Breaking News

ಫೋಟೋ ನೋಡಿ ಅಭಿಮಾನಿಗಳೇ ದಂಗಾದ್ರು….ಇದರಲ್ಲಿ ಯಾರು ಅಸಲಿ ಶಾರುಖ್​, ಯಾರು ನಕಲಿ….?

Advertisement

ಪ್ರಪಂಚದಲ್ಲಿ ಒಬ್ಬರಂತೆ ಏಳು ಮಂದಿ ಇರುತ್ತಾರೆ ಎಂಬ ಮಾತಿದೆ. ಪರಿಪೂರ್ಣವಾಗಿ ಅಲ್ಲದಿದ್ದರೂ ನೋಡಲು ಸ್ವಲ್ಪ ಒಂದೇ ರೀತಿ ಇರುವ ಎಷ್ಟೋ ಜನರನ್ನು ನಾವು ನೋಡುತ್ತಿರುತ್ತೇವೆ. ಸೆಲಬ್ರಿಟಿಗಳ ವಿಚಾರದಲ್ಲಿ ಕೂಡಾ ಒಬ್ಬರನ್ನು ಹೋಲುವ 7 ಮಂದಿಗೂ ಹೆಚ್ಚು ಜನರನ್ನು ನೋಡಬಹುದು ಬಿಡಿ. ಏಕೆಂದರೆ ಕೆಲವು ಅಭಿಮಾನಿಗಳು ತಮ್ಮ ಮೆಚ್ಚಿನ ನಟ-ನಟಿಯ ಲುಕ್, ಹೇರ್​​ಸ್ಟೈಲ್, ಲೈಫ್​​ಸ್ಟೈಲ್​​​​​ ಫಾಲೋ ಮಾಡಲು ಬಯಸುತ್ತಾರೆ. ನಮ್ಮ ಕನ್ನಡದಲ್ಲಿ ಕೂಡಾ ಡಾ. ರಾಜ್​ಕುಮಾರ್, ಡಾ. ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ರವಿಚಂದ್ರನ್ ಅವರನ್ನೇ ಹೋಲುವ ಎಷ್ಟೋ ಅಭಿಮಾನಿಗಳಿದ್ದಾರೆ. ಇದರಲ್ಲಿ ಕೆಲವರು ಜ್ಯೂನಿಯರ್ ರಾಜ್​ಕುಮಾರ್, ಜ್ಯೂನಿಯರ್ ವಿಷ್ಣುವರ್ಧನ್, ಜ್ಯೂನಿಯರ್ ರವಿಚಂದ್ರನ್ ಎಂದೇ ಹೆಸರಾಗಿದ್ದರು. ನಮ್ಮ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು, ತಮಿಳು, ಬಾಲಿವುಡ್​ ಸಿನಿರಂಗದಲ್ಲೂ ಇದನ್ನು ಕಾಣಬಹುದು. ಬಾಲಿವುಡ್​ ಬಾದ್​ಶಾ ಎಂದೇ ಹೆಸರಾದ ಶಾರುಖ್ ಖಾನ್ ಅವರನ್ನೇ ಹೋಲುವ ಅಭಿಮಾನಿಯೊಬ್ಬರಿದ್ದು ಶಾರುಖ್ ಹಾಗೂ ಆತನ ಡೂಪ್ಲಿಕೆಟ್​​​​ಗೆ ಸ್ವಲ್ಪವೂ ವ್ಯತ್ಯಾಸ ತಿಳಿಯುವುದಿಲ್ಲ.

Advertisement

ಶಾರುಖ್ ಅವರ ಈ ಅಭಿಮಾನಿ ಹೆಸರು ಇಬ್ರಾಹಿಂ ಖಾದ್ರಿ. ಇವರು ಶಾರುಖ್ ದೊಡ್ಡ ಅಭಿಮಾನಿ, ಅಷ್ಟೇ ಅಲ್ಲ ನೋಡಲು ಕೂಡಾ ಥೇಟ್ ಶಾರುಖ್​​​ನಂತೇ ಇದ್ದಾರೆ. ಶಾರುಖ್ ಖಾನ್ ಅವರ ಕೆಲವೊಂದು ಫೋಟೋಗಳನ್ನು ಆಯ್ಕೆ ಮಾಡಿಕೊಂಡು ಅಂತದ್ದೇ ಕಾಸ್ಟ್ಯೂಮ್​​​​, ಹೇರ್​ಸ್ಟೈಲ್, ಸನ್​ಗ್ಲಾಸ್ ಧರಿಸಿ ಅದೇ ರೀತಿ ಪೋಸ್ ನೀಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಹಳಷ್ಟು ಫೋಟೋ, ವಿಡಿಯೋಗಳನ್ನು ಇಬ್ರಾಹಿಂ ಹಂಚಿಕೊಂಡಿದ್ದಾರೆ. ಶಾರುಖ್ ಹಾಗೂ ಇಬ್ರಾಹಿಂ ಇಬ್ಬರನ್ನೂ ಜೊತೆಯಲ್ಲಿ ನಿಲ್ಲಿಸಿದರೆ ಯಾರು ನಿಜವಾದ ಶಾರುಖ್…? ಯಾರು ನಕಲಿ..? ಎಂಬುದನ್ನು ಪತ್ತೆ ಹಚ್ಚಲು ಸ್ವಲ್ಪ ಕಷ್ಟವೇ ಎನ್ನಬಹುದು. ಇತ್ತೀಚೆಗೆ ಇಬ್ರಾಹಿಂ ಅವರ ಕೆಲವೊಂದು ಫೋಟೋಗಳು ವೈರಲ್ ಆಗಿತ್ತು. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Advertisement

2016 ರಲ್ಲಿ ಶಾರುಖ್ ಖಾನ್​​ ಅವರನ್ನೇ ಹೋಲುವ ಅಭಿಮಾನಿಯೊಬ್ಬನ ಕಾಲ್ಪನಿಕ ಕಥೆ ಆಧರಿಸಿ ‘ಫ್ಯಾನ್’ ಎಂಬ ಸಿನಿಮಾ ಮಾಡಲಾಗಿತ್ತು. ಈ ಚಿತ್ರದಲ್ಲಿ ಶಾರುಖ್ ಅವರೇ ದ್ವಿಪಾತ್ರದಲ್ಲಿ ನಟಿಸಿದ್ದರು. ಆದರೆ ಈ ಚಿತ್ರದಲ್ಲಿ ಶಾರುಖ್ ಅಭಿಮಾನಿ ಪಾತ್ರಕ್ಕೆ ಇಬ್ರಾಹಿಂ ಖಾದ್ರಿ ಅವರನ್ನೇ ಕರೆತರಬೇಕಿತ್ತು ಎಂದು ಅನೇಕ ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಬ್ರಾಹಿಂ ನೋಡಲು ಥೇಟ್ ಶಾರುಖ್ ಅವರ ರೀತಿ ಕಾಣುವುದರಿಂದ ಸೋಷಿಯಲ್ ಮೀಡಿಯಾದಲ್ಲಿ ಅವರ ಫ್ಯಾನ್ ಫಾಲೋಯಿಂಗ್ ಹೆಚ್ಚಾಗುತ್ತಿದೆ. ಇಬ್ರಾಹಿಂ ಖಾದ್ರಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಆಗ್ಗಾಗ್ಗೆ ಶಾರುಖ್ ಖಾನ್ ಸಿನಿಮಾ ಹಾಡುಗಳ ಅನುಕರಣೆ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡುತ್ತಿರುತ್ತಾರೆ. ಆ ವಿಡಿಯೋಗಳನ್ನು ತಪ್ಪದೆ ಶಾರುಖ್ ಖಾನ್​ಗೆ ಟ್ಯಾಗ್ ಮಾಡುತ್ತಾರೆ.

Advertisement

ಇನ್ನು ಶಾರುಖ್ ಖಾನ್ ಸಿನಿಮಾ ವಿಚಾರಕ್ಕೆ ಬರುವುದಾದರೆ, 2018 ರಲ್ಲಿ ಬಿಡುಗಡೆಯಾದ ‘ಜೀರೋ’ ಚಿತ್ರದ ನಂತರ ಯಾವ ಸಿನಿಮಾಗಳು ಬಿಡುಗಡೆಯಾಗಿಲ್ಲ. ಈ ಸಿನಿಮಾ ಬಿಡುಗಡೆಯಾದ ಮುಂದಿನ ದಿನಗಳಲ್ಲಿ ಸಿನಿಮಾವೊಂದರಲ್ಲಿ ಶಾರುಖ್​​​​ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಎರಡು ಸಿನಿಮಾಗಳಿಗೆ ನಿರೂಪಣೆ ಕೂಡಾ ಮಾಡಿದ್ದರು. ಬ್ರಹ್ಮಾಸ್ತ್ರ, ಲಾಲ್ ಸಿಂಗ್ ಸಿನಿಮಾಗಳಲ್ಲಿ ಕೂಡಾ ಶಾರುಖ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ‘ಪಠಾಣ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ಧಾರೆ.

Advertisement
Advertisement

Advertisement

About RJ News Kannada

Check Also

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

Advertisement ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, …

Leave a Reply

Your email address will not be published.

Recent Comments

No comments to show.