Breaking News

ಮತ್ತೆ ಕಿರುತೆರೆಯತ್ತ ಮರಳಿದ ಹ್ಯಾಂಡ್ ಸಮ್ ನಟ… ಯಾವ ಧಾರವಾಹಿ ಗೊತ್ತಾ?

Advertisement

ದೀಕ್ಷಿತ್ ಶೆಟ್ಟಿ ಕಿರುತೆರೆ ವೀಕ್ಷಕರಿಗೆ ತೀರಾ ಪರಿಚಿತ ಮುಖ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿಯಲ್ಲಿ ನಾಯಕ ಅರ್ಜುನ್ ಆಗಿ ನಟಿಸಿ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ದೀಕ್ಷಿತ್ ಶೆಟ್ಟಿ ಇದೀಗ ಕಿರುತೆರೆಯಲ್ಲಿ ಸೆಕೆಂಡ್ ‌ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ. ನಾಗಿಣಿ ಧಾರಾವಾಹಿ ಮುಗಿದ ಬಳಿಕ ಕಿರುತೆರೆಯಿಂದ ಬ್ರೇಕ್ ತೆಗೆದುಕೊಂಡು ಹಿರಿತೆರೆಗೆ ಹಾರಿದ ದೀಕ್ಷಿತ್ ಶೆಟ್ಟಿ ಇದೀಗ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯ ಮೂಲಕ ಕಿರುತೆರೆಗೆ ವಾಪಾಸ್ಸಾಗಿರುವ ದೀಕ್ಷಿತ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಅಲ್ಲ ಪೂರ್ಣ ಪ್ರಮಾಣದಲ್ಲಿ ನಟಿಸುತ್ತಾರಾ ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

 

Advertisement
View this post on Instagram

 

A post shared by Zee Kannada (@zeekannada)

Advertisement

ದಿಯಾ ಸಿನಿಮಾದಲ್ಲಿ ನಾಯಕ ರೋಹಿತ್ ಆಗಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಿದ ದೀಕ್ಷಿತ್ ಶೆಟ್ಟಿ ಕೆಟಿಎಂ, ಶ್ರೀಘ್ರ ಮೇವ ಕಲ್ಯಾಣ ಪ್ರಾಪ್ತಿ ರಸ್ತು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ‌. ದಿ ರೋಸ್ ವಿಲ್ಲಾ ಸಿನಿಮಾದ ಮೂಲಕ ತೆಲಗು ಸಿನಿರಂಗಕ್ಕೆ ಕಾಲಿಟ್ಟಿರುವ ದೀಕ್ಷಿತ್ ಶೆಟ್ಟಿ ಮತ್ತೊಂದು ತೆಲುಗು ಚಿತ್ರ ಮುಗ್ಗುಳು ಮೊನಗುಳ್ಲು ವಿನಲ್ಲಿ ನಟಿಸಲಿದ್ದಾರೆ. ಆ ಚಿತ್ರದಲ್ಲಿ ಮೂಕನ ಪಾತ್ರದಲ್ಲಿ ದೀಕ್ಷಿತ್ ಕಾಣಿಸಿಕೊಳ್ಳಲಿದ್ದು ಅದಕ್ಕಾಗಿ ವಿಶೇಷ ತರಬೇತಿಯನ್ನು ಕೂಡ ಅವರು ಪಡೆದುಕೊಂಡಿದ್ದಾರೆ.
– ಅಹಲ್ಯಾ

Advertisement
Advertisement
Advertisement

About RJ News Kannada

Check Also

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

Advertisement ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, …

Leave a Reply

Your email address will not be published.

Recent Comments

No comments to show.