ಕೊರೊನಾ ಕಾರಣದಿಂದಾದ ಲಾಕ್ ಡೌನ್ ನಲ್ಲಿ ಸಾಲು ಸಾಲು ಸೆಲಿಬ್ರೆಟಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಕೊರೊನಾ ಸಮಯದಲ್ಲಿ ಕನ್ನಡ ಕಿರುತೆರೆಯ ಕಲಾವಿದರ ಮನೆಗಳಲ್ಲಿ ಸರಳವಾಗಿಯಾದರು ಅನೇಕ ಸಂಭ್ರಮಾಚರಣೆ ನಡೆದಿದ್ದವು.. ಇದೀಗ ಜೋಡಿ ಹಕ್ಕಿ ಧಾರಾವಾಹಿ ನಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಮ್ಮ ಮನೆಗೆ ನೂತನ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ.. ಹೌದು ಜೋಡಿ ಹಕ್ಕಿ ಧಾರಾವಾಹಿ ಖ್ಯಾತಿಯ ನಟಿ ಮಧುಶ್ರೀ ಐಯ್ಯರ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಅವರ ಪತಿ ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ..
ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೋಡಿ ಹಕ್ಕಿ ಧಾರಾವಾಹಿ ಬಹಳಷ್ಟು ಪ್ರಖ್ಯಾತಿ ಪಡೆದಿತ್ತು.. ಧಾರಾವಾಹಿಯಲ್ಲಿ ನಟಿಸುತ್ತಿದ್ದ ಕೆಲ ಕಲಾವಿದರು ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಅದೇ ರೀತಿ ಮಧುಶ್ರೀ ಅವರು ಸಹ ತಮ್ಮ ಪಾತ್ರದ ಮೂಲಕ ಜನರ ಮನಸ್ದಿಗೆ ಹತ್ತಿರವಾಗಿದ್ದರು..
ಜಾನಕಿ ಟೀಚರ್ ನ ಸ್ನೇಹಿತೆ ಅನು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಧುಶ್ರೀ ಅವರು ಧಾರಾವಾಹಿಯ ನಂತರ 2018 ರಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಯಶ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಮೂಲತಃ ಶಿವಮೊಗ್ಗದವರಾದ ಮಧುಶ್ರೀ ಅವರು ಬಿಕಾಂ ಪದವಿ ಮುಗಿಸಿ ನಂತರ ನಟನೆಯಲ್ಲಿ ತೊಡಗಿಕೊಂಡರು.. ಜೋಡಿ ಹಕ್ಕಿ ಧಾರಾವಾಹಿಯ ಪಾತ್ರ ಹೆಸರು ತಂದುಕೊಟ್ಟಿತ್ತು.. ಕೆಲ ದಿನಗಳ ಹಿಂದಷ್ಟೇ ತಮ್ಮ ಸೀಮಂತದ ಫೋಟೋ ಹಾಕಿ ತಾಯಿಯಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದರು..
ಇದೀಗ ಮಧುಶ್ರೀ ಅವರ ಪತಿ ಯಶ್ ಅವರು ತಮಗೆ ಹೆಣ್ಣು ಮಗುವಾಗಿರುವ ವಿಚಾರವನ್ನು ತಿಳಿಸಿದ್ದು, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.. ನಿಮ್ಮೆಲ್ಲರ ಹಾರೈಕೆಗೆ ಧನ್ಯವಾದಗಳು.. ನಮ್ಮ ಜೀವನಕ್ಕೆ ಯುವರಾಣಿಯ ಆಗಮನವಾಗಿದೆ ಎಂದಿದ್ದಾರೆ..