Breaking News

ಈ ಗಿಡ ಕಾಣಿಸಿದ್ರೆ ಖಂಡಿತ ಬಿಡಬೇಡಿ..‌

Advertisement

ಇಂಗ್ಲೀಷ್ ನಲ್ಲಿ ಬ್ರೌನ್ ಬೆರ್ರಿ, ಗೋಲ್ಡನ್ ಬೆರ್ರಿ ಅಂತ ಕರೆಯುವ ರಸ್ಬೆರ್ರಿ ಹಣ್ಣು ನಿಜಕ್ಕೂ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ನಾವು ಹೆಚ್ಚಾಗಿ ಹಳ್ಳಿಗಳಲ್ಲಿ ಕಾಣಬಹುದು. ಸಾಮಾನ್ಯವಾಗಿ ಹಳ್ಳಿಗಳಲ್ಲಿನ ಮಕ್ಕಳಿಗೆ ಈ ಹಣ್ಣು ಚಿರಪರಿಚಿತ. ಯಾಕೆಂದರೆ ಶಾಲೆಗೆ ಹೋಗುವಾಗ ರಸ್ತೆಯಂಚಿನಲ್ಲಿ ಸಾಕಷ್ಟು ಬೆಳೆದಿರುವ ಈ ಹಣ್ಣನ್ನು ತಿನ್ನುತ್ತಾ ಆಟವಾಡುತ್ತಾ ಸಾಗುವುದೇ ಒಂದು ಖುಷಿ..

ಹಳ್ಳಿಗಳಲ್ಲಿ ಇದನ್ನು ಗುಮ್ಮಟೆ ಹಟ್ಟು ಅಥವಾ ಗುಪ್ಪಟೆ ಹಣ್ಣು ಅಥವಾ ಪಟಾಕಿ ಹಣ್ಣು ಎಂತಲೂ ಕರೆಯುತ್ತಾರೆ. ಈ ಹಣ್ಣು ನೋಡುವುದಕ್ಕೆ ಕೇಸರಿ ಅಥವಾ ತುಸು ಹಳದಿ ಬಣ್ಣಗಳಲ್ಲಿರುತ್ತದೆ. ಕೆಲವು ಪ್ರಾತ್ಯಗಳಲ್ಲಿ ಹಸಿರು ಬಣ್ಣದಲ್ಲಿಯೂ ಕೂಡ ಬೆಳೆಯುತ್ತದೆ. ಇದು ಮಳೆಗಾಲದಲ್ಲಿ ಮಾತ್ರ ಬೆಳೆಯುವಂಥ ಹಣ್ಣು. ಸುಮಾರು ಮೂರು ಅಡಿ ಎತ್ತರ ಬೆಳೆಯುವ ಈ ಗಿಡದ ಎಲೆಗಳು ಹಾಗೂ ಹಣ್ಣುಗಳಿಗೆ ಇಂದು ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬೆರೆ ಹಾಗೂ ಬೇಡಿಕೆಯಿದೆ.

Advertisement

ಈ ಹಣ್ಣಿನ ಹೊರಗೆ ತೆಳ್ಳನೆಯ ಪರದೆಯಿದ್ದು ಇದು ಹಣ್ಣಿನ ರಕ್ಷಾಕವಚದಂತೆ ಕಾಣಿಸುತ್ತದೆ. ಪಂಜಾಬ್ ನಲ್ಲಿ ಇದರಿಂದ ವಿವಿಧ ಖಾದ್ಯಗಳನ್ನು ತಯಾರಿಸುತ್ತಾರೆ. ಈ ಹಣ್ಣು ತುಸು ಹುಳಿ ಹಾಗೂ ಸಿಹಿ ರುಚಿಯಿಂದ ಕೂಡಿರುತ್ತದೆ.
ಔಷಧಿಯ ಗುಣಗಳನ್ನು ಹೊಂದಿರುವ ಈ ಹಣ್ಣು ಹಾಗೂ ಎಲೆಗಳಿಂದ ಆಯುರ್ವೇದದ ಹಲವು ಔಷಧಗಳನ್ನು ತಯಾರಿಸಲಾಗುತ್ತದೆ. ರಸ್ ಬೆರ್ರಿ ಹಣ್ಣಿನ ಗಿಡದ ಎಲೆಗಳಲ್ಲಿ ವಿಟಮಿನ್ ಎ ಹಾಗೂ ವಿಟಮಿನ್ ಸಿ ಸತ್ವಗಳಿದ್ದು ಲಿವರ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳೂ ಕೂಡ ಇದನ್ನು ತಿಂದು ಕಡಿಮೆಯಾಗುತ್ತದೆ.

Advertisement

ಇದರ ಎಲೆಗಳನ್ನು ಪುಡಿಮಾಡಿ ಬಟ್ಟೆಯಲ್ಲಿ ಕಟ್ಟಿ ಬಿಸಿ ಮಾಡಿ ಎದೆ ಹಾಗೂ ಹೊಟ್ಟೆಯ ಮೇಲಿಟ್ಟು ಶಾಖ ಕೊಟ್ಟರೆ ಹೊಟ್ಟೆ ನೋವು ಕೂಡಲೇ ಉಪಶಮನವಾಗುತ್ತದೆ. ಇದರ ಎಲೆಗಳಲ್ಲಿರುವ ರೋಗ ನಿರೋಧಕ ಲಕ್ಷಣಗಳಿಂದಾಗಿ ಸುಸ್ತು, ಕೀಲುನೋವುಗಳಂತ ನೋವುಗಳೂ ಸಹ ನಿವಾರಣೆಯಾಗಬಹುದು.

Advertisement
Advertisement
Advertisement

About admin

Check Also

ಕೂದಲು ಉದುರದಂತೆ ತಡೆಯಲು ಇದೊಂದನ್ನು ಬಳಸಿ ಸಾಕು..

Advertisement ಆಧುನಿಕ ಯುಗದಲ್ಲಿ ಹೆಗೆ ಎಲ್ಲಾ ತಂತ್ರಜ್ಞಾನಗಳೂ ನಮ್ಮನ್ನು ಮುನ್ನಡೆಸುತ್ತಿದ್ದಾವೆಯೋ ಹಾಗೆ ಅದಕ್ಕೆ ತಕ್ಕ ಹಾಗೆ ಬದಲಾದ ನಮ್ಮ ಜೀವನ …

Leave a Reply

Your email address will not be published.

Recent Comments

No comments to show.