Breaking News

ಮದುವೆಯಾದ ನಂತರ ಮೊದಲಿನಷ್ಟೇ ಬೇಡಿಕೆ ಇದ್ರೂ ಸಂಭಾವನೆ ಇಳಿಸಿಕೊಂಡ ಕಾಜಲ್ ಅಗರ್​​ವಾಲ್…ಇದಕ್ಕೆ ಅವರು ನೀಡಿದ ಕಾರಣ ಇದು..!

Advertisement

ಸಿನಿಮಾರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಬರುವವರು ಮಾರ್ಕೆಟ್​​​​ನಲ್ಲಿ ತಾವು ಓಡುವ ಕುದುರೆ ಎಂದು ತಿಳಿದರೆ ಸಾಕು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ರಾಕಿಂಗ್ ಸ್ಟಾರ್ ಯಶ್ ಕೂಡಾ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದರು. ‘ಚಲೋ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಬಂದ ರಶ್ಮಿಕಾ ಮಂದಣ್ಣ ಸಾಲು ಸಾಲು ಅವಕಾಶಗಳನ್ನು ಪಡೆದು ಸ್ಟಾರ್ ನಟರೊಂದಿಗೆ ನಟಿಸಲು ಚಾನ್ಸ್​ ಪಡೆದಿದ್ದೇ ತಡ, ಚಿತ್ರರಂಗದಲ್ಲಿ ತಮಗಿರುವ ಡಿಮ್ಯಾಂಡ್​​​​​ ಅರಿತು, ಸಂಭಾವನೆಯನ್ನು ಏರಿಸಿಕೊಂಡಿದ್ದರು. ತಮಿಳು ಸಿನಿಮಾವೊಂದರ ಮೂಲಕ ಚಿತ್ರರಂಗಕ್ಕೆ ಬಂದ ಕರಾವಳಿ ಚೆಲುವೆ ಪೂಜಾ ಹೆಗ್ಡೆ, ಹೃತಿಕ್ ರೋಷನ್ ಜೊತೆ ಬಾಲಿವುಡ್ ಸಿನಿಮಾದಲ್ಲೂ ನಟಿಸಿ ಅಲ್ಲಿಂದ ತೆಲುಗಿನಲ್ಲಿ ಬ್ಯುಸಿಯಾದರು. ‘ಮಹರ್ಷಿ’ ಚಿತ್ರದ ನಂತರ ಆಕೆ ಕೂಡಾ ತಮ್ಮ ಸಂಭಾವನೆ ಹೆಚ್ಚಿಸಿಕೊಂಡರು. ಇನ್ನು ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್’ ನಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು. ಈ ಸಿನಿಮಾ ರಿಲೀಸ್ ಆದ ನಂತರ ಇವರೂ ಸಂಭಾವನೆ ಏರಿಸಿದರು.

Advertisement

ಹೀಗೆ ಒಬ್ಬೊಬ್ಬರೇ ನಟ-ನಟಿಯರು ತಮ್ಮ ಬೇಡಿಕೆಗೆ ಅನುಗುಣವಾಗಿ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ ನಟಿ ಕಾಜಲ್ ಅಗರ್​​​ವಾಲ್ ಮಾತ್ರ ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಂಡಿದ್ದಾರಂತೆ. ಕಾಜಲ್ ನಡೆಗೆ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹಾಗಂತ ಕಾಜಲ್ ಬೇಡಿಕೆಯೇನೂ ಕಡಿಮೆಯಾಗಿಲ್ಲ. ಕಾಜಲ್ ಈಗ ವಿವಾಹಿತೆ ಆದರೂ ಅವರಿಗೆ ಇನ್ನೂ ಡಿಮ್ಯಾಂಡ್ ಇದೆ. ಬಹಳಷ್ಟು ಅವಕಾಶಗಳು ಅವರನ್ನು ಹುಡುಕಿ ಬರುತ್ತಿವೆ. ಆದರೆ ಮುಂದಿನ ದಿನಗಳಲ್ಲಿ ಸಂಭಾವನೆ ವಿಚಾರವಾಗಿ ಅವಕಾಶಗಳು ಕಡಿಮೆ ಆಗಬಾರದು ಎಂಬ ಕಾರಣಕ್ಕಾಗಿ ಕಾಜಲ್ ತಮ್ಮ ಸಂಭಾವನೆನ್ನು ಕಡಿಮೆ ಮಾಡಿದ್ದಾರಂತೆ. ಅಷ್ಟೇ ಅಲ್ಲ, ಕಳೆದ ಒಂದು ವರ್ಷದಿಂದ ಕೊರೊನಾ ಕಾರಣದಿಂದ ಚಿತ್ರರಂಗ ನಷ್ಟದಲ್ಲಿರುವುದರಿಂದ ನಿರ್ಮಾಪಕರ ಕಷ್ಟವನ್ನು ಕಾಜಲ್ ಅರ್ಥ ಮಾಡಿಕೊಂಡಿದ್ದಾರಂತೆ. ಹಾಗಂತ ಟಾಲಿವುಡ್​​​​ನಲ್ಲಿ ಸುದ್ದಿ ಹರಿದಾಡುತ್ತಿದೆ.

ಪಂಜಾಬಿ ಕುಟುಂಬಕ್ಕೆ ಸೇರಿದ ಕಾಜಲ್ ಅಗರ್​​ವಾಲ್, ಮಾಸ್ ಮೀಡಿಯಾದಲ್ಲಿ ಪದವಿ ಪಡೆದಿದ್ದಾರೆ. ಮಾಡೆಲಿಂಗ್​​​​ನಲ್ಲೂ ಗುರುತಿಸಿಕೊಂಡಿದ್ದ ಕಾಜಲ್​, ಬಾಲಿವುಡ್ ಸಿನಿಮಾವೊಂದರಲ್ಲಿ ನಾಯಕಿ ದಿಯಾ ತಂಗಿ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದರು. ಆದರೆ ಹಿಂದಿ ಚಿತ್ರರಂಗ ಕಾಜಲ್​​​ಗೆ ಹೇಳಿಕೊಳ್ಳುವಂತ ಹೆಸರು ನೀಡಲಿಲ್ಲ. ನಂತರ ಕಾಜಲ್​​ಗೆ ತೆಲುಗು ಚಿತ್ರರಂಗ ಕೈ ಬೀಸಿ ಕರೆಯಿತು. 2007 ರಲ್ಲಿ ‘ಲಕ್ಷ್ಮಿ ಕಲ್ಯಾಣಂ’ ಚಿತ್ರದ ಮೂಲಕ ಟಾಲಿವುಡ್​​ಗೆ ಬಂದ ಕಾಜಲ್ ಅಗರ್​​ವಾಲ್​​ಗೆ ತೆಲುಗು ಪ್ರೇಕ್ಷಕರು ಪ್ರೀತಿಯ ಸ್ವಾಗತ ನೀಡಿದರು. ಕಾಜಲ್ ಹಾಗೂ ಅವರ ಚಿತ್ರಗಳನ್ನು ಮೆಚ್ಚಿಕೊಂಡರು. ಇದರ ಫಲವಾಗಿಯೇ ಕಾಜಲ್ ಬ್ಯಾಕ್ ಟು ಬ್ಯಾಕ್ ತೆಲುಗು ಸಿನಿಮಾಗಳಲ್ಲಿ ನಟಿಸಿದರು. 2009 ರಲ್ಲಿ ರಾಮ್​ ಚರಣ್ ತೇಜ ಜೊತೆ ಅಭಿನಯಿಸಿದ ‘ಮಗಧೀರ’, ಕಾಜಲ್​ಗೆ ದೊಡ್ಡ ಬ್ರೇಕ್ ನೀಡಿತು. ಕೆಲವೊಂದು ತಮಿಳು ಸಿನಿಮಾಗಳಲ್ಲೂ ಕಾಜಲ್ ನಟಿಸಿದ್ದಾರೆ.

Advertisement

ಕಳೆದ ವರ್ಷ ಗೌತಮ್ ಕಿಚ್ಲು ಎಂಬುವವರನ್ನು ಮದುವೆಯಾದ ಕಾಜಲ್, ಈಗ ಪತಿಯೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ. ”ನಾನು ಕಲೆಯನ್ನು ಬಹಳ ಗೌರವಿಸುತ್ತೇನೆ. ಮದುವೆಯಾದ ನಂತರ ಕೂಡಾ ನಾನು ನಟಿಸುವುದನ್ನು ಬಿಡುವುದಿಲ್ಲ. ಇದಕ್ಕೆ ನನ್ನ ಪತಿಯ ಸಂಪೂರ್ಣ ಒಪ್ಪಿಗೆ ಇದೆ” ಎಂದು ಕಾಜಲ್ ಮೊದಲೇ ಹೇಳಿದ್ದರು. ಅದರಂತೆ ಕಾಜಲ್ ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ಧಾರೆ. ಸದ್ಯಕ್ಕೆ ಕಾಜಲ್ ಕೈಯ್ಯಲ್ಲಿ ಇಂಡಿಯನ್-2 , ಆಚಾರ್ಯ ಹಾಗೂ ಹೆಸರಿಡದ ಇನ್ನೂ ಎರಡು ಸಿನಿಮಾಗಳಿವೆ.

Advertisement

-ರಕ್ಷಿತ ಕೆ.ಆರ್. ಸಾಗರ

Advertisement
Advertisement

Advertisement

About RJ News Kannada

Check Also

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

Advertisement ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, …

Leave a Reply

Your email address will not be published.

Recent Comments

No comments to show.