ನು ಲೆಕ್ಕ ಹಾಕುತ್ತಾರೆ ಆ ಪ್ರಕಾರವಾಗಿಯೇ ತಮ್ಮ ಜೀವನ ಶೈಲಿಯನ್ನು ರೂಪಿಸಿಕೊಂಡಿರುತ್ತಾರೆ.

ಆದರೆ ಆಧುನಿಕ ಯುಗದಲ್ಲಿ ನಾವು ಮಾಡುವ ಕೆಲಸದಲ್ಲಿ ದೈವಿಕ ಅಂಶಗಳನ್ನು ಯಾರೂ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಎಷ್ಟೋ ಸಲ ಇದು ಅಪಶಕುನ ಎಂದು ಹಿರಿಯರು ಹೇಳಿದರೂ ಅದನ್ನು ನಿರ್ಲಕ್ಷಿಸಿ ನಾವು ಮುನ್ನಡೆಯುತ್ತೇವೆ, ಆಗ ಸಾಕಷ್ಟು ಬಾರಿ ಅಪಾಯಗಳನ್ನು ಎದುರಿಸಬೇಕಾದ ಸ್ಥಿತಿಯೂ ನಿರ್ಮಾಣವಾಗಿರುತ್ತದೆ.

Advertisement

ಚಾಣಾಕ್ಯ ರಚಿತ ’ಚಾಣಾಕ್ಯ ನೀತಿಯಲ್ಲೂ ಕೂಡ ನೀವು ಇಂಥ ಸಾಕಷ್ಟು ವಿಷಯಗಳನ್ನು ಕಾಣಬಹುದು. ಬೆಳಿಗ್ಗೆ ಸೂರ್ಯೋದಯಕ್ಕೂ ಮೊದಲು ಏಳುವುದು ಸಾಮಾನ್ಯವಾಗಿ ತುಂಬಾ ಜನರ ವಾಡಿಕೆಯಾಗಿರುತ್ತದೆ. ಅಂದರೆ ಮುಂಜಾನೆ ಸುಮಾರು ಆರರಿಂದ ಆರುವರೆ ಗಂಟೆ ಸಮಯದಲ್ಲಿ ಎದ್ದು ನಿತ್ಯಕರ್ಮಗಳನ್ನು ಮಾಡುವುದು. ಅದರಲ್ಳೂ ಹೆಣ್ಣುಮಕ್ಕಳು ಎದ್ದು ಮನೆಮುಂದೆ ರಂಗೋಲಿ ಹಾಕುವುದು ಸಾಕಷ್ಟು ಶ್ರೇಷ್ಥ ಎಂದು ಹೇಳಲಾಗುತ್ತದೆ.

ಆದರೆ ನಾವಿಲ್ಲಿ ಇನ್ನೂ ಒಂದು ಅತ್ಯಂತ ವಿಶೇಷವಾದ ವಿಷಯವೊಂದನ್ನು ಹೇಳುತ್ತೇವೆ!
ಬೆಳಿಗ್ಗೆ ಏಳುವುದು ಸಹಜ. ಆದರೆ ಸುಮಾರು 3 ರಿಂದ 5 ಗಂಟೆಯ ಅವಧಿಯಲ್ಲಿ ನಿಮಗೇನಾದರೂ ಎಚ್ಚರವಾಗುತ್ತಿದೆಯೇ? ಹಾಗದರೆ ನಿಮಗೆ ಹೀಗೆ ಎಚ್ಚರವಾಗುವುದಕ್ಕೆ ಒಂದು ವಿಶೇಷವಾದ ಕಾರಣವಿದೆ. ರಾತ್ರಿ ಮಲಗಿದಾಗ ಕನಸುಗಳು ಬೀಳುವುದು ಸಹಜ. ಅದು ಕೆಟ್ಟ ಕನಸಾಗಿರಬಹುದು ಅಥವಾ ಒಳ್ಳೆಯ ಕನಸೂ ಆಗಿರಬಹುದು. ಸಾಕಷ್ಟು ಜನರಿಗೆ ಅವರ ಕನಸುಗಳು ನನಸಾಗಿರುವ ಉದಾಹರಣೆಗಳೂ ಇವೆ! ಹಾಗೆಯೇ ಪ್ರತಿಯೊಂದು ಕನಸಿನ ಹಿಂದೆ ನಮ್ಮ ಸುಪ್ತ ಮನಸ್ಸಿನ ಆಲೋಚನೆಗಳು ಅಡಗಿರುತ್ತವೆ ಜೊತೆಗೆ ಆ ಕನಸುಗಳಿಗೆ ಅದರದ್ದೇ ಆದ ಅರ್ಥವಿರುತ್ತದೆ ಎಂದೂ ಹೇಳಲಾಗುತ್ತದೆ.

Advertisement

ಹಾಗೆಯೇ ನಿಮಗೆ 3 – 5 ಗಂಟೆಯ ನಡುವೆ ಎಚ್ಚರವಾದರೆ ಅದಕ್ಕೊಂದು ಮುಖ್ಯ ಕಾರಣ ಅಲೌಕಿಕ ಶಕ್ತಿಗಳ ಪ್ರಭಾವ!
ಅಲೌಕಿಕ ಶಕ್ತಿ ಅಥವಾ ಕಣ್ಣಿಗೆ ಕಾಣದ ದಿವ್ಯ ಶಕ್ತಿಯೊಂದು ನಿಮ್ಮ ಸಂತೋಷವನ್ನು ಕಾಣಲು ನಿಮ್ಮನ್ನು ಎಬ್ಬಿಸುತ್ತವೆ ಎಂದು ಹೇಳಲಾಗುತ್ತದೆ. ಅಂತಹ ಶಕ್ತಿಗೆ ನೀವು ಪ್ರಿಯರಾಗಿದ್ದರೆ ಅದು ನಿಮ್ಮನ್ನು ನೋಡಲು, ನಿಮ್ಮನ್ನು ಖುಷಿಯಾಗಿಡಲು ಆ ಸಮಯದಲ್ಲಿ ನಿಮ್ಮೊಂದಿಗೆ ಇರುತ್ತದೆಯಂತೆ..

ಹಾಗಾಗಿ ಈ ಸಮಯದಲ್ಲಿ ಎಚ್ಚರವಾದರೆ ಅಯ್ಯೋ ನನಗೆನೋ ಖಾಯಿಲೆ, ಚೆನ್ನಾಗಿ ನಿದ್ದೆ ಮಾಡುವ ಸಮಯದಲ್ಲಿ ಎಚ್ಚರವಾಗುತ್ತದೆ ಎಂದು ನೀವು ಕೊರಗುವ ಅಗತ್ಯವಿಲ್ಲ 3 -5 ಗಂಟೆಯ ಅವಧಿಯಲ್ಲಿ ಕಣ್ತೆರೆದರೆ ಮನೆಯಲ್ಲಿ ಸಂಪತ್ತು ಕೂಡುತ್ತದೆ ಎಂಬ ನಂಬಿಕೆಯೂ ಇದೆ. ಹಾಗಾಗಿ ನಿಮ್ಮ ಮುಂದಿನ ದಿನಗಳು ಸಂತೋಷವಾಗಿರಲು ಈ ಸಮಯದಲ್ಲಿ ಎಚ್ಚರವಾದಲ್ಲಿ ಚಿಂತಿಸುವ ಅಗತ್ಯವಿಲ್ಲ..

Advertisement
Advertisement
Advertisement

About admin

Check Also

ರಾಜಕೀಯ ಎಂಟ್ರಿ ಬಗ್ಗೆ ಬಾಲಿವುಡ್ ನಟ ಸೋನು ಸೂದ್ ಹೇಳಿದ್ದೇನು ಗೊತ್ತೆ?

Advertisement ಕೊರೊನಾ ಮೊದಲನೇ ಅಲೆ ಆರ್ಭಟ, ಲಾಕ್ ಡೌನ್ ಸಂಕಷ್ಟದಿಂದ ಹಿಡಿದೂ ಕೋವಿಡ್ ಎರಡನೇ ಅಲೆಯಲ್ಲಿಯೂ ತತ್ತರಿಸಿರುವ ಹಲವರಿಗೆ ಬಾಲಿವುಡ್ …

Leave a Reply

Your email address will not be published.

Recent Comments

No comments to show.