Breaking News

‘ಮಳೆಯಲಿ ಜೊತೆಯಲಿ’ ನಟಿ ವಿ’ರುದ್ಧ ಎಫ್​​ಐಆರ್​​​​​​​​, ಅ’ರೆಸ್ಟ್ ಮಾಡಿ ಎನ್ನುತ್ತಿರುವ ನೆಟಿಜನ್ಸ್​​​​…ಯುವಿಕಾ ಮಾಡಿದ ತಪ್ಪೇನು…?

Advertisement

ಕೆಲವೊಮ್ಮೆ ನಮಗೆ ತಿಳಿದೋ, ತಿಳಿಯದೆಯೋ ತಪ್ಪುಗಳಾಗಿಬಿಡುತ್ತವೆ. ಆ ತಪ್ಪಿನಿಂದ ಮತ್ತೊಬ್ಬರಿಗೆ ತೊಂದರೆಯಾದಾಗಲೇ ತಾವು ಮಾಡಿದ ತಪ್ಪು ಎಷ್ಟು ದೊಡ್ಡದು ಎಂಬುದು ಅರ್ಥವಾಗುತ್ತದೆ. ಕೆಲವರು ಉದ್ದೇಶಪೂರ್ವಕವಾಗಿ ವಿವಾದಾತ್ಮಕ ಹೇಳಿಕೆ ನೀಡಿ ಸದಾ ಕೇಂದ್ರ ಬಿಂದುವಾಗಿರಲು ಯತ್ನಿಸುತ್ತಾರೆ. ಮತ್ತೆ ಕೆಲವರು ಬಾಯ್ತಪ್ಪಿನಿಂದ ಮಾಡಿದ ತಪ್ಪಿಗೆ ಶಿ’ಕ್ಷೆ ಅನುಭವಿಸುತ್ತಾರೆ. ಇದೀಗ ಯುವಿಕಾ ಚೌಧರಿ ವಿಚಾರದಲ್ಲಿ ಆಗಿರುವುದು ಕೂಡಾ ಇದೆ. ನೀ ಸನಿಹಕೆ ಬಂದರೆ ಹೃದಯದ ಗತಿ ಏನು…..’ಮಳೆಯಲಿ ಜೊತೆಯಲಿ’ ಸಿನಿಮಾದ ಈ ಸುಂದರವಾದ ಹಾಡು ನಿಮಗೆ ಚೆನ್ನಾಗಿ ನೆನಪಿರುತ್ತದೆ. ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಅಭಿನಯಿಸಿದ್ದ ನಟಿಯೇ ಯುವಿಕಾ. ಈ ಸಿನಿಮಾಗಾಗಿ ಈ ಚೆಲುವೆಯನ್ನು ಬಾಲಿವುಡ್​​​ನಿಂದ ಕರೆತರಲಾಗಿತ್ತು. ಇದೀಗ ಈ ನಟಿ ಜಾ’ತಿನಿಂ’ದನೆ ಆರೋಪ ಎದುರಿಸುತ್ತಿದ್ದಾರೆ. ಆಕೆಯ ವಿರುದ್ಧ ಎ’ಫ್​​’ಐ’ಆರ್ ದಾಖಲಾಗಿದ್ದು, ಯುವಿಕಾರನ್ನು ಬಂ’ಧಿ’ಸಿ ಎಂದು ಒತ್ತಾಯಿಸಲಾಗುತ್ತಿದೆ.

Advertisement

ಯುವಿಕಾ ಚೌಧರಿ ವಿವಾಹಿತೆ. ಬಾಲಿವುಡ್ ನಟ, ಮಾಡೆಲ್ ಪ್ರಿನ್ಸ್ ನರುಲಾ ಅವರನ್ನು 2 ವರ್ಷಗಳ ಹಿಂದೆ ಮದುವೆಯಾದ ಯುವಿಕಾ ಪತಿಯೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ. ಯುವಿಕಾ ಯೂಟ್ಯೂಬ್​​ ಚಾನೆಲ್​​​​​ ಹೊಂದಿದ್ದು ವ್ಲಾಗ್ಸ್​​​​​​​​​​​ ಮಾಡುತ್ತಿರುತ್ತಾರೆ. ಇತ್ತೀಚೆಗೆ ಮಾಡಿದ್ದ ವ್ಲಾಗ್​ ಒಂದರಲ್ಲಿ ಪತಿ ನರುಲಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮೇಕಪ್ ಮಾಡಿಕೊಳ್ಳುತ್ತಿದ್ದಾಗ ಆತನೊಂದಿಗೆ ಮಾತನಾಡುವ ಭರದಲ್ಲಿ ಯುವಿಕಾ ಸಮುದಾಯವೊಂದನ್ನು ಆತನಿಗೆ ಹೋಲಿಗೆ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಿರ್ದಿಷ್ಟ ಸ’ಮು’ದಾ’ಯದವರ ಕ’ಣ್ಣು ಕೆಂ’ಪಗಾಗಿತ್ತು. ಆಗಲೇ ಯುವಿಕಾಗೆ ತಾನು ಎಷ್ಟು ದೊಡ್ಡ ತ’ಪ್ಪು ಮಾಡಿದ್ದೇನೆ ಎಂದು ತಿಳಿದದ್ದು.

ಯುವಿಕಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮತ್ತೊಂದು ವಿಡಿಯೋ ಮಾಡಿದ ಯುವಿಕಾ ಕ್ಷಮೆ ಯಾಚಿಸಿದ್ದರು. ”ನಿಜವಾಗಿಯೂ ನಾನು ಬಳಸಿದ ಪದದ ಅರ್ಥ ನನಗೆ ತಿಳಿದಿರಲಿಲ್ಲ. ಯಾರಿಗೂ ನೋವು ಮಾಡುವ ಉದ್ದೇಶ ನನಗೆ ಇಲ್ಲ. ಇದು ತಿಳಿಯದೆ ಆಗಿರುವ ತ’ಪ್ಪು, ದಯವಿಟ್ಟು ಕ್ಷ’ಮಿ’ಸಿ” ಎಂದು ಕೈಮುಗಿದು ಕ್ಷ’ಮೆ ಯಾಚಿಸಿದ್ದರು. ಇಷ್ಟಾದರೂ ಆ ಸ’ಮು’ದಾಯದವರು ಸುಮ್ಮನಾಗಿಲ್ಲ, ಯುವಿಕಾ ವಿರುದ್ಧ ಕೆಲವರು ದೂ’ರು ನೀಡಿದ್ದು ಈಗ ಆಕೆ ವಿರು’ದ್ಧ ಹರಿಯಾಣ ಪೊ’ಲೀ’ಸ್ ಠಾ’ಣೆಯೊಂದರಲ್ಲಿ ಐಫ್​​’ಐ’ಆರ್​​ ದಾಖಲಾಗಿದೆ. ಟ್ವಿಟ್ಟರ್​​ನಲ್ಲಿ #ArrestYuvikaChaudhary ಹ್ಯಾಶ್​ ಟ್ಯಾಗ್​ ಟ್ರೆಂಡ್​ ಆಗಿತ್ತು.

Advertisement

 

View this post on Instagram

 

Advertisement

A post shared by Yuvikachaudhary (@yuvikachaudhary)

Advertisement

ಕರಿಯರ್​​​​​ ವಿಚಾರಕ್ಕೆ ಬರುವುದಾದರೆ ಯುವಿಕಾ ‘ಫಿರ್ ಭಿ ದಿಲ್ ಹೈ ಹಿಂದುಸ್ತಾನಿ’ ಚಿತ್ರದ ಮೂಲಕ ಬಾಲಿವುಡ್​ಗೆ ಬಂದರು. ಕನ್ನಡ, ಪಂಜಾಬಿ, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಈಕೆ ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಕೆಲವೊಂದು ಮ್ಯೂಸಿಕ್ ವಿಡಿಯೋಗಳಲ್ಲಿ ಕೂಡಾ ಯುವಿಕಾ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್​​ ಬಾಸ್ ಸೀಸನ್ 9 ರಲ್ಲಿ ಯುವಿಕಾ ಸ್ಪರ್ಧಿಯಾಗಿದ್ದರು. ಸಹಸ್ಪರ್ಧಿಯಾಗಿದ್ದ ಪ್ರಿನ್ಸ್ ನರುಲಾರನ್ನು ಪ್ರೀತಿಸಿ 2018 ರಲ್ಲಿ ವಿವಾಹವಾದರು. ಇದೀಗ ಯುವಿಕಾ ಸಂಕಷ್ಟಕ್ಕೆ ಸಿಲುಕಿದ್ದು ಈ ಪ್ರಕರಣ ಎಲ್ಲಿಗೆ ಬಂದು ತಲುಪಲಿದೆ ಎಂಬುದನ್ನು ನೋಡಬೇಕು.

-ರಕ್ಷಿತ ಕೆ.ಆರ್. ಸಾಗರ

Advertisement
Advertisement

About RJ News Kannada

Check Also

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

Advertisement ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, …

Leave a Reply

Your email address will not be published.

Recent Comments

No comments to show.