Breaking News

ಸಹಾಯ ಅಂತನಾದ್ರೂ ಹೇಳಿ, ಪ್ರೀತಿ ಅಂತನಾದ್ರೂ ಹೇಳಿ…ಸಾಧ್ಯವಾದರೆ ನನ್ನೊಂದಿಗೆ ಕೈಜೋಡಿಸಿ..ದರ್ಶನ್ ಹೀಗೆ ಹೇಳಿದ್ದೇಕೆ…?

Advertisement

ಎರಡನೇ ಬಾರಿಯ ಲಾಕ್​​ಡೌನ್​​​ಗೆ ಜನರು ಇನ್ನಷ್ಟು ತತ್ತರಿಸಿದ್ದಾರೆ. ಕೆಲಸ ಮಾಡಿದರಷ್ಟೇ ಜೀವನ ಇಲ್ಲವಾದರೆ ಏನೂ ಇಲ್ಲ ಎಂಬುವವರು ಯಾರಾದರೂ ನಮಗೆ ಸಹಾಯ ಮಾಡಿದರೆ ಸಾಕಪ್ಪಾ ಎನ್ನುತ್ತಿದ್ದಾರೆ. ಒಂದು ಲಾಕ್​ಡೌನ್​​​ನಿಂದ ಸುಧಾರಿಸಿಕೊಳ್ಳುತ್ತಿರುವಾಗಲೇ ಈ ಬಾರಿ ಮತ್ತೊಮ್ಮೆ ಲಾಕ್​ಡೌನ್ ಘೋಷಿಸಿರುವುದು, ಲಾಕ್​ಡೌನ್ ವಿಸ್ತರಿಸುತ್ತಿರುವುದು ಬಡಜನರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ವಿಧಿ ಇಲ್ಲ, ಕೊರೊನಾದಿಂದ ನಮ್ಮನ್ನು ರಕ್ಷಿಸಿಕೊಳ್ಳಲು, ಕೊರೊನಾ ಸಮಸ್ಯೆಯನ್ನು ನಿವಾರಿಸಲು ಲಾಕ್​ಡೌನ್ ಅಗತ್ಯ. ಇನ್ನು ಈ ಲಾಕ್​ಡೌನ್​​ನಿಂದ ಜನರು ಹೇಗೆ ಕಷ್ಟ ಪಡುತ್ತಿದ್ದಾರೋ ಪ್ರಾಣಿಗಳು ಕೂಡಾ ಅಷ್ಟೇ ಕಷ್ಟ ಪಡುತ್ತಿವೆ. ಸಾಕು ಪ್ರಾಣಿಗಳಾದರೆ ಹೇಗೋ ಮನೆಯವರ ಆರೈಕೆಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಕಾಡು ಪ್ರಾಣಿಗಳಿಗೂ ಸಮಸ್ಯೆಯಿಲ್ಲ, ಆದರೆ ಮೃಗಾಲಯದಲ್ಲಿ ಇರುವ ಪ್ರಾಣಿಗಳಿಗೆ ಸರಿಯಾದ ಆಹಾರ ಇಲ್ಲದಂತಾಗಿದೆ.

Advertisement

ನಿನ್ನೆ ವಿಶ್ವ ಪರಿಸರ ದಿನಾಚರಣೆ, ಕೆಲವರು ವಾಟ್ಸಾಪ್ ಸ್ಟೇಟಸ್, ಫೇಸ್​​ಬುಕ್​​ಗಳಲ್ಲಿ ಪ್ರಕೃತಿಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪರಿಸರ ದಿನಾಚರಣೆ ಆಚರಿಸಿದರೆ ಮತ್ತೆ ಕೆಲವರು ಮನೆ ಬಳಿ ಗಿಡ ನೆಟ್ಟಿದ್ದಾರೆ. ನಟ ದರ್ಶನ್ ಮೈಸೂರಿನ ಮೃಗಾಲಯದಲ್ಲಿ ಗಿಡ ನೆಡುವ ಮೂಲಕ ನಿನ್ನೆ ವಿಶೇಷವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಿದ್ದಾರೆ. ದರ್ಶನ್ ಮೊದಲಿನಿಂದಲೂ ಪ್ರಾಣಿಪ್ರಿಯರು. ಪ್ರಾಣಿ-ಪಕ್ಷಿಗಳ ಮೇಲಿನ ದರ್ಶನ್ ಕಾಳಜಿಗೆ ಸರ್ಕಾರ ಅವರನ್ನು ರಾಜ್ಯ ಅರಣ್ಯ ಇಲಾಖೆಯ ರಾಯಭಾರಿಯನ್ನಾಗಿ ಮಾಡಿದೆ. ತಮ್ಮ ಫಾರ್ಮ್ ಹೌಸ್​​​ನಲ್ಲಿ ಕೂಡಾ ದರ್ಶನ್ ಕೆಲವೊಂದು ಪ್ರಾಣಿಗಳನ್ನು ಸಾಕಿದ್ಧಾರೆ. ಮೃಗಾಲಯದಲ್ಲಿ 3 ಹುಲಿಗಳನ್ನು ದತ್ತು ಪಡೆದಿದ್ದಾರೆ. ಸಾಧ್ಯವಾದರೆ ನೀವು ಕೂಡಾ ಪ್ರಾಣಿಗಳನ್ನು ದತ್ತು ಪಡೆಯಿರಿ ಎಂದು ಮನವಿ ಮಾಡಿದ್ದಾರೆ.

Advertisement

ನಿನ್ನೆ ಮೈಸೂರು ಮೃಗಾಲಯದಲ್ಲಿ ಗಿಡ ನೆಟ್ಟು ನಂತರ ಮಾತನಾಡಿದ ದರ್ಶನ್, “ಲಾಕ್​​ಡೌನ್​​​ನಿಂದ ಮನುಷ್ಯರಂತೆ ಪ್ರಾಣಿಗಳೂ ಕಷ್ಟದಲ್ಲಿ ಸಿಲುಕಿದೆ. ಕರ್ನಾಟಕದಲ್ಲಿ 9 ಮೃಗಾಲಯಗಳಿದ್ದು ಸುಮಾರು 5000 ಪ್ರಾಣಿ-ಪಕ್ಷಿಗಳಿವೆ. ಜನರು ಇವನ್ನು ನೋಡಲು ಖರೀದಿಸುತ್ತಿದ್ದ ಟಿಕೆಟ್ ಹಣದಿಂದಲೇ ಪ್ರಾಣಿ-ಪಕ್ಷಿಗಳ ನಿರ್ವಹಣೆಯಾಗುತ್ತಿತ್ತು. ಆದರೆ ಕಳೆದ ಬಾರಿ ಲಾಕ್​ಡೌನ್ ಆದಾಗಿನಿಂದ ಯಾರೂ ಮೃಗಾಲಯಕ್ಕೆ ಬರುತ್ತಿಲ್ಲ. ಇದರಿಂದ ಪ್ರಾಣಿಗಳ ಆಹಾರ ಹಾಗೂ ಇನ್ನಿತರ ನಿರ್ವಹಣೆ ಬಹಳ ಕಷ್ಟವಾಗುತ್ತಿದೆ. ಆದ್ದರಿಂದ ಸಾಧ್ಯವಾದರೆ ಪ್ರಾಣಿಗಳನ್ನು ದತ್ತು ಪಡೆದರೆ ಒಂದು ವರ್ಷದ ಕಾಲ ನಿಮ್ಮ ಹೆಸರಿನಲ್ಲಿ ಅವನ್ನು ಪೋಷಣೆ ಮಾಡಲಾಗುತ್ತದೆ. ಆನೆಯನ್ನು ದತ್ತು ಪಡೆಯಲು 1.75 ಲಕ್ಷ, ಹುಲಿಗೆ 1 ಲಕ್ಷ, ಲವ್ ಬರ್ಡ್​ಗೆ 1,000 ನೀಡಬೇಕು. ಒಂದು ವೇಳೆ ನಿಮಗೆ ಪ್ರಾಣಿ ಅಥವಾ ಪಕ್ಷಿಗಳನ್ನು ದತ್ತು ಪಡೆಯುವ ಮನಸ್ಸಿದ್ದಲ್ಲಿ ಝೂ ಆಫ್ ಕರ್ನಾಟಕ ಆ್ಯಪ್​​ನಲ್ಲಿ ಪ್ರತಿ ವಿವರವನ್ನು ಪಡೆಯಬಹುದು. ಅಥವಾ ಖುದ್ದು ಮೃಗಾಲಯಕ್ಕೆ ಭೇಟಿ ನೀಡಬಹುದು. ಬನ್ನಿ ನನ್ನೊಂದಿಗೆ ಕೈ ಜೋಡಿಸಿ” ಎಂದು ದರ್ಶನ್ ಮನವಿ ಮಾಡಿದ್ಧಾರೆ.

Advertisement

ಸಿನಿಮಾ ವಿಚಾರಕ್ಕೆ ಬರುವುದಾದರೆ ಇತ್ತೀಚೆಗೆ ಬಿಡುಗಡೆಯಾದ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾದ ಕಣ್ಣು ಹೊಡೆಯೋಕೆ… ಹಾಡು 50 ಮಿಲಿಯನ್ ವ್ಯೂವ್ಸ್ ಪಡೆದು ದಾಖಲೆ ಬರೆದಿದೆ. ರಾಕ್​​ಲೈನ್ ವೆಂಕಟೇಶ್ ಜೊತೆ ಮುಂದಿನ ಸಿನಿಮಾ ಮಾಡುತ್ತಿದ್ಧಾರೆ ಎನ್ನಲಾದರೂ ಹೊಸ ಚಿತ್ರದ ಬಗ್ಗೆ ದರ್ಶನ್ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಲಾಕ್​ಡೌನ್ ಇರುವುದರಿಂದ ಸದ್ಯಕ್ಕೆ ಮೈಸೂರಿನ ತಮ್ಮ ಫಾರ್ಮ್​ಹೌಸ್​​​ನಲ್ಲಿ ಉಳಿದುಕೊಂಡಿದ್ಧಾರೆ.

-ರಕ್ಷಿತ ಕೆ.ಆರ್. ಸಾಗರ

Advertisement
Advertisement
Advertisement

About RJ News Kannada

Check Also

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

Advertisement ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, …

Leave a Reply

Your email address will not be published.

Recent Comments

No comments to show.