Breaking News

ಅಭಿನಯ ಕೈಹಿಡಿಯದಿದ್ದರೆ ನಾನು ಖಿನ್ನತೆಗೆ ಜಾರುತ್ತಿದ್ದೆದ ಕಿರುತೆರೆ ನಟ ಇಂದು ಕಿರುತೆರೆಯಲ್ಲಿ ಬ್ಯುಸಿ!

Advertisement

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ನಯನತಾರಾ’ ಧಾರವಾಹಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಧನುಶ್ ಕೆ ಅವರು ಚಿತ್ರರಂಗದಲ್ಲಿ ಸಾಧನೆ ಮಾಡಬೇಕೆಂದು ಕನಸನ್ನು ಕಟ್ಟಿ ಬಂದವರು. ನಟನೆಗೆ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಳ್ಳಬೇಕೆಂಬ ಅಭಿಲಾಷೆಯೊಂದಿಗೆ ಬಣ್ಣದ ನಂಟು ಬೆಳೆಸಿಕೊಂಡಿರುವ ಧನುಷ್ ತಮಗೆ ಸಿಕ್ಕಿರುವ ಹೊಸ ಪಾತ್ರದ ಬಗ್ಗೆ ಹೀಗೆ ಹಂಚಿಕೊಳ್ಳುತ್ತಾರೆ. “ಪ್ರಸ್ತುತ ಧಾರಾವಾಹಿಯಲ್ಲಿ ನಾನು ನಾಯಕ ರಾಹುಲ್ ಆಗಿ ಅಭಿನಯಿಸುತ್ತಿದ್ದೇನೆ. ಚಿಕ್ಕಮ್ಮನನ್ನು ಅತಿಯಾಗಿ ಪ್ರೀತಿಸುವ ಪಾತ್ರವದು‌. ಅಪ್ಪ ಅಮ್ಮನಿಗಿಂತ ಬಾಲ್ಯದಿಂದ ಸಾಕಿ ಸಲಹಿದ ಚಿಕ್ಕಮ್ಮನೇ ನನ್ನ ಸರ್ವಸ್ವ ಆಗಿರುತ್ತಾರೆ. ಯಾವುದೇ ಸಲಹೆ ಹಾಗೂ ಮಾರ್ಗದರ್ಶನಕ್ಕೆ ಅವರನ್ನು ಸಂಪರ್ಕಿಸುತ್ತೇನೆ. ಅವರು ಹಾಕಿಕೊಟ್ಟ ದಾರಿಯಲ್ಲೇ ನಡೆಯುತ್ತೇನೆ” ಎಂದು ಪಾತ್ರದ ಬಗ್ಗೆ ವಿವರಿಸುತ್ತಾರೆ ಧನುಷ್.

Advertisement

ಇದರ ಜೊತೆಗೆ ಧಾರಾವಾಹಿಯ ಬಗ್ಗೆ ಮತ್ತಷ್ಟು ಮಾತನಾಡಿರುವ ಧನುಷ್ “ಈ ಮಧ್ಯೆ ಮನೆಯಲ್ಲಿ ದೀಪಾ ಅನ್ನೋ ಹುಡುಗಿ ಜೊತೆ ಮದುವೆ ಮಾಡುವ ಪ್ರಸ್ತಾಪ ಬರುತ್ತದೆ. ಆದರೆ ನನಗೆ ಆ ಮದುವೆ ಇಷ್ಟ ಇರೋದಿಲ್ಲ. ಇಷ್ಟೆಲ್ಲಾ ಆಗುತ್ತಿರುವಾಗ ನಯನ ಅನ್ನೋ ಹುಡುಗಿಯ ಪರಿಚಯ ಆಗುತ್ತ‌ದೆ. ನಯನ ಹಾಗೂ ತಾರಾ ಇಬ್ಬರೂ ಅಕ್ಕತಂಗಿಯರು. ಯಾವುದೇ ಸಮಸ್ಯೆಗಳಿದ್ದರೂ ಫೋನ್ ಮಾಡಿ ನಯನಾಳಲ್ಲಿ ಹೇಳಿಕೊಂಡಾಗ ಮನಸ್ಸಿಗೆ ಸಮಾಧಾನ ದೊರೆಯುತ್ತದೆ. ಅವಳ ಮೇಲೆ ಪ್ರೀತಿ ಚಿಗುರೊಡೆಯುತ್ತದೆ. ಆದರೆ ನಯನಾಳ ಹೆಸರಿನಲ್ಲಿ ನನಗೆ ಕರೆ ಮೂಲಕ ನೈತಿಕ ಬೆಂಬಲ ನೀಡುತ್ತಿರುವುದು ತಾರಾ ಅನ್ನೋ ಸತ್ಯ ತಿಳಿಯುತ್ತದೆ. ಇದು ಕಥೆ ಸ್ವರೂಪ. ಉತ್ತಮ ತಂಡ ನನಗೆ ದೊರಕಿದ್ದು, ಎಲ್ಲರೂ ಒಂದೇ ಕುಟುಂಬದವರ ರೀತಿಯಲ್ಲಿ ಒಡನಾಡುತ್ತಿದ್ದೇವೆ” ಎಂದು ಧನುಷ್ ತಮ್ಮ ಧಾರವಾಹಿ ಹಾಗೂ ತಂಡದ ಬಗ್ಗೆ ಹೇಳುತ್ತಾರೆ.

ತಾವು ಬಣ್ಣದ ಬದುಕಿಗೆ ಕಾಲಿಟ್ಟ ಕುರಿತು ಮಾತನಾಡುತ್ತಾ “ನಟನಾಗಬೇಕೆಂಬ ಆಸೆ ನನ್ನ ಮನಸ್ಸಲ್ಲಿ ಆಳವಾಗಿ ಬೇರೂರಿತ್ತು. ಇದು ಬಿಟ್ಟರೆ ನನಗೆ ಬೇರಾವುದೇ ಆಯ್ಕೆಗಳೂ ಇರಲಿಲ್ಲ. ವಿದ್ಯಾಭ್ಯಾಸವನ್ನು ಸರಿಯಾಗಿ ಪೂರ್ಣಗೊಳಿಸಿರಲಿಲ್ಲ. ಬಹುಷಃ ಅಭಿನಯ ನನ್ನ ಕೈಹಿಡಿಯುತ್ತಿಲ್ಲದಿದ್ದರೆ ಖಿನ್ನತೆಗೆ ಜಾರುತ್ತಿದ್ದೆ ಎಂದು ಅನಿಸುತ್ತದೆ” ಎಂದು ನುಡಿಯುತ್ತಾರೆ.

Advertisement

“2013ರಿಂದ ಈ ವೃತ್ತಿಗೆ ಬೇಕಾದ ಪರಿಶ್ರಮವನ್ನು, ತಾಲೀಮುಗಳನ್ನು ನಡೆಸಲು ತೊಡಗಿಸಿಕೊಂಡೆ. ಸ್ನೇಹಿತರ ನೆರವಿನಿಂದ ಅಭಿನಯಕ್ಕೆ ಸಂಬಂಧಿಸಿದ ತರಬೇತಿ ಶಾಲೆಯೊಂದಕ್ಕೆ ಸೇರಿಕೊಂಡೆ. ಅಲ್ಲಿ ಮೂಕಾಭಿನಯ, ಸಂಭಾಷಣೆ, ಕ್ಯಾಮರಾವನ್ನು ಎದುರಿಸುವ ಬಗೆಯನ್ನೆಲ್ಲಾ ತಿಳಿಸಿಕೊಟ್ಟರು. ಶೇ. 40ರಷ್ಟು ಕಲಿಕೆ ಅಲ್ಲಾಯಿತು. ಆದ್ರೆ ನೈಜವಾದ ಪರೀಕ್ಷೆ ಹಾಗೂ ಕಲಿಕೆಯ ಪ್ರಯೋಗ ಎದುರಾಗುವುದು ತೆರೆಯ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸಿದ ನಂತರ ಮಾತ್ರ” ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ ಧನುಷ್.

Advertisement

“ಇನ್ನು ನನ್ನ ಕೈಯಿಂದ ಅವಕಾಶಗಳು ತಪ್ಪಿ ಹೋಗುತ್ತಿರುವುದು ನೋಡಿ ಬೇಸರವಾಗುತ್ತಿತ್ತು. ಇದರ ಜೊತೆಗೆ ನಡುನಡುವೆ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದೆನಾದರೂ ಅದು ತೃಪ್ತಿಕರವಾಗಿರಲಿಲ್ಲ. ಮನೆಯಲ್ಲೂ ಕೆಲವು ತೊಂದರೆಗಳು ಉಂಟಾಯ್ತು. ಒಂದೆರಡು ವರ್ಷಗಳಲ್ಲಿ ಯಾವುದೇ ಅವಕಾಶಗಳೂ ಸಿಗಲೇ ಇಲ್ಲ. ಹಲವಾರು ಆಡಿಷನ್‌ಗಳಲ್ಲಿ ಭಾಗವಹಿಸಿ ಕೊನೆಗೂ ಅವಕಾಶ ಗಿಟ್ಟಿಸಿಕೊಂಡೆ. ಪೂರ್ಣಪ್ರಮಾಣದ ನಟನಾಗಬೇಕು, ಸಿನೆಮಾದಲ್ಲಿ ಅಭಿನಯಿಸಬೇಕೆಂಬ ಅಭಿಲಾಷೆ ಇದೆ. ಪಾತ್ರ ಪ್ರಧಾನ ಸಿನೆಮಾ ಸಿಕ್ಕಲ್ಲಿ ಖಂಡಿತವಾಗಿಯೂ ನಟಿಸುತ್ತೇನೆ” ಎಂದು ಧನುಷ್ ಹಂಚಿಕೊಳ್ಳುತ್ತಾರೆ.
– ಅಹಲ್ಯಾ

Advertisement
Advertisement

Advertisement

About RJ News Kannada

Check Also

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

Advertisement ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, …

Leave a Reply

Your email address will not be published.

Recent Comments

No comments to show.