ಕೊರೊನಾದಿಂದಾಗಿ ಲಾಕ್ ಡೌನ್ ಆಯಿತು.. ಲಾಕ್ ಡೌನ್ ನಿಂದಾಗಿ ಎಲ್ಲಾ ಉದ್ಯಮಗಳು ಮುಚ್ಚಿದವು.. ಅದರಲ್ಲೂ ಸಿನಿಮಾ ಇಂಡಸ್ಟ್ರಿಯಂತೂ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.. ಯಾವುದೇ ಚಿತ್ರೀಕರಣ ನಡೆಯುತ್ತಿಲ್ಲ.. ಇದರಿಂದಾಗಿ ಸಾಕಷ್ಟು ಕಲಾವಿದರು, ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಇದೀಗ ಬೆಲ್ ಬಾಟಮ್, ಅವನೇ ಶ್ರೀಮನ್ನಾರಾಯಣ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಲಾ ನಿರ್ದೇಶಕನಾಗಿ ಕೆಲಸ ಮಾಡಿರುವ ಲೋಕೇಶ್ ಆರ್ಥಿಕ ಸಂಕಷ್ಟದಿಂದಾಗಿ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ..
ಮೂಲತಃ ನಾಗಮಂಗಲದ ಲೋಕೇಶ್ ಕೆಲಸದಿಂದಾಗಿ ಬೆಂಗಳೂರಿನಲ್ಲಿಯೇ ನೆಲೆಸಿದ್ದರು.. ಆದರೆ ದುರ್ವಿಧಿ ಕೆಲ ವರ್ಷಗಳ ಹಿಂದೆಯಷ್ಟೇ ಲೋಕೇಶ್ ತನ್ನ ಅಪ್ಪ ಅಮ್ಮನನ್ನು ಕಳೆದುಕೊಂಡಿದ್ದರು.. ತನ್ನ ಸಹೋದರನ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದರು.. ಆದರೆ ಇದೀಗ ತಾವು ಕೂಡ ಆ ತ್ಮಹತ್ಯೆಗೆ ಶರಣಾಗಿದ್ದಾರೆ.
ಸಿನಿಮಾ ಚಿತ್ರೀಕರಣಗಳು ಪ್ರಾರಂಭವಾದ ನಂತರ ಲೋಕೇಶ್ ಬೆಲ್ ಬಾಟಮ್ ಟು ಹಾಗೂ ಬನಾರಸ್ ಎಂಬ ಸಿನಿಮಾಗೆ ಕೆಲಸ ಮಾಡಬೇಕಿತ್ತು.
ಆದರೆ ಲಾಕ್ಡೌನ್ ಆಗಿದ್ದರಿಂದ ಸಿನಿಮಾದ ಕೆಲಸ ಸಹ ಸ್ಥಗಿತಗೊಂಡಿತ್ತು. ಲಾಕ್ಡೌನ್ ವೇಳೆ ಲೋಕೇಶ್ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.. ಬೇರೆಯವರು ಕಷ್ಟ ಅಂತ ಕೇಳಿದ್ದರೆ ಸಹಾಯ ಮಾಡುತ್ತಿದ್ದ ಲೋಕೇಶ್ ಸ್ವಾಭಿಮಾನಿ.. ಯಾರ ಬಳಿಯೂ ಕೈಚಾಚುವವರಲ್ಲ.. ಆರ್ಥಿಕ ಸಂಕಷ್ಟ, ಒಂಟಿತನ ಎಲ್ಲವೂ ಸೇರಿ ಲೋಕೇಶ್ ಅವರನ್ನ ಬಲಿ ಪಡೆದುಬಿಟ್ಟಿತು.. ಎಂದು ನಿರ್ಮಾಪಕ ಸಂತೋಷ್ ಸಂತಾಪ ಸೂಚಿಸಿದ್ದಾರೆ.. ಬೆಳೆಯಬೇಕಾದ ಹುಡುಗ ಚಿಕ್ಕ ವಯಸ್ಸಿಗೆ ತಪ್ಪು ನಿರ್ಧಾರದಿಂದ ಜೀವ ಕಳೆದುಕೊಂಡ ಲೋಕೇಶ್ ಅವರ ಸಾವಿಗೆ ಸ್ನೇಹಿತರು ಚಿತ್ರರಂಗದವರು ಕಂಬನಿ ಮಿಡಿದಿದ್ದು ಸಂತಾಪ ಸೂಚಿಸಿದ್ದಾರೆ..