ಸ್ಯಾಂಡಲ್ ವುಡ್ ಗೆ ನಾದಬ್ರಹ್ಮ ಹಂಸಲೇಖ ಅವರ ಕೊಡುಗೆ ಅಪಾರ. ಇನ್ನು ಅವರ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸಿದ್ದ ಪ್ರಖ್ಯಾತ ಗಾಯಕ ಹೇಮಂತ್ ಕುಮಾರ್ ಅವರು ಕೂಡ ಕನ್ನಡದ ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಸ್ಯಾಂಡಲ್ ವುಡ್ ಸಂಗೀತ ನಿರ್ದೇಶಕರೊಂದಿಗೆ ಹಲವು ವರ್ಷಗಳಿಂದ ಹಾಡು ಹಾಡುತ್ತಾ ಬಂದಿರುವ ಹೇಮಂತ್ ಕುಮಾರ್ ಅವರ ವಿವಾಹ ನೆರವೇರಿದೆ.
ಕನ್ನಡದ ಬಹುತೇಕ ಸ್ಟಾರ್ ನಟರ ಸಿನಿಮಾಗಳಿಗೆ ಹಾಡು ಹಾಡಿರುವ ಹೇಮಂತ್ ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಇವರೀಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಇಡೀ ಚಿತ್ರರಂಗವೇ ಹೆಮಂತ್ ಗೆ ಶುಭ ಹಾರೈಸಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಹೇಮಂತ್ ಕುಮಾರ್ ಹಾಗೂ ಕೃತಿಕಾ ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ಜರುಗಿತು. ಬೆಂಗಳೂರಿನಲ್ಲಿ ನಡೆದ ಇವರ ಮದುವೆಗೆ ಗಣ್ಯಾತಿ ಗಣ್ಯರು ಆಗಮಿಸಿದ್ದರು.
ಗಾಯಕ ಹೇಮಂತ್ ಕುಮಾರ್ ಅವಕು ಮದುವೆಯಾಗಿರುವುದು ಕೃತಿಕಾ ಎಂಬುವರನ್ನು. ಇವರು ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ. ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನೆಫ್ರಾಲಜಿಸ್ಟ್ ಆಗಿರುವ ಕೃತಿಕಾ ಹೇಮಂತ್ ಅವರ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಹೇಮಂತ್ ಕುಮಾರ್ ಹಾಗೂ ಕೃತಿಕಾ ಅವರಪ ಕುಟುಂಬಸ್ಥರ ಸಮ್ಮುಖ ವಿವಾಹವಾಗಿದ್ದಾರೆ.
ಇನ್ನು ಇವರ ವಿವಾಹಕ್ತೆ ಸೂಪರ್ ಸ್ಟಾರ್, ರಿಯಲ್ ಸ್ಟಾರ್ ಉಪೇಂದ್ರ ಆಗಮಿಸಿದ್ದರು. ಇಡೀ ಸ್ಯಾಂಡಲ್ ವುಡ್ ಹೇಮಂತ್ ಕುಮಾರ್- ಕೃತಿಕಾ ಮದುವೆಗೆ ಸಾಕ್ಷಿಯಾದರು. ಹೇಮಂತ್ ಅವರು, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ಗಣೇಶ್, ಸುದೀಪ್, ದರ್ಶನ್, ಶ್ಕೀನಗರ ಕಿಟ್ಟಿ, ಧುನಿಯಾ ವಿಜಯ್, ಅಜಯ್, ಪ್ರೇಮ್ ಯೇರಿದಂತೆ ಹಲವು ನಾಯಕ ನಟರ ಸಿನಿಮಾ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಮುಂಗಾರು ಮಳೆ, ದುನಿಯಾ, ನೀ ಬರದಿರೆ ಏನಂತಿ, ಬಕ್ರಾ ಬಕ್ರಾ, ರಕ್ತ ಕಣ್ಣೀರು, ಪ್ರಾಬ್ಲಮ್, ಪ್ರಾಬ್ಲಮ್, ಕುರಿಗಳು ಸಾರ್ ಕುರಿಗಳು, ಪ್ರೀತಿ ಮಾಯೆ ಹುಷಾರು, ಸುವ್ವಿ ಸುವ್ವಾಲಿ ಹಾಡುಗಳನ್ನು ಹಾಡಿದ್ದಾರೆ. ಇವುಗಳೊಂದಿಗೆ ಹಲವು ಸ್ಟೇಜ್ ಗಳಲ್ಲೂ ಹೇಮಂತ್ ಹಾಡಿ ಸೈ ಎನಿಸಿಕೊಂಡಿದ್ದಾರೆ. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮುಂದಿನ ಇವರ ಸಂಸಾರ ಸುಖಕರವಾಗಿರಲಿ ಎಂದು ಹಾರೈಸೋಣ.