Breaking News

ಆ ರೀತಿ ನಟಿಸುವುದು ನನಗೆ ಸ್ವಲ್ಪವೂ ಇಷ್ಟವಿರಲಿಲ್ಲ…ಪ್ರಭಾಸ್ ಹೀಗೆ ಹೇಳಿದ್ದು ಯಾವ ವಿಚಾರದ ಬಗ್ಗೆ…?

Advertisement

ಕಲಾವಿದರು ಎಂದ ಮೇಲೆ ಸಿನಿಮಾ ಕಥೆಗೆ ತಕ್ಕಂತೆ ಅವರು ಎಲ್ಲಾ ರೀತಿಯ ಪಾತ್ರಗಳನ್ನು ಮಾಡಲು ಸಿದ್ಧರಿರಬೇಕು. ಕೆಲವು ಕಲಾವಿದರಿಗೆ ಕೆಲವೊಂದು ದೃಶ್ಯಗಳಲ್ಲಿ ಅಭಿನಯಿಸಲು ಇಷ್ಟವಿರದಿದ್ದರೂ ದೃಶ್ಯಕ್ಕೆ ಅವಶ್ಯಕತೆಯಿರುವುದರಿಂದಲೋ, ನಿರ್ದೇಶಕರ ಒತ್ತಾಯದ ಮೇರೆಗೋ ಇಷ್ಟವಿಲ್ಲದಿದ್ದರೂ ನಟಿಸುತ್ತಾರೆ. ಈ ವಿಚಾರದ ಬಗ್ಗೆ ಅವರಿಗೆ ನಂತರ ಪಶ್ಚಾತಾಪವಾಗುವುದೂ ಉಂಟು. ಇಂತಹ ಎಷ್ಟೋ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಟಾಲಿವುಡ್​​​ನ ಖ್ಯಾತ ನಟ ಪ್ರಭಾಸ್​​​ಗೆ ಕೂಡಾ ಈ ಅನುಭವ ಆಗಿದೆಯಂತೆ. ಪ್ರಭಾಸ್​ ಎಷ್ಟೋ ಹಿಟ್ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ್ಧಾರೆ. ‘ಬಾಹುಬಲಿ’ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿದ್ದ ಪ್ರಭಾಸ್​​​​ಗೆ ಪುಟ್ಟ ದೃಶ್ಯವೊಂದರಲ್ಲಿ ನಟಿಸಲು ಬಹಳ ಕಷ್ಟವಾಯ್ತಂತೆ. ಆದರೆ ನಿರ್ದೇಶಕ ಬಲವಂತ ಮಾಡಿದ್ದರಿಂದ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲವಂತೆ. ಈಗಲೂ ಆ ದೃಶ್ಯ ನೋಡಿದರೆ ಇರುಸು ಮುರಿಸಾಗುತ್ತದೆ ಎಂದು ಪ್ರಭಾಸ್ ಹೇಳಿಕೊಂಡಿದ್ಧಾರೆ.

Advertisement

‘ಚಕ್ರಂ’ ಚಿತ್ರದ ದೃಶ್ಯವೊಂದರಲ್ಲಿ ನಟಿಸುವಾಗ ನನಗೆ ಬಹಳ ಕಷ್ಟವಾಯ್ತು ಎಂದು ಪ್ರಭಾಸ್​, ಇತ್ತೀಚೆಗಿನ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ಧಾರೆ. ”ಸಿನಿಮಾಗೆ ಬರುವ ಮುನ್ನ ನನಗೆ ‘ಗೇ'(ಸಲಿಂ’ಗಕಾ’ಮಿ) ಸಂಸ್ಕೃತಿ ಬಗ್ಗೆ ತಿಳಿದಿರಲಿಲ್ಲ. ಸಿನಿಮಾಗಳಲ್ಲಿ ನಾಯಕರು ಹುಡುಗಿಯಂತೆ ವೇಷ ಧರಿಸುವುದು ಅಥವಾ ಹುಡುಗಿಯರಂತೆ ನಟಿಸುವುದು ನನಗೆ ಸ್ವಲ್ಪವೂ ಇಷ್ಟವಿಲ್ಲ. ಆದರೆ ‘ಚಕ್ರಂ’ ಸಿನಿಮಾದಲ್ಲಿ ನಾನೇ ಆ ಪಾತ್ರ ಮಾಡಬೇಕಾಗಿ ಬಂತು. ನನಗೆ ಆ ರೀತಿ ನಟಿಸಲು ಇಷ್ಟವಿರಲಿಲ್ಲ. ಆದರೆ ಆ ಚಿತ್ರದ ನಿರ್ದೇಶಕ ಕೃಷ್ಣವಂಶಿ ಬಹಳ ಸ್ಟ್ರಿಕ್ಟ್​. ಆತ ಹೇಳಿದ್ದನ್ನು ಮಾಡಲೇಬೇಕು. ವಿಧಿ ಇಲ್ಲದೆ ನಾನು ಹುಡುಗಿಯಂತೆ ನಟಿಸಿದೆ. ಆ ಶಾಟ್ ಮಾಡಿ ಮುಗಿಸುವಷ್ಟರಲ್ಲಿ ನಾನು ದೊಡ್ಡ ಸಾಹಸವನ್ನೇ ಮಾಡಿದಂತಾಯ್ತು. ಈಗಲೂ ಕೆಲವೊಮ್ಮೆ ಟಿವಿಯಲ್ಲಿ ‘ಚಕ್ರಂ’ ಸಿನಿಮಾ ಪ್ರಸಾರವಾದಾಗ ಆ ದೃಶ್ಯ ನೋಡುತ್ತಿದ್ದರೆ ಬಹಳ ಮುಜುಗರವಾಗುತ್ತದೆ” ಎಂದು ಪ್ರಭಾಸ್ ಹೇಳಿಕೊಂಡಿದ್ದಾರೆ.

ಸಾಮಾನ್ಯವಾಗಿ ನಟ-ನಟಿಯರು ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ, ತಮಗಿಂತ ಹಿರಿಯ-ಖ್ಯಾತ ಕಲಾವಿದರಿಗೆ ಹೊಡೆಯುವ, ಬೈಯ್ಯುವ ದೃಶ್ಯಗಳಲ್ಲಿ ನಟಿಸುವಾಗ ಮುಜುಗರ ಪಡುವುದು ಉಂಟು. ಆದರೆ ಪ್ರಭಾಸ್​​​ ವಿಚಾರದಲ್ಲಿ ಅದು ವಿಭಿನ್ನ. ಅಂದಹಾಗೆ ‘ಚಕ್ರಂ’ ಪ್ರಭಾಸ್ ಅಭಿನಯದ 5ನೇ ಸಿನಿಮಾ. ಈ ಚಿತ್ರ 2005 ರಲ್ಲಿ ಬಿಡುಗಡೆಯಾಗಿತ್ತು. ವೆಂಕಟರಾಜು ಹಾಗೂ ಶಿವರಾಜ್ ನಿರ್ಮಿಸಿದ್ದ ಈ ಚಿತ್ರವನ್ನು ಕೃಷ್ಣ ವಂಶಿ ಕಥೆ ಬರೆದು ನಿರ್ದೇಶಿಸಿದ್ದರು. ಚಕ್ರಿ ಸಂಗೀತ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಆಸಿನ್, ಚಾರ್ಮಿಕೌರ್, ಪ್ರಕಾಶ್ ರಾಜ್, ಊರ್ವಶಿ, ತನಿಕೆಳ್ಳ ಭರಣಿ ಹಾಗೂ ಇನ್ನಿತರರು ನಟಿಸಿದ್ಧಾರೆ.

Advertisement

ಪ್ರಭಾಸ್ ಹೊಸ ಚಿತ್ರಗಳ ವಿಚಾರಕ್ಕೆ ಬರುವುದಾದರೆ 2019 ರ ‘ಸಾಹೋ’ ನಂತರ ಅವರು ಅಭಿನಯಿಸಿರುವ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಸದ್ಯಕ್ಕೆ ಅವರು ‘ರಾಧೇಶ್ಯಾಮ್’, ‘ಸಲಾರ್’ಹಾಗೂ ‘ಆದಿಪುರುಷ್’ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾಗಳಲ್ಲಿ ರಾಧೇಶ್ಯಾಮ್ ಹಾಗೂ ಆದಿಪುರುಷ್ ಹಿಂದಿ-ತೆಲುಗಿನಲ್ಲಿ ತಯಾರಾಗುತ್ತಿದೆ. ‘ಸಲಾರ್’ ಸಿನಿಮಾ ಕನ್ನಡ -ತೆಲುಗಿನಲ್ಲಿ ತಯಾರಾಗುತ್ತಿದ್ದು ಇತರ ಭಾಷೆಗಳಿಗೆ ಡಬ್​ ಆಗಲಿದೆ. ‘ಸಲಾರ್’ ಚಿತ್ರವನ್ನು ಕನ್ನಡದ ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ಧಾರೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳುತ್ತಿದ್ಧಾರೆ. ಈ ಚಿತ್ರಕ್ಕೆ ಕನ್ನಡದ ಭುವನ್ ಗೌಡ ಕ್ಯಾಮರಾ ವರ್ಕ್ ಮಾಡುತ್ತಿದ್ಧಾರೆ.

Advertisement

-ರಕ್ಷಿತ ಕೆ.ಆರ್. ಸಾಗರ

Advertisement
Advertisement

Advertisement

About RJ News Kannada

Check Also

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

Advertisement ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, …

Leave a Reply

Your email address will not be published.

Recent Comments

No comments to show.