Breaking News

ಮನೆಯಲ್ಲಿಯೇ ಸಿಗುವ ಇದನ್ನು ಸೇವಿಸಿದರೆ ಗ್ಯಾಸ್ಟ್ರಿಕ್ ಹತ್ತಿರಕ್ಕೂ ಸುಳಿಯೋದಿಲ್ಲ.. ಸುಲಭ ಪರಿಹಾರ ನೋಡಿ..

Advertisement

ಏನೇ ತಿಂದ್ರೂ ಆಗಲ್ಲಪ್ಪ ಗ್ಯಾಸ್ಟ್ರಿಕ್ ಆಗಿ ಬಿಡತ್ತೆ, ಹಿಳಿತೇಗು ಬರತ್ತೆ. ದಿನವೂ ಹಾಳು ಈ ಗ್ಯಾಸ್ಟ್ರಿಕ್ ನಿಂದ .. ಹೀಗೆ ಹೊಟ್ಟೆಯಲ್ಲಿನ ಈ ಗ್ಯಾಸ್ಟ್ರಿಕ್ ಅಥವಾ ಎಸಿಡಿಟಿಯ ಸಮಸ್ಯೆಯಿಂದ ಬಳಲುವವರು ಹೇಳುತ್ತಲೇ ಇರುತ್ತಾರೆ. ಯಾವುದೇ ಔಷಧವನ್ನು ಸೇವಿಸಿದರೂ ಆ ಕ್ಷಣಕ್ಕೆ ಸಮಾಧಾನ ನೀಡಬಹುದಲ್ಲದೇ ಶಾಶ್ವತ ಪರಿಹಾರವನ್ನು ನೀಡುವುದಿಲ್ಲ. ಹಾಗಾಗಿ ನಾವು ಗ್ಯಾಸ್ಟ್ರಿಕ್ ನ್ನು ಹೋಗಲಾಡಿಸುವ ಒಂದು ಮನೆಮದ್ದನ್ನು ನಿಮಗಿಂದು ತಿಳಿಸುತ್ತೇವೆ.

ಗ್ಯಾಸ್ಟ್ರಿಕ್ ನಿಂದ ಹುಳಿ ತೇಗು, ಹೊಟ್ಟೆಉರಿ, ಹೊಟ್ಟೆ ಭಾರ, ತಲೆನೋವು, ಹೊಟ್ಟೆನೋವು, ಎದೆಉರಿ, ಕಿಬ್ಬೊಟ್ಟೆ ನೋವು ಹೀಗೆ ಅನೇಕ ತೊಂದರೆಗಳು ಉಂಟಾಗುತ್ತವೆ. ಇದನ್ನು ನಿರ್ಲಕ್ಷ ಮಾಡಿದಷ್ಟು ಉಲ್ಭಣವಾಗುತ್ತಾ ಹೋಗುತ್ತದೆ. ಗ್ಯಾಸ್ಟ್ರಿಕ್ ಹೆಚ್ಚಾಗಿ ಸಂಭವಿಸುವುದು ನಮ್ಮ ಆಹಾರ ಪದ್ಧತಿಯಿಂದ. ಅಧಿಕ ಮನಾಲೆಯುಕ್ತ ಪದಾರ್ಧಗಳನ್ನು ಸೇವಿಸುವುದು, ಸರಿಯಾದ ಸಮಯಕ್ಕೆ ಆಹಾದವನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳದೇ ಇರುವುದು, ಕೆಲಸದ ಒತ್ತಡದಲ್ಲಿ ಆಹಾರವನ್ನು ಸೇವಿಸುವುದನ್ನೇ ಬಿಡುವುದು ಅಥವಾ ಮದ್ಯಪಾನ ಧೂಮಪಾನ ಮಾಡುವುದು, ಅತಿಯಾದ ಕಾಫಿ ಟೀ ಸೇವನೆ ಹೀಗೆ ಹಲವಾರು ಕಾರಣಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಮ್ಮಲ್ಲಿ ಕಾಣಿಸಿಕೊಳ್ಳುತ್ತದೆ.

Advertisement

ಗ್ಯಾಸ್ಟ್ರಿಕ್ ನಿವಾರಕ ಪಾನೀಯ ತಯಾರಿಸಲು ಬೇಕಾಗುವ ಸಾಮಗ್ರಿಗಳು: ಅಜ್ವಾನ / ಓಮ, ಜೀರಿಗೆ ಪುಡಿ, ಶುಂಠಿ, ಚಕ್ಕೆ, ರಾಕ್ ಸಾಲ್ಟ್ (ಸೈಂಧವ ಲವಣ)
ಮಾಡುವ ವಿಧಾನ: ಒಂದು ಲೋಟ ನೀರನ್ನು ಕುದಿಯಲು ಇಡಿ. ಇದಕ್ಕೆ ಅಜ್ವಾನ ಮತ್ತು ಜೀರಿಗೆ ಎರಡನ್ನು ಪುಡಿ ಮಾಡಿಕೊಂಡು ಒಂದು ಚಮಚದಷ್ಟು ಪುಡಿಯನ್ನು ಕುದಿಯುವ ನೀರಿಗೆ ಸೇರಿಸಿ. ಇದಕ್ಕೆ ಅರ್ಧ ಇಂಚಿನಷ್ಟು ಜಜ್ಜಿಕೊಂಡ ಶುಂಠಿ ಹಾಗೂ ಒಂದು ಚಕ್ಕೆ ತುಂಡನ್ನು ಹಾಕಿ. ಇದನ್ನು ಚೆನ್ನಾಗಿ ಕುದಿಸಿ. ಇದು ಚೆನ್ನಾಗಿ ಕುದಿಸಿದ ನಂತರ ಸೋಸಿ ರಾಕ್ ಸಾಲ್ಟ್ ನ್ನು ಸೇರಿಸಿ ಕುಡಿಯಿರಿ.

Advertisement

ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಆಹಾರ ಸೇವನೆಯ ನಂತರ ಕನಿಷ್ಠ ಮೂರು ದಿನಗಳವರೆಗೆ ಈ ಕಷಾಯವನ್ನು ಮಾಡಿ ಕುಡಿಯುವುದರಿಂದ ಗ್ರಾಸ್ಟ್ರಿಕ್ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಇದರ ಜೊತೆಗೆ ಸರಿಯಾದ ಆಹಾರ ಕ್ರಮ ಹಾಗೂ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಂಡು ಆರೋಗ್ಯವಂತ ಜೀವನವನ್ನು ನೀವು ನಡೆಸಬಹುದು.

Advertisement
Advertisement
Advertisement

About admin

Check Also

ಈ ಗಿಡ ಕಾಣಿಸಿದ್ರೆ ಖಂಡಿತ ಬಿಡಬೇಡಿ..‌

Advertisement ಇಂಗ್ಲೀಷ್ ನಲ್ಲಿ ಬ್ರೌನ್ ಬೆರ್ರಿ, ಗೋಲ್ಡನ್ ಬೆರ್ರಿ ಅಂತ ಕರೆಯುವ ರಸ್ಬೆರ್ರಿ ಹಣ್ಣು ನಿಜಕ್ಕೂ ಸಾಕಷ್ಟು ಔಷಧೀಯ ಗುಣಗಳನ್ನು …

Leave a Reply

Your email address will not be published.

Recent Comments

No comments to show.