ಚಿರು ಸರ್ಜಾ ಇಲ್ಲವಾದ ನಂತರ ಮೇಘನಾ ಅವರು ಹಾಗೂ ಆ ಕುಟುಂಬ ನೋವಿನಿಂದ ಚೇತರಿಸಿಕೊಳ್ಳಲಾಗದಿದ್ದರೂ ಇದೇ ಜೀವನಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಇದೆ.. ಇಂತಹ ಸಮಯದಲ್ಲಿ ಅವರಿಗೆ ಸಾಣ್ತ್ವಾನದ ಅಗತ್ಯವಿದೆ.. ಆ ಸಾಂತ್ವಾನ ಕೆಲ ಕ್ಷಣಕ್ಕೆ ಮಾತ್ರ ನೋವು ಮರೆಸಬಲ್ಲದು ಎಂದು ಎಲ್ಲರಿಗೂ ತಿಳಿದೇ ಇದೆ.. ಈ ಸಮಯದಲ್ಲಿ ತಮ್ಮಿಂದ ತಾವೇ ಗಟ್ಟಿಯಾಗಬೇಕು.. ದೇವರು ಆ ಗಟ್ಟಿ ಮನಸ್ಸು ನೀಡಲಿ ಆ ಕುಟುಂಬಕ್ಕೆ.. ಭವಿಷ್ಯದಲ್ಲಿ ಬರುವ ಕಂದನ ಜೀವನ ರೂಪಿಸುವ ಆ ಮಗುವಿನಲ್ಲಿ ಚಿರುವನ್ನು ಕಾಣುವ ಭರವಸೆ ವ್ಯಕ್ತ ಪಡಿಸಿದ್ದರು ಮೇಘನಾ.. ಆ ಕಂದನ ನಗುವಿನಲ್ಲಿ ಚಿರುವನ್ನು ಕಾಣುವೆ ಎಂದು ಪೋಸ್ಟ್ ಮಾಡಿದ್ದರು.. ಆದಷ್ಟು ಬೇಗ ಅವರಂದುಕೊಂಡಂತೆ ಆಗಲಿ ಆ ಕುಟುಂಬದ ನೋವು ಆದಷ್ಟು ಬೇಗ ಕಡಿಮೆಯಾಗುವಂತಾಗಲಿ ಎಂಬುದೇ ಪ್ರತಿಯೊಬ್ಬರ ಹಾರೈಕೆ..
ಆದರೆ ದಯವಿಟ್ಟು ಮೇಘನಾರ ಮನೆಗೆ ಹೋದವರು ಅವರ ಬಳಿ ಈ ಕೆಲಸ ಮಾಡಿಸಬೇಡಿ.. ಹೌದು ಮೇಘನಾರಿಗೆ ಸಾಂತ್ವಾನ ಹೇಳಲು ಹೋದವರು ದಯವಿಟ್ಟು ಸೆಲ್ಫಿಗೆ ನಿಂತುಕೊಳ್ಳಿ ಎಂದು ಕೇಳಬೇಡಿ.. ಅದ್ಯಾವ ಮನಸ್ಸಿನಿಂದ ಬನ್ನಿ ಫೋಟೋಗೆ ನಿಂತುಕೊಳ್ಳಿ ಎನ್ನುವಿರಿ.. ಅದ್ಯಾವ ಮುಖ ಇಟ್ಟುಕೊಂಡು ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವಿರಿ..
ಆ ಹೆಣ್ಣು ತನ್ನ ಸರ್ವಸ್ವವೆಂದು ಕೊಂಡಿದ್ದ ಜೀವವನ್ನು ಕಳೆದುಕೊಂಡಿದ್ದಾರೆ.. ಸಾಕಷ್ಟು ನೋವಿನಲ್ಲಿರುತ್ತಾರೆ.. ಅಂತಹ ಸಮಯದಲ್ಲಿ ಸಾಂತ್ವಾನದ ಅವಶ್ಯಕತೆ ಇದೆ ನಿಜ.. ಆದರೆ ಸಾಂತ್ವಾನ ಕೊಟ್ಟು.. ಅದಕ್ಕೆ ಪ್ರತಿಯಾಗಿ ಫೋಟೋ ತೆಗೆಯುವ ಅವಶ್ಯಕತೆಯಾದರೂ ಏನಿದೆ? ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಸಲುವಾಗಿಯೋ ನಿಮ್ಮ ಸಾಂತ್ವಾನ? ಇಲ್ಲಿ ಮುಖ್ಯವಾಗಿ ಬೇಕಿರುವುದು ಅವರಿಗೆ ಧೈರ್ಯ ತುಂಬುವುದಷ್ಟೇ..
ಅವರು ಚೇತರಿಸಿಕೊಂಡು ಮತ್ತೆ ಮೊದಲಿನಂತಾಗಲಿ ಎಂಬ ಹಾರೈಕೆ.. ದಯವಿಟ್ಟು ಸಾವಿನ ಮನೆಗೆ ಹೋಗಿ ಸೆಲ್ಫಿ ಕೇಳಬೇಡಿ.. ಸಮಾಧಾನ ಮಾಡಲು ಬಂದು ಸೆಲ್ಫಿ ಕೇಳುತ್ತಿದ್ದಾರೆ ಎಂದು ಆ ಕುಟುಂಬದ ಮನಸ್ಸಿಗೆ ಅನಿಸಿ ಆ ಕುಟುಂಬ ಮತ್ತಷ್ಟು ನೋವು ಅನುಭವಿಸುವಂತೆ ಮಾಡಬೇಡಿ.. ನಿಮ್ಮ ಸಾಂತ್ವಾನವನ್ನು ಮೇಲೆಲ್ಲೋ ನಿಂತು ನೋಡುವ ಚಿರು ನನ್ನ ಕುಟುಂಬಕ್ಕೆ ಧೈರ್ಯ ಹೇಳಿದರೆಂದು ಸಂತೋಷ ಪಟ್ಟ ಮರುಕ್ಷಣವೇ ನೀವು ಸೆಲ್ಫಿಗಾಗಿ ಮೇಘನರನ್ನು ನಿಲ್ಲಿಸುವುದ ಕಂಡು ಆತನೂ ನಾನಿಲ್ಲದ ಸಮಯದಲ್ಲಿ ನನ್ನ ಗರ್ಭಿಣಿ ಹೆಂಡತಿಯ ನೋವಿನಲ್ಲಿಯೂ ಸಹ ಫೋಟೋ ಕೇಳುತ್ತಿದ್ದಾರೆ ಎಂದು ಕೊರಗುವಂತೆ ಮಾಡಬೇಡಿ.. ದಯವಿಟ್ಟು ಸಣ್ಣವರಾಗಬೇಡಿ..