ಕನ್ನಡ ಕಿರುತೆರೆಯ ಸೆನ್ಸೇಷನಲ್ ಧಾರಾವಾಹಿ ಎನಿಸಿಕೊಂಡಿರುವ ಜೊತೆಜೊತೆಯಲಿ ಧಾರಾವಾಹಿ ಕಳೆದ ಒಂದು ವರ್ಷದಿಂದಲೂ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿದ್ದು, ಕೆಲ ದಿನಗಳ ಹಿಂದಷ್ಟೇ ಒಂದು ವರ್ಷದ ಜರ್ನಿಯನ್ನು ಮುಗಿಸಿ ತನ್ನ ಯಶಸ್ವಿ ಪಯಣವನ್ನು ಮುಂದುವರೆಸುತ್ತಿದೆ.. ಇನ್ನು ಈ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ದ್ ಕಿರುತೆರೆಯ ಸೆನ್ಸೇಷನಲ್ ಹೀರೋ ಆಗಿ ಗುರುತಿಸಿಕೊಂಡರು.. ಸಿನಿಮಾಗಿಂತಲೂ ಹೆಚ್ಚಿನ ಯಶಸ್ಸನ್ನು ಧಾರಾವಾಹಿ ಮೂಲಕ ಪಡೆದುಕೊಂಡರು..
ಇನ್ನು ಮುದ್ದು ಮುಖದ ನಾಯಕಿ ಅನು ಸಿರಿಮನೆ ಕೂಡ ಮೊದಲ ಧಾರಾವಾಹಿಯಲ್ಲಿಯೇ ಯಶಸ್ಸು ಕಂಡು ಮನೆ ಮಾತಾದರು.. ಅಷ್ಟೇ ಅಲ್ಲದೇ ಸಿನಿಮಾರಂಗದಲ್ಲಿಯೂ ಅನು ಸಿರಿಮನೆ ಪಾತ್ರಧಾರಿ ಮೇಘಾ ಶೆಟ್ಟಿ ಅವರ ಹೆಸರು ಕೇಳಿಬಂತು..
ಹೌದು ಸಾಮಾನ್ಯವಾಗಿ ಸ್ಯಾಂಡಲ್ವುಡ್ ಪ್ರವೇಶ ಮಾಡುವ ಬಹಳಷ್ಟು ಹೀರೋಯಿನ್ ಗಳು ಕಿರುತೆರೆ ಮೂಲಕ ಬರುವುದು ಸಾಮಾನ್ಯ.. ಇದೀಗ ಮೇಘಾ ಶೆಟ್ಟಿ ಅವರೂ ಸಹ ಸ್ಯಾಂಡಲ್ವುಡ್ ಪ್ರವೇಶ ಮಾಡುತ್ತಿದ್ದಾರೆ.. ಹೌದು ಕನ್ನಡದ ಸ್ಟಾರ್ ನಟನ ಜೊತೆ ಅಭಿನಯಿಸಲು ಅನು ಸಿರಿಮನೆಗೆ ಅವಕಾಶ ದೊರೆತಿದೆ.. ಆ ನಟ ಮತ್ಯಾರೂ ಅಲ್ಲ ಗೋಲ್ಡನ್ ಸ್ಟಾರ್ ಗಣೇಶ್.. ಹೌದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಮುಂದಿನ ಸಿನಿಮಾದಲ್ಲಿ ಮೇಘಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು ಈ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ..
ಕನ್ನಡದ ಸ್ಟಾರ್ ನಟಿ ರಚಿತಾ ರಾಮ್ ಅವರೂ ಸಹ ಹಿಂದೆ ಅರಸಿ ಎಂಬ ಧಾರಾವಾಹಿ ಮೂಲಕ ಬಣ್ಣದ ಲೋಕ ಪ್ರವೇಶ ಮಾಡಿ ನಂತರ ದರ್ಶನ್ ಅವರ ಬುಲ್ ಬುಲ್ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಪಡೆದು ಇದೀಗ ಕನ್ನಡದ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ.. ಅದೇ ರೀತಿ ಇದೀಗ ಮೇಘಾ ಶೆಟ್ಟಿ ಅವರಿಗೂ ಸಹ ಸಿನಿಮಾದಲ್ಲಿ ಅವಕಾಶ ದೊರೆತಿದ್ದು ಮುಂದೊಂದು ದಿನ ಸ್ಯಾಂಡಲ್ವುಡ್ ಸ್ಟಾರ್ ಹೀರೋಯಿನ್ ಆಗಬಹುದು..
ಆದರೆ ಸದ್ಯ ಜೊತೆಜೊತೆಯಲಿ ಧಾರಾವಾಹಿಗೆ ತನ್ನದೇ ಆದ ದೊಡ್ಡ ಅಭಿಮಾನಿ ಬಳಗವಿದೆ.. ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಮೇಘಾ ಶೆಟ್ಟಿ ಸಿನಿಮಾ ಬಂದ ನಂತರ ಧಾರಾವಾಹಿಯನ್ನು ಬಿಡುವರೋ ಅಥವಾ ಎರಡರಲ್ಲಿಯೂ ಕಾಣಿಸಿಕೊಳ್ಳುವರೋ ಕಾದು ನೋಡಬೇಕಿದೆ..